MLA Paranna Munavalli participated in the talent award ceremony for the students who scored the highest marks by the Dalit Sena Committee.
ಗಂಗಾವತಿ :ಇಂದು ದಿ, 30 /9/ 2025 ರಂದು ನಗರದ ಶ್ರೀ ಕೃಷ್ಣ ವೆಜ್ ಫಂಕ್ಷನ್ ಹಾಲ್ ನಲ್ಲಿ ದಲಿತ ಸೇನೆ ಕೊಪ್ಪಳ ಜಿಲ್ಲಾ ಸಮಿತ ವತಿಯಿಂದ ಸಂವಿಧಾನ ಶಿಲ್ಪಿ ಡಾ, ಬಿ. ಆರ್ ಅಂಬೇಡ್ಕರ್ ಹಾಗೂ ಡಾ, ಬಾಬು ಜಗಜೀವನ್ ರಾವ್ ಜಯಂತಿಅಂಗವಾಗಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿ ಅವರು ಭಾಗವಹಿಸಿ ಮಾತನಾಡಿ ಸಮಾಜದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುರುತಿಸಿ ಗೌರವಿಸುವದು ಒಳ್ಳೆಯ ಕೆಲಸ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರಾದ ಯು. ಲಕ್ಷ್ಮಣ್, ಸಣ್ಣ ಹನುಮಂತಪ್ಪ, ಗಂಗಣ್ಣ ಸಿದ್ದಾಪುರ, ಹುಲುಗಪ್ಪ ಕೊಜ್ಜಿ, ದುರ್ಗೇಶ್ ಅಕ್ಕಿ ರೊಟ್ಟಿ, ಶರಣು ಸಿದ್ದಾಪುರ, ಕೃಷ್ಣ ಅಕ್ಕಿ ರೊಟ್ಟಿ, ಯು ಶ್ರೀನಿವಾಸ್, ಯಮನೂರಪ್ಪ ಗೋನಾಳ್, ದುರ್ಗಪ್ಪ, ಹನುಮಂತಪ್ಪ ಹೊಸಪೇಟೆ, ದುರ್ಗಪ್ಪ ದೊಡ್ಮನಿ, ರಾಘವೇಂದ್ರ, ಯೋಗೇಶ್* ಇನ್ನೂ ಮುಂತಾದ ಸಮಾಜ ಬಾಂಧವರು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು .