Breaking News

ಕಾಂಗ್ರೆಸ್ ಎಸ್ ಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ನೇಮಕ.

Parashuram Kerehalli appointed as district vice-president of Congress SC unit.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಕೊಪ್ಪಳ ನಗರದಲ್ಲಿ ಕಾಂಗ್ರೆಸ್ ನ ಕಚೇರಿಯಲ್ಲಿ ನಡೆದ ಎಸ್ ಸಿ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾಗಿ ಪರಶುರಾಮ್ ಕೆರೆಹಳ್ಳಿ ಅವರು ನೇಮಕ ಗೊಂಡಿದ್ದಾರೆ. ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಅಮರೇಗೌಡ ಬಯ್ಯಾಪುರ, ಹಾಗೂ ಎಸ್ ಸಿ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ಆರ್.ಧರ್ಮಸೇನ್ ರವರು ಆದೇಶ ಮೇರೆಗೆ ಹಾಗೂ ಎಸ್ ಸಿ ಘಟಕದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಹೆಚ್. ಪೂಜಾರ್ ಅವರ ಆದೇಶ ಮೇರೆಗೆ, ಮತ್ತು ಸಚಿವರಾದ ಮಾನ್ಯ ಶ್ರೀ ಶಿವರಾಜ್ ಎಸ್ ತಂಗಡಗಿ ರವರ

ಸಹಕಾರದೊಂದಿಗೆ ಮತ್ತು ಜನಪ್ರಿಯ ಸಂಸದರಾದ ಮಾನ್ಯ ಶ್ರೀ ಕೆ.ರಾಜಶೇಖರ್ ಹಿಟ್ನಾಳ್ ರವರು ಮತ್ತು ಶಾಸಕರಾದ ಮಾನ್ಯ ಶ್ರೀ ಕೆ.ರಾಘವೇಂದ್ರ ಹಿಟ್ನಾಳ್ ರವರ ಸಹಕಾರದೊಂದಿಗೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ವರಿಷ್ಠರ ಸೂಚನೆ ಮೇರೆಗೆ ಪರಶುರಾಮ್ ಕೆರೆಹಳ್ಳಿ ರವರು ಎಸ್ ಸಿ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಕೊಪ್ಪಳ ನಗರದ ಕಾಂಗ್ರೆಸ್ ಕಾರ್ಯದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲೆಯ ಗೌರವಾನ್ವಿತ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ, ರಾಜ್ಯ ಕಮಿಟಿ ಪದಾಧಿಕಾರಿಗಳ, ಜಿಲ್ಲಾ ಪದಾಧಿಕಾರಿಗಳ ಹಾಗೂ ಕೊಪ್ಪಳ ಜಿಲ್ಲೆಯ ಎಸ್ ಸಿ ಘಟಕದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳ, ನಗರ ಪದಾಧಿಕಾರಿಗಳ ಸಮ್ಮುಖದಲ್ಲಿ ಕೂಕುನೂರು, ಯಲಬುರ್ಗಾ, ಹನುಮಸಾಗರ, ಕುಷ್ಟಗಿ, ಕನಕಗಿರಿ, ಕಾರಟಗಿ, ಗಂಗಾವತಿ ಕೊಪ್ಪಳ, ಎಲ್ಲಾ ಪದಾಧಿಕಾರಿಗಳು ಕಾರ್ಯಕರ್ತರ ಸಭೆಯಲ್ಲಿ ಪರಶುರಾಮ್ ಕೆರೆಹಳ್ಳಿ ಅವರಿಗೆ ಆದೇಶ ಪ್ರತಿಯನ್ನು ನೀಡಿದರು. ಪರಶುರಾಮ್ ಕೆರೆಹಳ್ಳಿ ರವರು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು ವರ್ಷಗಳಿಂದಲೂ ನಿರಂತರವಾಗಿ ಪಕ್ಷದ ಸಂಘಟನೆ ಬಲವರ್ಧನೆಗಾಗಿ ಶ್ರಮಿಸಿದ್ದು, ಒಬ್ಬ ನಿಷ್ಠಾವಂತ ಪ್ರಾಮಾಣಿಕ, ಕಾಂಗ್ರೆಸ್ ಕಾರ್ಯಕರ್ತನಾಗಿ, ಸಕ್ರಿಯವಾಗಿ ಪಕ್ಷದಲ್ಲಿ ತೊಡಸಿಕೊಂಡು, ಕಾಂಗ್ರೆಸ್ ಪಕ್ಷವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಪಕ್ಷ ಸಂಘಟನೆಯಲ್ಲಿ ಭಾಗವಹಿಸಿ ಪಕ್ಷ ಕಟ್ಟಲು ಶ್ರಮಿಸಿದ್ದು, ಕೊಪ್ಪಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ವ ಜನಾಂಗದ ವಿಶ್ವಾಸದೊಂದಿಗೆ, ಪ್ರತಿ ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಶ್ರಮಿಸಿದ್ದಾರೆ.
ಈ ಸಂದರ್ಭದಲ್ಲಿ ಜನಪ್ರಿಯ ಸಂಸದರಾದ ಮಾನ್ಯ ಶ್ರೀ ರಾಜಶೇಖರ್ ಹಿಟ್ನಾಳ್ ಅವರು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೂಳಪ್ಪ ಹಲಗೇರಿ ರವರು, ಎಸ್ ಸಿ ಘಟಕದ ರಾಜ್ಯ ಉಪಾಧ್ಯಕ್ಷರಾದ ಕನ್ನಿರಾಮ್ ರಾಥೋಡ್ ಗುಲ್ಬರ್ಗಾ, ಕೆಪಿಸಿಸಿ ರಾಜ್ಯ ಸಂಚಾಲಕರಾದ ನಾಗರಾಜ್ ನಾಯಕ್ ಚೆನ್ನಗಿರಿ , ಕೆಪಿಸಿಸಿ ಸಂಚಾಲಕರಾದ ಕಾಳಯ್ಯ ಮೈಸೂರ, ಎಸ್ ಸಿ ರಾಜ್ಯ ಕಮಿಟಿ ಸದಸ್ಯರುಗಳಾದ, ಶುಕ್ರರಾಜ್ ತಾಳಕೇರಿ, ದೇವೇಂದ್ರಪ್ಪ ಪೂಜಾರ್ ದದೆಗಲ್, ಶರಣಮ್ಮ ಯಲಬುರ್ಗಾ, ಜಿಲ್ಲಾ ಉಪಾಧ್ಯಕ್ಷರಾದ, ತಿಪ್ಪಣ್ಣ ಮ್ಯಾಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹನುಮಂತಪ್ಪ ಸಿಂದೋಗಿ, ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಮೂಲಿ ಮನಿ, ಬಸವರಾಜ ಬೇವಿನಕಟ್ಟಿ, ರಮೇಶ ಚಲವಾದಿ ಯಲಬುರ್ಗಾ, ಕುಷ್ಟಗಿ, ಎಲ್ಲಾ ಎಸ್ ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ, ಈಶಪ್ಪ ಕೂಕುನೂರು, ಚಂದ್ರು ಕುಷ್ಟಗಿ, ಶಿವಾನಂದ್ ಬಣಕಾರ್ ಯಲಬುರ್ಗಾ, ಶಾಂತಪ್ಪ ಬಸರಿಗಿಡ ಕನಕಗಿರಿ, ಶಿವಕುಮಾರ್ ಇಳಿಗಿನೂರು ಕಾರಟಗಿ, ಯಮನೂರಪ್ಪ ದನಕನದೊಡ್ಡಿ ಗಂಗಾವತಿ, ಎಲ್ಲಾ ಎಸ್ ಸಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ಲಲಿತ ಕುಮಾರ ಮ್ಯಾಗೇರಿ ಛಲವಾದಿ, ಕಳಕೇಶ ಸೂಡಿ ಯಲಬುರ್ಗಾ, ಪಾಮಣ್ಣ ಕನಕಗಿರಿ, ಮಲ್ಲೇಶ್ ದೇವರಮನಿ ಗಂಗಾವತಿ. ಹಾಗೂ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *