Pharmacists should follow the profession of religion: Sanganna Karadi
ಗಂಗಾವತಿ: ಎಲ್ಲಾ ಫ಼ಾರ್ಮಸಿಸ್ಟಗಳು ವೃತ್ತಿ ಧರ್ಮ ಪಾಲಿಸಿ,ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಸಂಗಣ್ಣ ಕರಡಿ ಕರೆ ನೀಡಿದರು.ನಗರದ ಔಷಧೀಯ ಭವನದಲ್ಲಿ ಸೋಮವಾರ ಹಮ್ಮಿ ಕೊಳ್ಳಲಾಗಿದ್ದ ‘ವರ್ಲ್ಡ್ ಫ಼ಾರ್ಮಸಿಸ್ಟ ಡೇ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಔಷಧ ವ್ಯಾಪಾರಿಗಳ ಮೇಲೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಇದೆ.ಅವರ ಜೀವನವೇ ಅವರ ಬದುಕಾಗಿದೆ.ಕಾಯಕವೇ ಕೈಲಾಸ ಎನ್ನುವ ರೀತಿಯಲ್ಲಿ ಅವರು ಕೆಲಸಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಬೆಳೆಯುತ್ತಿರುವ ಗಂಗಾವತಿ ನಗರಕ್ಕೆ ಬೈ ಪಾಸ್ ಮತ್ತು ಮೆಡಿಕಲ್ ಕಾಲೇಜ್ ನಿರ್ಮಾಣದ ಅವಶ್ಯಕತೆ ಇದೆ, ಅಶೋಕಸ್ವಾಮಿ ಹೇರೂರ ಅವರಂತಹ ಕ್ರೀಯಾಶೀಲರು ಈ ಬಗ್ಗೆ ಸರಕಾರಕ್ಕೆ ಒತ್ತಾಯಿಸಬೇಕೆಂದರು.ಗಂಗಾವತಿ-ದರೋಜಿ ನೂತನ ರೇಲ್ವೆ ಲೈನ್ ಸರ್ವೇ ಆಗಲು ತಮ್ಮ ಮೇಲೆ ತುಂಬಾ ಒತ್ತಡ ಹಾಕಿದ್ದರು ಎಂದು ಅವರು ಹೇಳಿದರು.
ಗಂಗಾವತಿ ವಿಭಾಗದ ಉಪ ಪೋಲಿಸ್ ವರಿಷ್ಠಾಧಿಕಾರಿಯಾದ ಸಿದ್ದಲಿಂಗಪ್ಪ ಗೌಡ ಅವರು ಮಾತನಾಡಿ ವೈಧ್ಯರ ಸಲಹಾ ಚೀಟಿ ಇಲ್ಲದೆ,ಔಷಧ ಮಾರಾಟ ಮಾಡಬೇಡಿ,ನಿದ್ರೆ ಅಥವಾ ಮಂಪರು ಬರುವ ಔಷಧಗಳ ಮಾರಾಟದಲ್ಲಿ ಜಾಗ್ರತೆವಹಿಸಲು ಕಿವಿ ಮಾತು ಹೇಳಿದರು.ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಅವರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಔಷಧ ವ್ಯಾಪಾರಿಗಳನ್ನು ಮಾತ್ರ ಪಿಡಿಸದೆ,ಜಾಗೃತ ದಳದ ಅಧಿಕಾರಿಗಳೊಂದಿಗೆ ಮತ್ತು ಪೋಲೀಸರ ಸಹಾಯದೊಂದಿಗೆ ಪರವಾನಿಗೆ ರಹಿತ ಔಷಧ ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು, ವೇದಿಕೆಯಲ್ಲಿ ಉಪಸ್ಥಿತರಿದ್ದ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರನ್ನು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಒತ್ತಾಯಿಸಿದರು.ಔಷಧಗಳನ್ನು ‘ಡ್ರಗ್ಸ್’ ಎಂದು ಕರೆಯಲಾಗುತ್ತಿದೆ,ಔಷಧಗಳು ಡ್ರಗ್ಸ್ ಗಳಲ್ಲ ‘ಮೆಡಿಸಿನ್’ ಗಳು ಎಂದವರು ವಿವರಿಸಿದರು. ಕಾಯ್ದೆಯಲ್ಲಿ ಮೆಡಿಕಲ್ ಸ್ಟೊರ್ಸ್ ಗಳನ್ನು ಕೆಮಿಸ್ಟ ಮತ್ತು ಡ್ರಗ್ಗಿಸ್ಟ್ಸ್ ಎಂದು ಇತ್ತು, ಈಗ ಅದನ್ನು ‘ಫ಼ಾರ್ಮಸಿ’ ಎಂದು ಬದಲಾಯಿಸಲಾಗಿದೆ ಎಂದು ಹೇಳಿದರು.
ವಾಣಿಜ್ಯೋದ್ಯಮಿಗಳಾದ ವಿರುಪಾಕ್ಷಪ್ಪ ಸಿಂಗನಾಳ, ಮನೋಹರಗೌಡ ಹೇರೂರ,ನಂದಿನಿ ಮುದಗಲ್,
ನ್ಯಾಯವಾದಿಗಳಾದ ಗಿರೇಗೌಡ ಹೊಸ್ಕೇರಾ, ತಿಪ್ಪೆರುದ್ರಸ್ವಾಮಿ, ಸಂಧ್ಯಾ ಪಾರ್ವತಿ ಹೇರೂರ,ಪ್ರಥಮ ದರ್ಜೆ ಗುತ್ತಿಗೆದಾರರಾದ ವೀರಯ್ಯ ಹಿರೇಮಠ ಹೇರೂರ, ನಗರಸಭಾ ಸದಸ್ಯ ವಾಸುದೇವ ನವಲಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಮಸ್ವಾಮಿ ಸಂಗಾಪೂರ ಉಪಸ್ಥಿತರಿದ್ದರು.
ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಅವರನ್ನು ಈ ಸಂಧರ್ಭದಲ್ಲಿ ಗಣ್ಯರು
ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಎಚ್.ಎಮ್. ವಿರುಪಾಕ್ಷಯ್ಯ, ಪಾರ್ವತಿ ಸಿದ್ದರಾಮಯ್ಯ ಸೇರಿದಂತೆ ಹಲವು ಔಷಧ ವ್ಯಾಪಾರಿಗಳು ಭಾಗವಹಿಸಿದ್ದರು. ನೂತನ ಫ಼ಾರ್ಮಸಿಸ್ಟಗಳನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ,ಏಪ್ರಾನ್ ಗಳನ್ನು ಉಚಿತವಾಗಿ ನೀಡಲಾಯಿತು.ಅಖಿಲ ಭಾರತ ಮಟ್ಟದಲ್ಲಿ 735 ನೇ ರ್ಯಾಂಕ್ ಪಡೆದ ಡಾ.ಬಿ.ಲೋಹಿತ ಲಿಂಗಣ್ಣ ಮಲ್ಲಾಪೂರ ಅವರನ್ನು ಸನ್ಮಾನಿಸಲಾಯಿತು.