More than 350 people benefited from a massive free Ayurvedic treatment camp in Rampur village.
ಗಂಗಾವತಿ: ಇಂದು ಶನಿವಾರಆಯುರ್ವೇದ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ , ಆಯುಷ್ ಫೆರ್ಡೇಷನ್ ಆಫ್ ಇಂಡಿಯಾ ಮತ್ತು ಗ್ರಾಮಪಂಚಾಯತ್ ಮಲ್ಲಾಪುರದವತಿಯಿಂದ ರಾಂಪುರ ಗ್ರಾಮದಲ್ಲಿ ಬೃಹತ್ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.



ಕಾರ್ಯಕ್ರಮದಲ್ಲಿ ಆಯುಷ್ ಫೆರ್ಡೇಷನ್ ಆಫ್ ಇಂಡಿಯಾ ದ ಜಿಲ್ಲಾಧ್ಯಕ್ಷರಾದ ಡಾ. ಮಗದಾಳ , ಡಾ. ಮಹಾಲಿಂಗಪ್ಪ ಕಾಳಗೆ , ಡಾ. ತ್ರಿವೇಣಿ ಗೌಡರ್ , ಡಾ. ಶ್ರೇಯಾ ಭಾಗವಹಸಿದ್ದರು .
ಗ್ರಾಮಪಂಚಾಯುತಿ ಪಿ.ಡಿ.ಓ ಕೃಷ್ಣ, ಸದಸ್ಯರಾದ ಕಾಶಿ ರಾವ್ , ವೆಂಕಟೇಶ್ , ಭಾಸ್ಕರ್ ರಾವ್ ಮತ್ತು ಊರಿನ ಹಿರಿಯರು ಭಾಗವಹಿಸಿದ್ದರು.
ಆಯುಷ್ ಇಲಾಖೆಯಿಂದ ಡಾ. ಗುರುರಾಜ ಉಮಚಗಿ , ಡಾ. ಕವಿತಾ ಹೆಚ್ .ಎಫ್. ಡಾ. ಭಾನುಪ್ರಕಾಶ ,ಡಾ. ವೀಣಾ , ಡಾ. ಜಯಶ್ರೀ ಭಾಗವಹಿಸದ್ದರು.
ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರು ಆಯುರ್ವೇದದ ಪ್ರಾಮುಖ್ಯತೆ ಇಂದು ಹೆಚ್ಚಾಗುತ್ತಿದೆ . ಸರ್ಕಾರವು ಆಯುರ್ವೇದ ದಿನಾಚರಣೆಯ ಮೂಲಕ ಆಯುರ್ವೇದ ಚಿಕಿತ್ಸ ಪದ್ದತಿಯನ್ನು ಮುನ್ನಲೆಗೆ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 350ಕ್ಕೂ ಹೆಚ್ಚು ಜನರು ಈ ಚಿಕಿತ್ಸಾ ಶಿಬಿರದ ಉಪಯೋಗವನ್ನು ಪಡೆದರು. ಕಾರ್ಯಕ್ರಮದಲ್ಲಿ ಮುಖ್ಯವಾಗಿ 65 ಜನ ರೋಗಿಗಳಿಗೆ ಸಂಧಿವಾತಕ್ಕಾಗಿ ಅಭ್ಯಂಗ ಮತ್ತು ನಾಡಿ ಸ್ವೇದ ಪಂಚಕರ್ಮ ಚಿಕಿತ್ಸೆ ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮಲ್ಲಾಪುರ ಗ್ರಾಮದ ವೈದ್ಯಾಧಿಕಾರಿಗಳಾದ ಡಾ.ರಾಜಶೇಖರ ನಾರನಾಳ ನಿರೂಪಿಸಿದರು. ವಂದನಾರ್ಪಣೆಯನ್ನು ಡಾ. ವಿಜಯ್ ಗೌಡರು ನೇರವೇರಿಸಿದರು.