On one hand, there is a shortage of water in the Hanur constituency, and on the other hand, there is universal corruption in the JJM.
ವರದಿ : ಬಂಗಾರಪ್ಪ ಸಿ .
ಹನೂರು : ಪ್ರಧಾನ ಮಂತ್ರಿಯವರ ಕನಸಿನ ಯೋಜನೆಗಳಲ್ಲೊಂದಾದ ಜಲಜೀವನ್ ಮಿಷನ್ ಯೋಜನೆಯಡಿ ದೇಶಾದ್ಯಂತ ಪ್ರತಿ ಮನೆಗೂ ಶುದ್ದೀಕರಣ ಮಾಡಿದ ನೀರನ್ನು ನೀಡಲು ಜನತ ತೆರಿಗೆಯ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿದ್ದಾರೆ .
ಹನೂರು ತಾಲ್ಲೂಕಿನ ಶ್ರೀ ಮಲೆ ಮಹದೇಶ್ವರ ಕ್ಷೇತ್ರದಲ್ಲಿನ ವಿವಿಧ ಬಡಾವಣೆಯ ಬೀದಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೆಲಸ ಮಾಡಿದ ಅನ್ಯ ರಾಜ್ಯದ ಹಾಗೂ ಬೆರೆ ಜಿಲ್ಲೆಯ ಗುತ್ತಿಗೆದಾರರ ಜೊತೆಯಲ್ಲಿ ಸ್ಥಳಿಯ ಅಧಿಕಾರಿಗಳು ಸೇರಿದಂತೆ ಕೆಲವು ಜನ ಪ್ರತಿನಿಧಿಗಳು ಕಮಿಷನ್ ಹಣದ ಆಸೆಗಾಗಿ ಇಡೀ ವ್ಯವಸ್ಥೆಯನ್ನೆ ಹಾಳುಮಾಡಿ ಕೇವಲ ಅರ್ದ ಅಡಿ ಭೂಮಿಯ ಕೆಳಗೆ ಅಗೆದು ನಾಮಕಾವಸ್ಥೆ ಎಂಬಂತೆ ಕಳಪೆ ಕಾಮಗಾರಿಗಳನ್ನು ಮಾಡಿ ಸ್ಥಳಿಯ ಅಧಿಕಾರಿಗಳಿಗೆ ಹಾಗೂ ಸಂಬಂದಪಟ್ಟವರಿಗೆ ಮಾಮುಲಿ ನೀಡಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟ ಸೇರಿದಂತೆ ಕಾಡಂಚಿನ ಪ್ರದೇಶಗಳು ,ಪೊನ್ನಾಚಿ ,ಗೋಪಿನಾಥಮ್ , ಹೂಗ್ಯಂ , ದಂಟಳ್ಳಿ ಇನ್ನಿತರ ಹಲವಡೆಯು ಇವರ ಅಕ್ರಮಕ್ಕೆ ಸಾಕ್ಷಿಯಾಗಿದೆ ಎಂದು ಸ್ಥಳಿಯ ಜನರು ತಿಳಿಸಿದ್ದಾರೆ , ಈಗಾಗಲೇ ಕ್ಷೇತ್ರಾದಾದ್ಯಂತ ನೀರಿನ ಅಭಾವ ಸೃಷ್ಟಿಯಾಗಿದ್ದು ಅಧಿಕಾರಿಗಳು ಇತ್ತಕಡೆ ಗಮನ ಹರಿಸಬೇಕು ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.