Chinnappagowda (Shivanna) of Gulya assumed power as Nadagouda of Ponnachi.
ವರದಿ: ಬಂಗಾರಪ್ಪ .ಸಿ .
ಹನೂರು :ನ್ಯಾಯಲಯದ ಮೊರಹೊಗದೆ ಸಣ್ಣ ಪುಟ್ಟ ವ್ಯಾಜ್ಯಗಳಿರಬಹುದು ಅಥವಾ ಇನ್ನಿತರ ಪ್ರಮುಖ ತಿರ್ಮಾನಗಳಿರಬಹುದು ಅಂತಹ ವಿಷಯಗಳಿಗೆ ಪ್ರತಿ ಊರಿನಲ್ಲೂ ನ್ಯಾಯ ಪಂಚಾಯಿತಿಗಳನ್ನು ಮಾಡಿ ಸ್ಥಳಿಯ ಮಟ್ಟದಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಸೂಕ್ತ ನ್ಯಾಯ ಕೊಡಿಸುವಲ್ಲಿ ಗೌಡಿಕೆಯವರ ಯಜಮಾನರುಗಳ ಪಾತ್ರ ಬಹಳ ದೊಡ್ಡದಿದೆ ಅದೆ ರೀತಿಯಾಗಿ ನಮ್ಮ ಗ್ರಾಮದಲ್ಲಿಯು ಸಹ
ಪೊನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮದೆ ಆದ ದಾಟಿಯಲ್ಲಿ ಬಡವರ ದಿನ ದಲಿತರ ಪರವಾಗಿ ದುಡಿದು ಹಲವಾರು ಸಮಸ್ಯೆಗಳನ್ನು ಬಗೆಹರಿಸಿ ಪ್ರಮಾಣಿಕ ಪ್ರಯತ್ನ ಮಾಡಿ ನಿಧನ ಹೊಂದಿದ ಆಲಂಬಾಡಿ ಜುಂಜೆಗೌಡರ ವಂಶಸ್ತರಾದ ನಾಡಗೌಡ ಹುಲಿ ಮನೆ ಅಂಕಪ್ಪ ಗೌಡರವರು ಅವರ ಉತ್ತರಾಧಿಕಾರಿಯನ್ನು ಸುತ್ತಮುತ್ತಲಿನ ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆಮಾಡಲಾಯಿತು ಎಂದು ಪೊನ್ನಾಚಿ ಮಹದೇವಸ್ವಾಮಿ ತಿಳಿಸಿದರು .
ನಂತರ ಮಾತನಾಡಿದ
ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದಲ್ಲಿ ಕಳೆದ
ನಾಲ್ಕು ತಿಂಗಳ ಹಿಂದೆ ನಿಧನರಾದ ನಂತರ ಅವರ ಮನೆತನದವರೆ ಆದ ಆಲಂಬಾಡಿ ಜುಂಜೆಗೌಡರ ವಂಶಸ್ಥರಾದ ಹುಲಿಮನೆ ಮನೆತನದವರಾದ
ಪೊನ್ನಾಚಿ ಗುಳ್ಯದ ಚಿನ್ನಪ್ಪ ಗೌಡ್ರು ( ಶಿವಣ್ಣ) ರವರನ್ನು ಮುಂದಿನ ನಾಡಗೌಡಿಕೆಯನ್ನು ನೀಡಿ ಗ್ರಾಮದ ಎಲ್ಲಾ ಜನಾಂಗದವರ ಸರ್ವರ ಸಮಾಕ್ಷಾಮದಲ್ಲಿ ಪೊನ್ನಾಚಿ ನೆಲೆಗಟ್ಟಿಗೆ ಸೇರಿದ ಗಡಿ ವ್ಯಾಪ್ತಿಯ ನಾಡಗೌಡರಾಗಿ ಅದಿಕಾರ ಸ್ವೀಕರಿಸಿದರು. ಎಂದು ತಿಳಿಸಿದರು .
ಇ ದೇ ಸಮಯದಲ್ಲಿ ,ಪಟಗಾರ್ ಶಿವನಪ್ಪ ,ಮಣಿಗಾರ ಪಿ ಕೆ ಬಸವರಾಜು ರವರು ಸಹ ಅಧಿಕೃತವಾಗಿ ಪ್ರಮಾಣವಚನ. ಸ್ವೀಕರಿಸಿದರು .ಇವರಿಗೆ ಆಲಂಬಾಡಿ ಮಠದ ವೀರಪ್ಪ ಸ್ವಾಮೀಜಿಗಳು ಪ್ರತಿಜ್ಞಾವಿಧಿ ಬೋದನೆಮಾಡಿದವರು , ಇವರಿಗೆ ಪೊನ್ನಾಚಿಯ ಮಹಂತ ಸ್ವಾಮೀಜಿಗಳು ಸಾತ್ ನೀಡಿದರು .
ಇವರುಗಳು ಅಧಿಕಾರದ ಸಮಯದಲ್ಲಿ ಅಸ್ತೂರು ಗ್ರಾಮದ ಊರು ಗೌಡರುಗಳಾದ. ರಂಗಮಾದ್ಪ . ಚಿಂಗರಂಗೆಗೌಡ. ಮುನಿಬಸೇವರಾಜು .
ಮರೂರು ಗ್ರಾಮದಗೌಡರುಗಳಾದ ಶಿವಕುಮಾರ ಸ್ವಾಮಿ,ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ನಿಲಾಂಬಿಕೆ, ಉಪಾಧ್ಯಕ್ಷರಾದ ಭದ್ರ , ಕೃಷಿ ಸೊಸೈಟಿಯ ಉಪಾಧ್ಯಕ್ಷ ಪಾರ್ವತ್ತಮ . ಮುಖಂಡರುಗಳಾದ ಕರಿಕಲ್ಲು ಪುಟ್ಟಸ್ವಾಮಿ , ಕೆಶವಮೂರ್ತಿ . ವೈದಪ್ಪ . ಕಾಳಪ್ಪ , ದಾಸೇಗೌಡ , ಆಲಂಬಾಡಿ ಗೌಡ್ರು , ಗೋಪಿನಾಥಂನ ಮಂತ್ರಿಗೌಡ್ರು . ಮಾಜಿ ಅದ್ಯಕ್ಷರಾದ ಜಿಪಿ ಜಯಪಾಲ್ ಮುಖಂಡರಾದ ಶಕ್ತಿವೇಲು ,ನಂದಗೋಪಾಲ್ ,ಬೆಟ್ಟ ಬೇಡಗಂಪಣ ಅಧ್ಯಕ್ಷ ಪುಟ್ಟಣ್ಣ ,ನಾಯಿಕುಟ್ಟಿ ನಾಗಣ್ಣ ,ಕೌದಳ್ಲಿ ಮಣಿಗಾರ್ ಕುಮಾರ್ , ಕೊಣನಕೆರೆ ಮಹದೇವಪ್ಪ .ದಂಟಳ್ಳಿ ಗೌಡ್ರು ಶಿವಣ್ಣ , ವೆಂಕಟಮೊಳ್ಳೆಗೌಡ್ರು , ಚಂಗಡಿ ಗೌಡರುಗಳಾದ ಕರಿಯಪ್ಪ, ಸಮ್ಮುನಿಯಪ್ಪ , ಕೊಟೆಬಸಪ್ಪ , ಗ್ರಾಮ ಸದಸ್ಯರುಗಳಾದ ಪರಶಿವ ,ಮುನಿಯಪ್ಪ . ಸೇರಿದಂತೆ ರಂಗಮಾದಪ್ಪ , ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದು ಶಾಸ್ತ್ರದೊತ್ತವಾಗಿ ಪ್ರಮಾಣವಚ ಸ್ವೀಕರಿಸುವಂತೆ ಸಾಕ್ಷಿಯಾದರು . ಕಾರ್ಯಕ್ರಮಕ್ಕೆ ಅನ್ಯ ಕಾರ್ಯಗಳಿದ್ದ ಕಾರಣ ಸಮಯದ ಅಭಾವದಿಂದ ನಾನು ಬರಲಿಕ್ಕೆ ಸಾದ್ಯವಾಗಿಲ್ಲ ಈದಿನದ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೊಗಿದ್ದಕ್ಕೆ ನಿಮಗೆ ಶುಭವಾಗಲಿ ಎಂದು ಆರ್ಶಿವಚನ ನೀಡಿದರು .