Vishwakarma Jayanti: Flower offering for the portrait Grant for construction of community building: Reddy




ಗಂಗಾವತಿ:ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರ ದೇಗುಲದ ಆವರಣದಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ಇಲ್ಲವೇ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಹತ್ತು ಲಕ್ಷ ಅನುದಾನ ನೀಡುವುದಾಗಿ ಶಾಸಕ ಜಿ. ಜನಾರ್ದನರೆಡ್ಡಿ ಭರವಸೆ ನೀಡಿದರು.
ವಿಶ್ವಕರ್ಮ ಜಯಂತಿ ಅಂಗವಾಗಿ ಇಲ್ಲಿನ ಪಿಕಾರ್ಡ್ ಬ್ಯಾಂಕ್ ಸಮೀಪ ಇರುವ ವಿಶ್ವಕರ್ಮ ವೃತ್ತದಲ್ಲಿ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಬಳಿಕ ಹೊಸಳ್ಳಿ ರಸ್ತೆಯಲ್ಲಿರುವ ಮೌನೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಕಳೆದ ಹಲವು ವರ್ಷದಿಂದ ಸಮುದಾಯ ಭವನ ನೆನೆಗುದ್ದಿಗೆ ಬಿದ್ದಿರುವುದು ಸಮಾಜದ ಮುಖಂಡರು ನನ್ನ ಗಮನಕ್ಕೆ ತಂದಿದ್ದಾರೆ. ಕಳೆದ ವರ್ಷವೇ ನಾನು ಇಲ್ಲಿಗೆ ಭೇಟಿ ನೀಡಬೇಕಿತ್ತು. ಕಾರಣಾಂತರದಿAದ ಅದು ಸಾಧ್ಯವಾಗಿಲ್ಲ.
ಅಪೂರ್ಣವಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಹತ್ತು ಲಕ್ಷ ಮೊತ್ತದ ಅನುದಾನ ನೀಡಲಾಗುವುದು. ಈ ಪ್ರಸ್ತಕ್ತ ಆರ್ಥಿಕ ವರ್ಷದಲ್ಲಿ ಹತ್ತು ಲಕ್ಷ ಏಕಕಾಲಕ್ಕೆ ಸಾಧ್ಯವಾಗದೇ ಹೋದಲ್ಲಿ ಈ ವರ್ಷ ಐದು ಮುಂದಿನ ವರ್ಷ ಐದು ಲಕ್ಷ ಮೊತ್ತದ ಅನುದಾನ ನೀಡಲಾಗುವುದು ಎಂದರು.
ಸಮುದಾಯಕ್ಕೆ ಕರೆ:
ಇಡೀ ಬ್ರಹ್ಮಾಂಡದ ಸೃಷ್ಟಿಕರ್ತನೆ ವಿಶ್ವಕರ್ಮ. ಇಂದ್ರಪ್ರಸ್ಥ, ಲಂಕೆಯAತ ಮಹಾನಗರ ನಿರ್ಮಾಣ ಮಾಡಿದ ಕೀರ್ತಿ ವಿಶ್ವಕರ್ಮರದ್ದು. ಎಲ್ಲಾ ದೇವೆತಗಳಿಗೆ ಆಯುಧ ನಿರ್ಮಾಣ ಮಾಡಿ ಕೊಟ್ಟು ಮೇಲ್ಪಂಕ್ತಿಯಾದ ಸಮುದಾಯ. ಹೀಗಾಗಿ ವಿಶ್ವಕರ್ಮ ಎಲ್ಲಾ ದೇವತೆಗಳಿಗಿಂತಲೂ ಮೇಲು. ಆದರೆ ಕಾಲಘಟ್ಟದಲ್ಲಿ ನಾನಾ ಕಾರಣಕ್ಕೆ ಹಿಂದುಳಿದೆ.
ಸನಾತನ ಧರ್ಮ ಪರಂಪರೆ, ಸಂಸ್ಕöÈತಿ, ವೇದ ಪಾಂಡಿತ್ಯಗಳನ್ನು ಅಧ್ಯಾಯನ ಮಾಡುವ ಮೂಲಕ ವಿಶ್ವಕರ್ಮನ ವಂಶಜರು ಮತ್ತೆ ಸಾಮಾಜದ ಮುಖ್ಯ ವಾಹಿನಿಗೆ ಬರಬೇಕು. ಮಕ್ಕಳಿಗೆ ಉತ್ತಮ ಸಂಸ್ಕಾರ, ಕೌಶಲ್ಯಗಳನ್ನು ಕಲಿಸುವ ಮೂಲಕ ಉನ್ನತ ಪರಂಪರೆ ನಿರ್ಮಾಣ ಮಾಡುವಂತೆ ಶಾಸಕ ಈ ಸಂದರ್ಭದಲ್ಲಿ ಸಮಾಜಕ್ಕೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಶ ಸರಾಫ್, ಪ್ರಮುಖರಾದ ಕಾಳೇಶ ಬಡಿಗೇರ, ಮಂಜುನಾಥ ಪತ್ತಾರ, ಜೆ. ಮಂಜುನಾಥ, ವಿರೂಪಾಕ್ಷಿ, ಸುನಿಲ್ ಪತ್ತಾರ, ಸಿರಸಪ್ಪ ಪತ್ತಾರ, ಚಿದಂಬರ್, ಸುರೇಶ ಆಚಾರ್, ಪ್ರಶಾಂತ್ ಶಿಲ್ಪಿ, ಬಸವರಾಜ ಬಡಿಗೇರ, ಹನುಮೇಶ ಬಡಿಗೇರ, ಗುರುಸತಾರ್, ಸಣ್ಣಪ್ಪ ಕಮ್ಮಾರ್, ಗುರಪ್ಪ ಬಡಿಗೇರ ಹೊಸಳ್ಳಿ ಇತರರಿದ್ದರು.