Srikanth Swami condemns Rambhapuri Sri's statement on changing the name of Tripuranta Lake
ಬೀದರ: ಮಹನೀಯರೇ, ಪೂಜ್ಯ ಜಗದ್ಗುರು ಶ್ರೀ ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯರು ಪುರಾತನ ಇತಿಹಾಸದಲ್ಲಿ ಹೆಸರಾದ ತ್ರಿಪುರಾಂತ ಕೆರೆಯ ಹೆಸರನ್ನು ರೇಣುಕಾಚಾರ್ಯರ ಹೆಸರಿಡಬೇಕು ಹಾಗೂ ಅಲ್ಲಿರುವ ವೃತ್ತದ ಹೆಸರಿಡುವ ಹೇಳಿಕೆ ಕುತಂತ್ರ ಭರಿತ ಮತ್ತು ಖಂಡಿಸಿ ಶ್ರೀಕಾಂತ ಸ್ವಾಮಿ,ಬೀದರ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡ ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಿದ್ದರೆ ಶರಣರ ಇತಿಹಾಸಕ್ಕೂ ಹಾಗೂ ಬಸವಕಲ್ಯಾಣ ನಗರಕ್ಕೂ ಅಪಚಾರ ಬಗೆದಂತೆ ಆಗುತ್ತದೆ, ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸ ಕೂಡದು. ಇಂತಹ ವೈಮನಸ್ಸು ಹುಟ್ಟಿಸುವ ವಿಷಯವನ್ನು ಪೂಜ್ಯ ರಂಭಾಪುರಿ ಜಗದ್ಗುರುಗಳ ತಲೆಯಲ್ಲಿ ತುಂಬಿ ವೀರಶೈವ ಮತ್ತು ಲಿಂಗಾಯತರ ಮಧ್ಯ ವಿಷ ಬೀಜ ತುಂಬುವ ಕೆಲಸ ಮಾಡಿದ್ದು ಲಿಂಗಾಯತರ ತಾಳ್ಮೆಗೆ ಧಕ್ಕೆ ತಂದಿದೆ. ರಂಭಾಪುರಿ ಪೀಠದ ದಸರಾ ದರ್ಬಾರ ಯಾರು ವಿರೋಧ ಮಾಡಿಲ್ಲ ಅಂದರೆ ನಾವು ಏನು ಬೇಕಾಗಿದ್ದು ಮಾಡಬಹುದು ಎಂದು, ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಬಂದು ಪೂಜ್ಯರ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದಿದ್ದಾರೆ ಅಂದರೆ ಏನು ಬೇಕಾಗಿದ್ದು ಮಾಡಬಹುದು ಎನ್ನುವ ಮನಸ್ತಿತಿ ಜಗದ್ಗುರು ಶಿಷ್ಯರ ಅಹಂಕಾರ ಎದ್ದು ಕಾಣುತ್ತದೆ.
ಯಾವುದೇ ಕಾರಣಕ್ಕೂ ಸ್ಥಳೀಯ ಆಡಳಿತ ಮಂಡಳಿ ಮತ್ತು ಶಾಸಕರು ಈ ಪ್ರಸ್ತಾವಕ್ಕೆ ಮನ್ನಣೆ ಕೊಟ್ಟರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ.
ಎಲ್ಲಾ ಬಸವಾದಿ ಶರಣರ ಪರ ಹಾಗೂ ಲಿಂಗಾಯತ ಧರ್ಮ ಪರ ಸಂಘಟನೆಗಳು ಎಚ್ಚೆತ್ತುಗೊಂಡು ತೀವ್ರವಾಗಿ ವಿರೋಧಿಸಿ ಪ್ರತಿಭಟನೆಗೆ ಮುಂದಾಗಬೇಕೆಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಶ್ರೀಕಾಂತ ಸ್ವಾಮಿ,ಬೀದರ