Make graduate education a platform for building a bright future: Dr. Somaraju

ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು ಸ್ಮಾರಕ ಮಹಾವಿದ್ಯಾಲಯದಲ್ಲಿ ೨೦೨೫-೨೦೨೬ ನೇ ಸಾಲಿನ ಪ್ರಥಮ ವರ್ಷದ ಬಿ.ಎ, ಬಿ.ಕಾಂ,ಬಿ.ಸಿ.ಎ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಆಡಳಿತ ಮಂಡಳಿ ಕಾರ್ಯದರ್ಶಿ ಡಾ.ಸೋಮರಾಜು ಮಾತನಾಡಿ, ನಿಮ್ಮ ಉಜ್ವಲ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಇದು ಸಕಾಲವಾಗಿದ್ದು, ಎಲ್ಲಾ ರೀತಿಯ ಆಲೋಚಿಸುವ ಶಕ್ತಿ ನಿಮ್ಮಲ್ಲಿ ವೃದ್ಧಿಯಾಗಿತ್ತದೆ, ಒಳಿತು ಕೆಡುಕುಗಳನ್ನು ಸೂಕ್ಷö್ಮವಾಗಿ ಅವಲೋಕಿಸಿ ಅತ್ಯುತ್ತಮ ಸಾಧನೆಯ ಮೂಲಕ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿಜಯಾನಂದ ಅ. ವಗ್ಗೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಬಿ.ಸಿ.ಐಗೋಳ, ಪ್ರೊ. ಎಫ್.ಎಚ್.ಚಿತ್ರಗಾರ ಭಾಗವಹಸಿದ್ದರು. ಅದ್ಧೂರಿ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು
Kalyanasiri Kannada News Live 24×7 | News Karnataka
