Let's celebrate Valmiki Jayanti as per the wishes of the community: MLA M R Manjunath
ವರದಿ: ಬಂಗಾರಪ್ಪ .ಸಿ.
ಹನೂರು :ಅಧಿಕಾರಿಗಳು ಕಡ್ಡಾಯವಾಗಿ ವಾಲ್ಮೀಕಿ ಜಯಂತಿ ಸೇರಿದಂತೆ ಯಾವುದೇ ಜಯಂತಿಗಳನ್ನು ಕೇಂದ್ರ ಸ್ಥಳದಲ್ಲಿದ್ದು ಎಲ್ಲಾರೊಡಗೂಡಿ ಸಾರ್ವಜನಿಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ಆಚರಿಸಬೇಕು ಎಂದರು .



ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ವಾಲ್ಮೀಕಿ ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್
ಸಭೆಯಲ್ಲಿ ಹಾಜರಿರುವ ಎಲ್ಲಾ ಸ್ಥಳೀಯ ಮುಖಂಡರು ಮಾತನಾಡಿದ್ದಿರ ಈ ಬಾರಿ ಹನೂರಿನಲ್ಲಿ ವಾಲ್ಮೀಕಿ ಜಯಂತಿಯನ್ನು ಹೆಚ್ಚು ಅದ್ದೂರಿಯಾಗಿ,ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಸಹಭಾಗಿತ್ವದೊಂದಿಗೆ ಆಚರಿಸಬೇಕೆಂಬ ಬೇಡಿಕೆಯನ್ನು ಮಂಡಿಸಿರುವುದು ಬಹಳ ಸಂತೋಷದ ಸಂಗತಿ ,ಅಧಿಕಾರಿಗಳು ಅಗತ್ಯ ಸಹಕಾರ ನೀಡಲು ಮುಂದಾಗಬೇಕೆಂದು ಗಮನ ಸೆಳೆದರು.
ನಂತರ ಮಾತನಾಡಿ ಶಾಸಕರು ವಾಲ್ಮೀಕಿ ಮಹರ್ಷಿಯವರ ಜೀವನ ಸಂದೇಶಗಳು ಇಂದು ಸಮಾಜಕ್ಕೆ ಮಾರ್ಗದರ್ಶಕವಾಗಿವೆ. ಈ ಆಚರಣೆಯನ್ನು ಸಾಂಸ್ಕೃತಿಕ, ಧಾರ್ಮಿಕ ಹಾಗೂ ಶಿಸ್ತುಬದ್ಧ ರೀತಿಯಲ್ಲಿ ಆಚರಿಸಲು ಹಮ್ಮಿಕೊಳ್ಳಲಾಗುಗಮವುದು ಎಲ್ಲಾ ಇಲಾಖೆಗಳ
ಸಹಕಾರದೊಂದಿಗೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಮ್ತಾಜ್ ಬಾನು,ತಾಲೂಕು ದಂಡಾಧಿಕಾರಿ ಚೈತ್ರಾ, ಇಓ ಉಮೇಶ್, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಧಿಕಾರಿ ರಾಜೇಶ್, ಚೆಸ್ಕಾಂ ಎಇಇ ರಂಗಸ್ವಾಮಿ, ಕುಡಿರುವ ನೀರಿನ ನೈರ್ಮಲ್ಯ ಇಲಾಖೆಯ ಎಇಇ ಸುಧನ್ವನಾಗ್, ತಾಲೂಕು ಆರೋಗ್ಯಾಧಿಕಾರಿ ಪ್ರಕಾಶ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅಂಬಿಕಾ,ತಾಲೂಕು ನಾಯಕ ಸಮುದಾಯದ ಅಧ್ಯಕ್ಷರಾದ ಪುಟ್ಟವಿರನಾಯಕ,ಪ್ರಧಾನ ಕಾರ್ಯದರ್ಶಿ ರಾಚಪ್ಪ, ಉಪಾಧ್ಯಕ್ಷರಾದ ವೆಂಕಟಮಾದು,ತಾಲೂಕಿನ ಮುಖಂಡರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು.