Sharannavarathri celebrations for Shri Sharadambrama
ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರ ಪಾರಾಯಣ ಜರುಗಿರುವುದು ಸಂತಸದಾಯಕವಾಗಿದೆ ಎಂದು ಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಸೋಮವಾರದಂದು ಶಾರದಾ ನಗರದ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೫ ವರ್ಧಂತಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಕಳೆದ ಏಳು ವರ್ಷಕ್ಕಿಂತ ೮ನೇ ವರ್ಷದ ಆಚರಣೆಯಲ್ಲಿ ಶ್ರೀ ಶಾರದಾ ಮಾತೆಗೆ ನೂತನವಾದ ಬಹುವೆಚ್ಚದ ಮಂಟಪವನ್ನು ಬಾಲಕೃಷ್ಣ ದೇಸಾಯಿ ಕುಟುಂಬಸ್ಥರು ಸಮರ್ಪಿಸಿದ್ದರು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಹಿಳೆಯರು ಅತ್ಯಂತ ಉತ್ಸಾಹ ಭಕ್ತಿಯಿಂದ ಭಾಗವಹಿಸಿ ಶ್ರೀ ಶಾರದಾ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಧಾರ್ಮಿಕ ಆಚರಣೆ ವ್ಯಕ್ತಿಗೆ ಸನ್ಮಾರ್ಗಹಾಗೂ ಗುಣಮಟ್ಟದ ಸಂಸ್ಕಾರ ನೀಡಲು ಮೂಲ ಕಾರಣವಾಗಿದೆ. ಇದರಿಂದ ಪಾರಂಪರಿಕ ಸಂಸ್ಕೃತಿ ಧರ್ಮರಕ್ಷಣೆ ಸಂಘಟನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ವಿವಿಧ ಭಜನಾ ಮಂಡಳಿಯವರಿAದ ಭಜನೆ ಪಾರಾಯಣಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಭಟ್ ಮಹಾಸಂಕಲ್ಪವನ್ನು ನೆರವೇರಿಸಿದರು.
ಬೆಳಗ್ಗೆ ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್. ಶ್ರಿನಿವಾಸ ಕರಮುಡಿ, ವೇಣು ಅಳವಂಡಿ, ಕಾಶಿನಾಥ ಭಟ್. ಶೇಷಗಿರಿ ಗಡಾದ್, ಜಗನ್ನಾಥ್ ಅಳವಂಡಿಕರ್, ಭೀಮಾಶಂಕರ್ ಹೊಸಳ್ಳಿ, ಕೆ.ವಿ ಜೋಶಿ. ನಾಗೇಶ್ ಭಟ್ ಸೇರಿದಂತೆ ಮತ್ತಿತರ ಶಂಕರ ಸೇವಾ ಟ್ರಸ್ಟ್ನ ಸದಸ್ಯರು ಪಾಲ್ಗೊಂಡಿದ್ದರು


