Demand to intensify the search for missing boy Mohammed Azan and provide compensation to his family: Vijay Doreraju
ಗಂಗಾವತಿ: ನಗರದಲ್ಲಿ ಕಾಣೆಯಾದ ಮೊಹಮ್ಮದ್ ಅಝಾನ್ ಪ್ರಕರಣದಲ್ಲಿ ಭಾರೀ ಆಡಳಿತಾತ್ಮಕ ನಿರ್ಲಕ್ಷö್ಯ ಮತ್ತು ರಾಜಕೀಯ ನಿರಾಸಕ್ತಿ ತೋರಿಸಲಾಗುತ್ತಿದೆ. ೪ ವರ್ಷದ ಬಾಲಕ ಮೊಹಮ್ಮದ್ ಅಝಾನ್ ಗಂಗಾವತಿ ಮೇಹಬೂಬ್ ನಗರದ ಕಾಲೊನಿಯಿಂದ ಸೆ.೨೭ ಶನಿವಾರ ಬೆಳಿಗ್ಗೆ ೧೦ ಗಂಟೆಯಿಂದ ಕಾಣೆಯಾಗಿದ್ದಾರೆ. ಹತ್ತಿರದ ಅಂಗಡಿಯ ಸಿಸಿಟಿವಿ ಮುಖಾಂತರ ಆತ ಆ ದಿನ ಬೆಳಿಗ್ಗೆ ಸುಮಾರು ೧೦.೦೦ ಗಂಟೆಗೆ ಮನೆಯ ಹತ್ತಿರದ ತುಂಬಿ ಹರಿಯುತ್ತಿರುವ ಚರಂಡಿಗೆ ಸೇತುವೆಯಿಂದ ಬಿದ್ದಿರುವುದು ಗೊತ್ತಾಗಿದೆ. ಆಗಿನಿಂದಲೂ ಸ್ಥಳೀಯ ಯುವಕರು, ಕುಟುಂಬದವರು ಆ ಚರಂಡಿಯಲ್ಲಿ ಬಾಲಕ ಅಝಾನ್‌ನನ್ನು ಹುಡುಕಾಡುತ್ತಿದ್ದಾರೆ. ಆದರೆ ಯಾವುದೇ ಸುಳಿವು ಸಿಗುತ್ತಿಲ್ಲ ಎಂದು ಸಿ.ಪಿ.ಐ(ಎಂ.ಎಲ್) ಲಿಬರೇಷನ್ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದ ವಿಜಯ್ ದೊರೆರಾಜು ಕಳವಳ ವ್ಯಕ್ತಪಡಿಸಿದರು.
ಅವರು ಸೆ.೩೦ ರಂದು ಕಾಣೆಯಾದ ಬಾಲಕನ ಪತ್ತೆಕಾರ್ಯ ತೀವ್ರಗೊಳಿಸಲು ಹಾಗೂ ಅವರ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯಿಸಿ, ಗಂಗಾವತಿ ಉಪತಹಶೀಲ್ದಾರ ಮಹಾಂತಗೌಡ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ಗಂಗಾವತಿ ನಗರಸಭೆ ಮತ್ತು ಜಿಲ್ಲಾ ಆಡಳಿತ ಕೊನೆಗೂ ಕಾರ್ಯಾಚರಣೆಗೆ ಇಳಿದಿವೆ, ಏರಿಯಾ ಕೌನ್ಸಿಲರ್ ಒಮ್ಮೆ ಮಾತ್ರ ಬಂದು ಹೋಗಿದ್ದಾರೆ. ಕೊಪ್ಪಳ ಜಿಲ್ಲಾಕಾರಿಗಳು, ಸ್ಥಳೀಯ ಶಾಸಕರು, ಸಂಸಾದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇನ್ನೂ ಘಟನೆ ನಡೆದ ಸ್ಥಳಕ್ಕೆ ಬಾರದೆ ಬೇಜವಾಬ್ದಾರಿ ತೋರಿಸುತ್ತಿರುವುದನ್ನು ನಮ್ಮ ಸಿಪಿಐಎಂಎಲ್ ಲಿಬರೇಶನ್ ಪಕ್ಷ ಬಲವಾಗಿ ಖಂಡಿಸುತ್ತದೆ.
ಬಾಲಕ ಅಝನ್ ಕಾಣೆಯಾಗಿ ನಾಲ್ಕು ದಿನಗಳು ಕಳೆದಿವೆ, ಹುಡುಕಾಟದಲ್ಲಿ ಬಾಲಕನ ಯಾವುದೇ ಸುಳಿವು ಸಿಗದೆ ಇರುವುದರಿಂದ ಪ್ರತಿ ಕ್ಷಣ ಕಳೆದಂತೆ ಭರವಸೆ ಕಡಿಮೆಯಾಗುತ್ತಿದೆ. ಶನಿವಾರ ಬೆಳಿಗ್ಗೆ ೯.೧೫ಕ್ಕೆ, ಎಂದಿನAತೆ ಬಾಲಕ ಅಝಾನ್ ಅವರ ತಾಯಿ ಸಲ್ಮಾರವರು ಆತನಿಗೆ ಉಪಹಾರವನ್ನು ತಯಾರಿಸಿ, ತನ್ನ ತಂದೆ-ತಾಯಿಯವರ ಬಳಿ ಬಿಟ್ಟು ಕೆಲಸಕ್ಕೆ ಹೋದರು. ಎಂದಿನAತೆ ಅಝಾನ್ ಬೇರೆ ಮಕ್ಕಳ ಜೊತೆ ಆಟವಾಡುತ್ತಿದ್ದ. ಆದರೆ ಸ್ವಲ್ಪ ಸಮಯದ ನಂತರ ಅವರು ಅಝನ್ ಕಾಣೆಯಾಗಿದ್ದು ನೋಡಿ ತಾಯಿ ಸಲ್ಮಾಗೆ ವಿಷಯ ತಿಳಿಸಿದರು. ಅವರು ತಕ್ಷಣವೇ ಕೆಲಸದಿಂದ ಹಿಂದಿರುಗಿ ಬಂದು ತನ್ನ ಕುಟುಂಬ, ನೆರೆಹೊರೆಯವರು ಹಾಗೂ ಸ್ಥಳೀಯ ಯುವಕರ ಜೊತೆಗೂಡಿ ಅಝಾನ್‌ಗಾಗಿ ಹುಡುಕಾಟ ಪ್ರಾರಂಭಿಸಿದಳು. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ. ಪೊಲೀಸರು ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯವನ್ನು ಪಡೆದು ಪರಿಶೀಲಿಸಲಾಗಿ, ಅದರಲ್ಲಿ ಅಝಾನ್ ಚರಂಡಿಗೆ ಬಿದ್ದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದು ಕಂಡುಬAದಿದೆ. ಕುಟುಂಬದವರು ಹಾಗೂ ಸ್ಥಳೀಯ ಯುವಕರು ತಕ್ಷಣವೇ ರಾತ್ರಿ ಹೊತ್ತೂ ಟಾರ್ಚ್ಲೈಟ್‌ಗಳು ಹಾಗೂ ತಮ್ಮ ಬಳಿ ಇದ್ದ ಸಾಧನಗಳೊಂದಿಗೆ ಚರಂಡಿಯಲ್ಲಿ ಅಝಾನ್‌ಗಾಗಿ ಹುಡುಕಾಟ ನಡೆಸಿದರು. ಆ ಸಂಜೆ ಏರಿಯಾ ಕೌನ್ಸಿಲರ್ ಒಮ್ಮೆ ಬಂದು ಹೋಗಿದ್ದು, ಇಂದಿನವರೆಗೂ ಮರಳಿ ಬಂದಿಲ್ಲ.
ಗಂಗಾವತಿ ನಗರಸಭೆ ಮತ್ತು ಜಿಲ್ಲಾಡಳಿತ ಕೂಡ ಕಾರ್ಯಾಚರಣೆಗೆ ಇಳಿದು, ಅನೇಗುಂದಿಯಿAದ ತೆಪ್ಪ (ದೋಣಿ) ಕರೆಸಲಾಗಿದ್ದು, ಅಗ್ನಿಶಾಮಕ ದಳವನ್ನೂ ಸಹ ತರಿಸಲಾಗಿದೆ. ನಿನ್ನೆ ಹುಡುಕಾಟವನ್ನು ಚರಂಡಿಯ ಇನ್ನಷ್ಟು ಕೆಳಭಾಗದಲ್ಲಿ ಮುಂದುವರೆಸಲಾಗುತ್ತಿದೆ. ತಮ್ಮ ಮಗ ಹಿಂತಿರುಗುತ್ತಾನೆAದು ಆಶಿಸುತ್ತಾ ಅವರು ಮನೆಯ ಹೊರಗೆ ಅಸಹನೀಯವಾಗಿ ಅಳುತ್ತಿದ್ದಾಳೆ. ಅವರ ಗೆಳತಿಯರು, ಅಕ್ಕ, ತಂಗಿ, ಸುತ್ತ ನೆರೆಹೊರೆಯ ಮಹಿಳೆಯರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. “ನಾನು ಕೆಲಸ ಮಾಡಿದ್ದು ಅಝಾನ್‌ನನ್ನು ನೋಡಿಕೊಳ್ಳಲು, ಅವನಿಗೆ ಔಷಧಿ ತಂದುಕೊಡಲು. ಆದರೆ ಈಗ ನನ್ನ ಮಗ ಹೋದ. ನನಗೆ ಬದುಕುವುದಕ್ಕೆ ಏನು ಉಳಿದಿದೆ?” ಎಂದು ಸಲ್ಮಾರವರು ಅಳುತ್ತಾ ಕೇಳುತ್ತಿದ್ದಾಳೆ. ಸಲ್ಮಾಗೆ ಕೆಲಸ ಮಾಡದೆ ಇರುವುದು ಸಾಧ್ಯವಾಗಲಿಲ್ಲ. ಅವರ ಗಂಡ ಮನೆಯ ಯಾವುದೇ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಿಲ್ಲ. ಸಲ್ಮಾರವರು ದಿನನಿತ್ಯದ ಖರ್ಚು, ಅಝಾನ್‌ನ ವೈದ್ಯಕೀಯ ವೆಚ್ಚ ಮತ್ತು ಗಂಡನು ವಿವಿಧ ಸ್ವಯಂಸಹಾಯ ಗುಂಪುಗಳಿಗೆ ಬಾಕಿಯಾಗಿರುವ ೨ ಲಕ್ಷಕ್ಕೂ ಹೆಚ್ಚು ಸಾಲ ತೀರಿಸುವ ಹೊಣೆ ಹೊತ್ತಿದ್ದಾರೆ.
ಅಝಾನ್ ತನ್ನ ತಾಯಂದಿರ ಏಕೈಕ ಮಗ, ಹಲವಾರು ಪ್ರಾರ್ಥನೆಗಳ ನಂತರ ಅವರಿಗೆ ದೊರೆತ ಮಗು. ಸ್ವಲ್ಪ ಅಸ್ವಸ್ಥ ಇರುವದರಿಂದ ಅಝಾನ್‌ಗೆ ಔಷಧಿ ಅಗತ್ಯವಿದ್ದು, ಅಝಾನ್‌ನ ತಾಯಿ ಸಲ್ಮಾರವರು, ಇನ್ನೂ ಯುವತಿಯೇ ಆಗಿದ್ದರೂ, ಮನೆಯ ಏಕೈಕ ಸಂಪಾದಕರು. ಸ್ಥಳೀಯ ಚಿಕ್ಕ ಉದ್ಯೋಗಾಲಯದಲ್ಲಿ ಚಕ್ಕಲಿ ತಯಾರಿಸುವ ಕೆಲಸ ಮಾಡುತ್ತಾ ದಿನಕ್ಕೆ ಕೇವಲ ರೂ. ೨೦೦/- ಸಂಪಾದನೆ ಮಾಡುತಿದ್ದಾರೆ. ಅಝಾನ್‌ನ ತಂದೆ ಇದ್ದರೂ ಮನೆ ಖರ್ಚಿನ ವಿಚಾರದಲ್ಲಿ ಅವರ ಕೊಡುಗೆ ಏನು ಇಲ್ಲ. ಸಲ್ಮಾ ತನ್ನ ಕುಟುಂಬದೊAದಿಗೆ ಗಂಗಾವತಿಯ ಮೆಹಬೂಬ್ ನಗರದಲ್ಲಿ ಇರುವ ಒಂದು ಬಾಡಿಗೆ ತಟ್ಟೆಮನೆಯಲ್ಲಿ ವಾಸಿಸುತ್ತಿದ್ದು, ತಿಂಗಳಿಗೆ ರೂ. ೨,೦೦೦/- ಬಾಡಿಗೆ ಕಟ್ಟುತ್ತಾರೆ. ಮೆಹಬೂಬ್ ನಗರವು ಗಂಗಾವತಿಯ ಮಧ್ಯದಲ್ಲಿರುವ ದೊಡ್ಡ ಸ್ಲಂ (ಕೊಳಚೆ ಪ್ರದೇಶ). ಅಲ್ಲಿ ಮುಖ್ಯವಾಗಿ ದಲಿತರು, ಹಿಂದುಳಿದ ವರ್ಗದವರು, ಮುಸ್ಲಿಂ ಸಮುದಾಯದವರು ವಾಸಿಸುವ ಪ್ರದೇಶ. ಸಲ್ಮಾರವರಿಗೆ ಕುಟುಂಬದ ರೇಷನ್ ಕಾರ್ಡ್ ಸಹ ಇಲ್ಲ. ಆದ್ದರಿಂದ ಅವರು ಅಕ್ಕಿ ಹಾಗೂ ಇತರೆ ಅವಶ್ಯಕ ಸಾಮಾನುಗಳನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕು. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಅವರಿಗೆ ಜೀವನ ಸಾಗಿಸುವುದು ಅತ್ಯಂತ ಕಷ್ಟವಾಗುತ್ತಿದೆ.
ಕೊಳೆಗೇರಿಯ ಇತರ ನಿವಾಸಿಗಳಂತೆ, ಬಡತನವು ಅವರು ಪ್ರತಿದಿನ ಎದುರಿಸುವ ಅತಿದೊಡ್ಡ ಹಿಂಸೆಯಾಗಿದೆ. ಈ ಬಡತನವೇ ಹಿಂಸೆಯAತಿದೆ. “ಬಡವರ ಮನೆಗಳಲ್ಲಿ ಯಾರೂ ಹುಟ್ಟಬಾರದು” ಎಂದು ಸಲ್ಮಾರವರ ಸ್ನೇಹಿತೆ ಹೇಳಿದರು. “ಇದು ಶಾಪ” ಎಂದು ಮತ್ತೊಬ್ಬರು ಸೇರಿಸಿದರು. “ಗಂಗಾವತಿಯಲ್ಲಿ ಉದ್ಯೋಗವಕಾಶಗಳು ತುಂಬಾ ಕಡಿಮೆ, ವಿಶೇಷವಾಗಿ ಮಹಿಳೆಯರಿಗೆ ಇರುವ ಅವಕಾಶಗಳು ಕಟ್ಟಡ ಕಾಮಗಾರಿ ಅಥವಾ ಮನೆ ಕೆಲಸ ಮಾತ್ರ. ಇತ್ತೀಚೆಗೆ ಒಂದು ಸಣ್ಣ ಉದ್ಯೋಗ ಆರಂಭವಾಗಿದ್ದು ಇಲ್ಲಿನ ಸ್ಲಂ ನಿಂದ ಕೆಲ ಒಂದು ಮಹಿಳೆಯರಿಗೆ, ಸಲ್ಮಾ ರವರನ್ನು ಸೇರಿ, ಕೆಲಸ ಸಿಕ್ಕಿದೆ.” ಎಂದು ಒಂದು ಮಹಿಳೆ ಹೇಳಿದರು.
ಉದ್ಯೋಗದ ಕೊರತೆ ಜೊತೆಗೆ, ಸ್ವಂತ ಮನೆಗಳ ಕೊರತೆ ಸೇರಿಕೊಂಡಿದೆ. ಮೆಹಬೂಬ್ ನಗರದಲ್ಲಿ ವಾಸಿಸುವ ಹೆಚ್ಚಿನ ಜನರು ಬಾಡಿಗೆದಾರರು. ಅವರು ಅನೇಕ ಬಾರಿ ಗಂಗಾವತಿ ನಗರಸಭೆಗೆ ಮನೆಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಮಹಿಳೆಯರು ವಿಶೇಷವಾಗಿ ತಮ್ಮ ಪ್ರದೇಶದ ನಿರಂತರ ನಿರ್ಲಕ್ಷö್ಯದಿಂದ ಕೋಪಗೊಂಡಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳಿಗಾಗಿ ಹೋರಾಡಬೇಕಾಗಿದೆ. ಕಸವನ್ನು ನಿಯಮಿತವಾಗಿ ತೆಗೆದುಕೊಂಡು ಹೋಗುವುದಿಲ್ಲ. ರಸ್ತೆಬದಿಯ ಚರಂಡಿಗಳು ಬಹುತೇಕ ಸ್ವಚ್ಛಗೊಳಿಸಲ್ಪಡುವುದೇ ಇಲ್ಲ. ವಿದ್ಯುತ್ ದೀಪ ಬದಲಿಸುವುದು ಅಥವಾ ಕುಡಿಯುವ ನೀರನ್ನು ಒದಗಿಸುವುದು ಇಂತಹ ಬೇಡಿಕೆಗಳು ವಾರಗಳವರೆಗೂ ಈಡೇರಿರುವುದಿಲ್ಲ. ಪ್ರತಿ ಚುನಾವಣೆ ಗಂಗಾವತಿ ನಗರಸಭೆಗೆಯಾಗಲಿ ಅಥವಾ ವಿಧಾನಸಭೆ, ಲೋಕಸಭೆಗೆ ಚುನಾವಣೆ ಇರಲಿ, ಈ ಏರಿಯಾ ನಿವಾಸಿಗಳಿಗೆ ಮನೆಗಳನ್ನು ನೀಡಲಾಗುವುದು, ಪ್ರದೇಶವನ್ನು ಸುಧಾರಿಸಲಾಗುವುದು ಎಂಬ ಭರವಸೆಗಳೊಂದಿಗೆ ಪ್ರತಿನಿಧಿಗಳು ಬರುತ್ತಾರೆ. ಆದರೆ ಅವರು ಗೆದ್ದ ನಂತರ ಅದನ್ನು ಮರೆತುಬಿಡುತ್ತಾರೆ. ಜಿಲ್ಲಾಡಳಿತ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಈ ಜನರ ದಿನನಿತ್ಯದ ಕಷ್ಟಗಳ ಬಗ್ಗೆ ಯಾವುದೇ ಕಾಳಜಿ ಇಲ್ಲ. ಈ ಬಡತನದ ದೈನಂದಿನ ಹಿಂಸಾಚಾರವನ್ನು ಸಹಿಸಿಕೊಳ್ಳುತ್ತಲೇ ಇರುವ ಮೆಹಬೂಬ್ ನಗರದ ಜನರು, ತಮ್ಮ ಪರಿಸ್ಥಿತಿಯ ಮೇಲೆ ಉಕ್ಕಿ ಹರಿಯುವ ಕೋಪದಲ್ಲಿ ಬದುಕುತ್ತಿದ್ದಾರೆ.
ಅಝಾನ್‌ಗೆ ಆಗಿರುವ ದುರಂತವೂ ಈ ವ್ಯವಸ್ಥಿತ ನಿರ್ಲಕ್ಷö್ಯದ ಪರಿಣಾಮವೇ. ಸಲ್ಮಾ ಅವರ ಮನೆಯ ಹಿಂಭಾಗದಿAದ ಹರಿಯುವ ೬೦ ಅಡಿ ಅಗಲದ ಚರಂಡಿಯನ್ನು ಸ್ಥಳೀಯವಾಗಿ ದುರ್ಗಮ್ಮನ ಹಳ್ಳ ಎಂದು ಕರೆಯುತ್ತಾರೆ. ಇದು ವಾಸ್ತವದಲ್ಲಿ ಒಂದು ಹಳ್ಳವಾಗಿದ್ದು, ಆದರೆ ವಿಸ್ತಾರಗೊಂಡ ಗಂಗಾವತಿ ಇದನ್ನು ತನ್ನ ಒಳಚರಂಡಿ ಮತ್ತು ಕಸದ ಮುಖ್ಯ ಹೊರಸಾಗಿಸುವ ದಾರಿಗೆ ಬಳಸಿಕೊಂಡಿದೆ. ಒಮ್ಮೆ ಸುಂದರವಾಗಿ ಹರಿಯುತ್ತಿದ್ದ ಈ ಹಳ್ಳ, ಈಗ ನಗರದ ಮಧ್ಯೆ ದುರ್ಗಂಧದಿAದ ತುಂಬಿದ, ಕಸದಿಂದ ಮುಚ್ಚಿಹೋಗಿರುವ, ಜಲಕುಂಬಿಯಿAದ ಆವೃತವಾದ ಚರಂಡಿಯಾಗಿ ಮಾರ್ಪಟ್ಟಿದೆ. ಈ ಚರಂಡಿಯಲ್ಲಿ ಮೊಸಳೆಗಳು ಸಹ ಕಂಡುಬAದಿವೆ. ಮಳೆಯ ಸಮಯದಲ್ಲಿ ಈ ನೀರು ತುಂಬಿ ಹರಿದು, ಮೆಹಬೂಬ್ ನಗರ ಸೇರಿದಂತೆ ನಗರದಲ್ಲಿನ ಹಲವಾರು ಪ್ರದೇಶಗಳಿಗೆ ನುಗ್ಗುತ್ತದೆ. ಇದನ್ನು ತಡೆಯಲು ಗಂಗಾವತಿ ನಗರಸಭೆಯು ಚರಂಡಿಯ ದಂಡೆಗಳನ್ನು ಎತ್ತರಗೊಳಿಸಿದ್ದು, ಮನೆಗಳಿಗೆ ಕಸ ಪ್ರವೇಶಿಸದಂತೆ ಉಕ್ಕಿನ ಕಂಬಿಗಳನ್ನೂ ಅಳವಡಿಸಿದೆ.
ಅಝಾನ್ ಬಿದ್ದುಹೋದ ಸೇತುವೆ, ದುರ್ಗಮ್ಮನ ಹಳ್ಳದ ಮೇಲೆ ನಿರ್ಮಿಸಲಾದ ಅನೇಕ ಸೇತುವೆಗಳಲ್ಲೊಂದು. ಈ ಸೇತುವೆ ಬದಿಯಲ್ಲಿ ಗೋಡೆಗಳೇ ಇಲ್ಲ ಮತ್ತು ಅದು ಎಷ್ಟು ತಗ್ಗುವಾಗಿ ನಿರ್ಮಾಣವಾಗಿದೆ ಅಂದರೆ ಮಳೆಯ ಸಮಯದಲ್ಲಿ ನೀರಿನಿಂದಲೇ ಮುಳುಗಿ ಬಿಡುತ್ತದೆ. ಸ್ಥಳೀಯರು ಮಳೆಗಾಲದಲ್ಲಿ ಸೇತುವೆ ದಾಟಲು ಹಗ್ಗವನ್ನು ಕಟ್ಟಿ ಇಡುತ್ತಾರೆ. ಸೇತುವೆಯ ಬದಿಯಲ್ಲಿ ಅಂಗನವಾಡಿ ಮತ್ತು ಶಾಲೆ ಇದ್ದು, ಅಲ್ಲಿ ಓದುತ್ತಿರುವ ಮಕ್ಕಳು ಸಹ ಮಳೆಗಾಲದಲ್ಲಿ ಈಗೆಯೇ ಸೇತುವೆ ದಾಟಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಗಂಗಾವತಿ ನಗರಸಭೆ, ಜಿಲ್ಲಾಡಳಿತ ಅಥವಾ ಆಯ್ಕೆಯಾದ ಪ್ರತಿನಿಧಿಗಳು ಮೆಹಬೂಬ್ ನಗರಕ್ಕೆ ಎತ್ತರವಾದ ಹೊಸ ಸೇತುವೆಯನ್ನು ಮಂಜೂರು ಮಾಡುವ ಪ್ರಯತ್ನವನ್ನೂ ಮಾಡಿಲ್ಲ. ಗಂಗಾವತಿ ನಗರಸಭೆ ಮಾಡಿದ್ದು ಏನೆಂದರೆ, ಸೇತುವೆಯ ಎರಡೂ ಬದಿಗಳಲ್ಲಿ ಎತ್ತರವಾದ ಉಕ್ಕಿನ ಕಂಬಿಗಳನ್ನು ಅಳವಡಿಸಿದ್ದು ಅದರಿಂದ ಕಸ ಸೇತುವೆಯ ಮೇಲೆ ಹರಿಯದಂತೆ ತಡೆಯಲು. ಆದರೆ ಅಝಾನ್ ಬಿದ್ದುಹೋಗುವ ಕೆಲವೇ ದಿನಗಳ ಮುಂಚೆ, ಅಂದರೆ ಸೆಪ್ಟೆಂಬರ್ ೧೧ ರಂದು ಗಂಗಾವತಿ ನಗರಸಭೆಯವರು ಚರಂಡಿ ಕಸದಿಂದ ಮುಚ್ಚಿಹೋದ ಕಾರಣ, ಸೇತುವೆಯ ಉಕ್ಕಿನ ಕಂಬಿಯ ಒಂದು ಭಾಗವನ್ನು ತೆಗೆದಿದ್ದರು. ಆದರೆ ಗಂಭೀರ ನಿರ್ಲಕ್ಷö್ಯವೆಂದರೆ, ಕಸ ತೆಗೆದುಹಾಕಿದ ನಂತರ ಅಧಿಕಾರಿಗಳು ಆ ಕಂಬಿಯನ್ನು ಮರಳಿ ಅಳವಡಿಸದೆ ಬಿಟ್ಟಿದ್ದು, ಅದೇ ಅಝಾನ್‌ನ ದುರಂತಕ್ಕೆ ಕಾರಣವಾಯಿತು.
ಇಂದಿಗೆ ಅಝಾನ್ ಕಾಣೆಯಾಗಿ ನಾಲ್ಕು ದಿನಗಳಾಗಿವೆ. ಸಲ್ಮಾರವರು ಇನ್ನೂ ತನ್ನ ಮನೆಯ ಹೊರಗೆ ಕುಳಿತು, ತನ್ನ ಮಗ ಮರಳಿ ಬರುವ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ. ಅವರ ತಂದೆ-ತಾಯಿ, ಸ್ನೇಹಿತರು ಮತ್ತು ನೆರೆಹೊರೆಯವರು ಅವರಿಗೆ ಸಮಾಧಾನ ಹೇಳಿ ಧೈರ್ಯ ತುಂಬುತ್ತಿದ್ದಾರೆ. ಸ್ಥಳೀಯ ಯುವಕರು ಅವರಿಗೆ ಹುಡುಕಾಟದ ಮಾಹಿತಿ ಹಂಚಿಕೊಳ್ಳುತ್ತಲೇ ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿರವರು ಇವತ್ತು ಬರುತ್ತಾರೆ ಎಂಬ ಸುದ್ದಿ ಇದೆ. ಈ ಕೂಡಲೇ ಜಿಲ್ಲಾಡಳಿತ, ತಾಲೂಕಾಡಳಿತ, ನಗರಾಡಳಿತ, ಚುನಾಯಿತಿ ಪ್ರತಿನಿಧಿಗಳು ಸಿಪಿಐ(ಎಂಎಲ್) (ಲಿಬರೇಷನ್) ಪಕ್ಷವು ಆಗ್ರಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅPI(ಒಐ) ಲಿಬರೇಶನ್ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲೀಫ್ಟನ್ ಡಿ ರೊಜಾರಿಯೋ. ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರಿ, ಸಣ್ಣ ಹನುಮಂತಪ್ಪ ಹುಲಿಹೈದರ್, ಜಿಲ್ಲಾ ಸಮಿತಿ ಸದಸ್ಯರಾದ ಬರ‍್ಹಾನ್ನುದ್ದಿನ್, ಹುಲಿಗೆಮ್ಮ, ಧ್ಯಾವಮ್ಮ, ರೇಣುಕಮ್ಮ ಇದ್ದರು.