Breaking News

ಪರಂಪರೆ ಮರೆತರೇ ಭವಿಷ್ಯವಿಲ್ಲ. ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್

There is no future if we forget our heritage. Dr. Siddalingappa Kotnekal

ಗಂಗಾವತಿ: ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಎಂದು ಅಂಬೇಡ್ಕರ್ ರವರು ಹೇಳಿದ ಮಾತು ಪರಂಪರೆಯ ವಿಸ್ಮೃತಿಯಿಂದ ಭವ್ಯವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ .ಇತಿಹಾಸವೆಂದರೆ ಕೇವಲ ರಾಜ ಮಹಾರಾಜರ ಕಥೆಯಲ್ಲ. ಚರಿತ್ರೆಯ ಪ್ರತಿ ಘಟನೆಗಳು ,ಮಹಾನ್ ವ್ಯಕ್ತಿಗಳ ಜೀವನಗಳು ನಮಗೆ ಒಂದೊಂದು ಪಾಠಗಳನ್ನು ಕಲಿಸುತ್ತವೆ .ಅಂಥ ಪಾಠಗಳಿಂದ ಬದುಕಿನ ಸರಿ ತಪ್ಪುಗಳನ್ನು ನಿರ್ಧರಿಸಿಕೊಂಡು ನಾವು ಹೊಸ ಇತಿಹಾಸವನ್ನು ನಿರ್ಮಿಸಬಹುದು ಎಂದು ಕೊಪ್ಪಳದ ಇತಿಹಾಸ ಸಂಶೋಧಕ ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್ ಅಭಿಪ್ರಾಯಪಟ್ಟರು. ಅವರು ಇಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸಹಯೋಗದಲ್ಲಿ ಗಂಗಾವತಿಯ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಶ್ರೀ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಭಾಗ ಮತ್ತು ಎನ್. ಎಸ್.ಎಸ್ ಘಟಕಗಳವತಿಯಿಂದ ಜರುಗಿದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು .ಮುಂದುವರೆದು ವರು ಇತಿಹಾಸದ ತಿಳುವಳಿಕೆಗೆ ಅದರ ಆಧಾರಗಳಾದ ಪ್ರಾಚೀನ ಸ್ಮಾರಕಗಳು ,ಶಾಸನಗಳು ,ಶಿಲ್ಪಗಳು ,ನಾಣ್ಯಗಳು, ಹಸ್ತಪ್ರತಿಗಳು, ಕೋಟೆ ಕೊತ್ತಲಗಳು ಅಮೂಲ್ಯ ದಾಖಲೆಗಳಾಗಿವೆ ಅಂಥ ಪ್ರಾಚೀನ ದಾಖಲೆಗಳನ್ನು ಸಂರಕ್ಷಿಸಿಕೊಳ್ಳಬೇಕಾದದ್ದು ಸರಕಾರದ ಜೊತೆಗೆ ಸಂಬಂಧಪಟ್ಟ ಇಲಾಖೆಗಳ ಮತ್ತು ಬಹು ಮುಖ್ಯವಾಗಿ ನಾಗರಿಕರ ಕರ್ತವ್ಯವಾಗಿದೆ. ಅದರಲ್ಲೂ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿರುವ ಪ್ರಾಚೀನ ಶಾಸನ ,ಶಿಲ್ಪ ,ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕೆಂದು ಆ ಮೂಲಕ ನಾಡಿನ ಭವ್ಯ ಪರಂಪರೆಯನ್ನು ಉಳಿಸಿಕೊಳ್ಳಲು ಮುಂದಡಿ ಇಡಬೇಕೆಂದು ಕರೆ ನೀಡಿದರು . ಇದೇ ಸಂದರ್ಭದಲ್ಲಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಜರುಗಿದ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸ್ಥಳಗಳ ಮತ್ತು ಸ್ಮಾರಕಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಕೆ ಚನ್ನಬಸಯ್ಯ ಸ್ವಾಮಿಯವರು ಉದ್ಘಾಟಿಸಿ ನಮ್ಮ ಜನರಿಗೆ ಚಾರಿತ್ರಿಕ ಪ್ರಜ್ಞೆಯ ಕೊರತೆ ಇದೆ ಹಾಗಾಗಿ ಅನೇಕ ಶಿಲ್ಪ, ಶಾಸನಗಳು ನಾಶವಾಗುತ್ತದೆ ಅವುಗಳ ರಕ್ಷಣೆಗಾಗಿ ಇತಿಹಾಸ ಅಕಾಡೆಮಿ ಉತ್ತಮ ಕಾರ್ಯವನ್ನು ನಡೆಸುತ್ತಿದೆ ಇದರ ಪ್ರಯೋಜನವನ್ನು ವಿದ್ಯಾರ್ಥಿನಿಯರು ಪಡೆದುಕೊಂಡು ಸ್ಮಾರಕ, ಶಿಲ್ಪ ,ಶಾಸನಗಳ ರಕ್ಷಣೆ ಮಾಡಬೇಕೆಂದರು. ಪ್ರಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ್ ಕರ್ನಾಟಕ ಇತಿಹಾಸ ಅಕಾಡೆಮಿ ಕನ್ನಡ ನಾಡಿನ ಇತಿಹಾಸ ಕ್ಷೇತ್ರದ ಸಂಶೋಧನೆ, ಅಧ್ಯಯನ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಅದರ ಒಂದು ಪ್ರಮುಖ ಯೋಜನೆ ಎಂದರೆ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ನಾಡಿನಾದ್ಯಂತ ಶಾಲಾ-ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರ ಭಾಗವಾಗಿ ನಮ್ಮ ಕಾಲೇಜಿನಲ್ಲೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಪರಂಪರೆಯ ರಕ್ಷಣೆಯ ಮಹತ್ವವನ್ನು ಬಿಂಬಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭ ದಲ್ಲಿ ಇತಿಹಾಸ ಅಕಾದೆಮಿಯ ಸ್ಮಾರಕಗಳ ಸಂರಕ್ಷಣೆಯ ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಬಿಡುಗಡೆಗೊಳಿಸಲಾಯ್ತು.ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ರಾಚಯ್ಯ ಸ್ವಾಮಿ ಹುಚ್ಚೇಶ್ವರ ಮಠ, ಕಾರ್ಯಕ್ರಮವನ್ನು ಸಂಘಟಿಸಿದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶಾರದಾ ಪಾಟೀಲ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಸುರೇಶಗೌಡ,ಡಾ ವಾಣಿಶ್ರೀ ಪಾಟೀಲ್, ಪ್ರಾಧ್ಯಾಪಕರಾದ ಮಾಣಿಕ್ ವರ್ಣೇಕರ್, ಶಾಂತಮ್ಮ ದಿನ್ನಿ ,ಹನುಮಂತ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಾದ ಶ್ರೀದೇವಿ, ಶಫೀನ್ ಅಂಜುಮ್, ಸಹನ ಮುಂತಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

About Mallikarjun

Check Also

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ನೇಮಕ

Akbar appointed as Congress district general secretary ಕೊಪ್ಪಳ: ನಗರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ, ಹಾಲಿ ಸದಸ್ಯ, …

Leave a Reply

Your email address will not be published. Required fields are marked *