
Dr. Amaresh Patil participates in the Anjanadri Hill cleanliness program
ಗಂಗಾವತಿ: ಪರಿಸರ ಕೃಷಿಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸೇವಾ ಸಂಸ್ಥೆ, ಚಿಕ್ಕರಾಂಪುರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಅಂಗಡಿ ವ್ಯಾಪಾರಸ್ಥರು ಮತ್ತು ಗ್ರಾಮಸ್ಥರೊಂದಗೆ ಖ್ಯಾತ ಮಕ್ಳ ತಜ್ಞರಾದ ಡಾ.ಅಮರೇಶ ಪಾಟೀಲ್ ಪಾಲ್ಗೊಂಡು ಮಾತನಾಡಿ

ಸ್ವಚ್ಚತಾ ಕಾರ್ಯಕ್ರಮದ ನಂತರ ಮುಖ್ಯವಾಗಿ ನಾವು ಮಾಡುವ ಮುಂಜಾಗೃತ ಕ್ರಮಗಳ ಕುರಿತು ಅವರೊಟ್ಟಿಗೆ ಮಾತನಾಡುತ್ತ ಈಪ್ರದೇಶ
ಖ್ಯಾತ ಪ್ರವಾಸಿ ತಾಣವಾಗಿ ಬೆಳೆದು ನಿಂತಿರುವ ನಮ್ಮ ಭಾಗದ ಪ್ರಾಣದೇವರಾದ ಕಿಷ್ಕಿಂದೆಯ ಹನುಮನ ದರುಶನಕ್ಕೆ ದಿನವಿಡೀ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುತ್ತಾರೆ.
ಈ ಸಮಯದಲ್ಲಿ ಸ್ಥಳಿಯರಾದ ನಾವುಗಳು ಈ ಪವಿತ್ರ ಪ್ರದೇಶವನ್ನ ಸ್ವಚ್ಚವಾಗಿಟ್ಟು ಕೊಳ್ಳುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನ ಕಡಿಮೆ ಮಾಡಿಸುವುದು ನಮ್ಮಗಳ ಆದ್ಯ ಕರ್ತವ್ಯ ಮತ್ತು ಆಗಮಿಸಿದ ಪ್ರವಾಸಿಗರ ಜವಬ್ದಾರಿ ಕೂಡ ಹೌದು ಕಾರಣ ಈ ಪ್ರದೇಶದಲ್ಲಿ ಹೆಚ್ಚು ಪ್ಲಾಸ್ಟಿಕ್ ಬಳಕೆಗೆ ಒತ್ತು ಕೊಡದಿರುವ ಕುರಿತು ಮುಂದು ವರಿದು ಮಾತನಾಡಿ
ಬಾಲಿ ಎಂಬ ದೇಶದಲ್ಲಿ ಹಿಂದೂ ದೇವಾಲಯಗಳಲ್ಲಿ ಕಡ್ಡಾಯವಾಗಿ ಸಾಂಸ್ಕೃತಿಕ ವಸ್ತ್ರ ಧರಿಸುವ ಮೂಲಕ ದರ್ಶನ ಪಡೆಯುವ ಪದ್ದತಿ ಇದೆ. ಅದೇ ರೀತಿ ಕಲೆ, ಸಂಸ್ಕೃತಿ, ನಾಡು, ನುಡಿಗೆ ಹೆಸರಾಗಿರುವ ನಮ್ಮ ಭಾರತ ದೇಶ, ನಮ್ಮ ಕರ್ನಾಟಕ ರಾಜ್ಯ, ಈ ಜಗದ್ವಿಖ್ಯಾತ ಹನುಮನ ದೇವಸ್ಥಾನಕ್ಕೂ ಸಾಂಸ್ಕೃತಿಕ ಸಮವಸ್ರ್ತ ಧರಿಸಿಕೊಂಡು ದರ್ಶನ ಮಾಡುವ ವ್ಯವಸ್ಥೆಯನ್ನ ಸ್ಥಳಿಯ ಆಡಳಿತ ಮಂಡಳಿ ಮಾಡಬೇಕು ಹಾಗೂ ಸ್ಥಳಿಯ ಅಂಗಡಿಯವರು ಉಡುಗೆಗಳನ್ನ ಬಾಡಿಗೆ ಕೊಡುವ ಮೂಲಕವಾದರು ಸಂಪ್ರದಾಯ ವಸ್ತ್ರದೊಂದಿಗೆ ಹನುಮನ ದರ್ಶನ ಮಾಡಿಸಲು ಆಲೋಚಿಸಬೇಕೆಂದು
ಅದರ ಜೊತೆ ಜೊತೆಗೆ ಈ ಭಾಗದ ಜನರು ಉದ್ಯೋಗ ಹರಸಿ ಬೆಂಗಳೂರು ಮುಂಬಾಯಿಗೆ ಗುಳೇ ಹೋಗುವಯದನ್ನ ತಪ್ಪಿಸಲು, ಅಂಗಡಿ ಮುಂಗಟ್ಟುಗಳಲ್ಲಿ ಎತೆಚ್ಚವಾಗಿ ಮಾರುವ ಮೈದಾ ಮಿಶ್ರಿತ ಬ್ರೇಡ್, ಬಿಸ್ಕೇಟ್, ವಿದೇಶಿ ತಂಪು ಪಾನೀಯ, ಚಿಪ್ಸ್ ಗಳ ಬದಲು, ಎಳೆನೀರು, ಮನೆಯಲ್ಲಿ ಮಾಡಿದ ದೇಶಿ ಸಿಹಿ ತಿಂಡಿ ತಿನಿಸುಗಳನ್ನ ಹಾಗೂ ಪ್ಲಾಸ್ಟಿಕ್ ನ ಬದಲು ಕೈಯಿಂದ ಮಾಡಿದ ಕರಕುಶಲ ವಸ್ತುಗಳನ್ನ ಮಾರುವ ಮೂಲಕ ಸ್ಥಳಿಯವಾಗಿ ಉದ್ಯೋಗವನ್ನ ಸೃಷ್ಟಿ ಮಾಡಿಕೊಳ್ಳಬಹುದು ಎಂದು ಸಲಹೆಯ ಮಾತುಗಳನ್ನಾಡಿದೆ.
ಈ ಸಮಯದಲ್ಲಿ ಸಂಸ್ಥೆ ಸದಸ್ಯರು ಹಾಗೂ ಸ್ಥಳಿಯರು ಸಕಾರಾತ್ಮಕವಾಗಿ ಸ್ಪಂದಿಸುತ್ತ ತಮ್ಮಲ್ಲಿರುವ ಕೆಲವು ಸಮಸ್ಯೆಗಳನ್ನ ನನ್ನೊಂದಿಗೆ ಹಂಚಿಕೊಳ್ಳುವ ಮುಖೇನ,ಸನ್ಮಾನಿಸಿ ಸತ್ಕರಿಸಿದರು. ಎಮದು ತಿಳಿಸಿದರು.




