Sharada Sharan Navratri Chandi Havan Sampanna

ಗಂಗಾವತಿ: ಗಂಗಾವತಿ. ನಗರದ ಶಂಕರ್ ಮಠದ ಶ್ರೀ ಶಾರದಾ ದೇಗುಲದಲ್ಲಿ ಬುಧವಾರ ರಂದು ನವಚಂಡಿ ಹವನ ಸಂಪನ್ನ ಗೊಂಡಿತು.
ವೇದಮೂರ್ತಿ ಮಹೇಶ್ ಭಟ್ ಜೋಶಿ ಹಾಗೂ ತಂಡದವರಿಂದ ಸೇವಾಕರ್ತರಿಗೆ ಮಹಾಸಂಕಲ್ಪ. ಹಾಗೂ ವೈದ್ಯ ನೇತೃತ್ವದಲ್ಲಿ ಪೂರ್ಣಾಹುತಿಯನ್ನು ಸಂಪನ್ನಗೊಳಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ೭೫ನೇ ವರ್ಧಂತಿ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ನವಚಂಡಿ ಹವನವನ್ನು ಆಯೋಜಿಸಲಾಗಿದ್ದು, ಇದರೊಂದಿಗೆ ದಂಪತಿ ಪೂಜೆ ಹಾಗೂ ಕನ್ನಿಕಾ ಪೂಜೆಯನ್ನು ಭಕ್ತರಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ವಿದ್ಯಾ ತೀರ್ಥ ನಾರ್ವೆ ದಂಪತಿಗಳು, ಪವನ್ ಕುಮಾರ್, ಕಾರ್ತಿಕ್ ದಂಪತಿಗಳು ನೇತೃತ್ವ ವಹಿಸಿದ್ದರು.
ಸುಮಾರು ೬೦೦ಕ್ಕೂ ಅಧಿಕ ಭಕ್ತಾದಿಗಳು ವಿವಿಧ ಸಮಾಜದ ಮುಖಂಡರು ಅಮ್ಮನವರ ದರ್ಶನ ಪಡೆದು ಪುನೀತರಾದರು. ಬಳಿಕ ಅನ್ನ ಸಂತರ್ಪಣೆ ನಡೆಸಲಾಯಿತು.