Rotary Club Rice Bowl service work commendable: Rotary Governor N.K. Raveedra




ಗಂಗಾವತಿ: ರೋಟರಿ ಕ್ಲಬ್ ರೈಸ್ ಬೌಲ್ ನ ಮಹಿಳಾ ಪದಾಧಿಕಾರಿಗಳು ಮತ್ತು ಸದಸ್ಯರು ಒಂದು ವರ್ಷದ ಅವಧಿಯಲ್ಲಿ ಸಾಕಷ್ಟು ಸಾಮಾಜಿಕ ಶೈಕ್ಷಣಿಕ ಹಾಗೂ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ರೋಟರಿಯ ಜಿಲ್ಲಾ ಗವರ್ನರ್ ಎನ್ ಕೆ ರವೀಂದ್ರ ಹೇಳಿದರು.
ಅವರು ನಗರದ ವಾರ್ಷಿಕ ವರದಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ವೃದ್ದರು, ಅಶಕ್ತರು, ದುರ್ಬಲರ ಏಳಿಗೆಗಾಗಿ ಅಗತ್ಯ ನೆರವು ಒದಗಿಸಲು ಮುಂದಾಗಿ ಎಂದು ಸಲಹೆ ನೀಡಿದರು.
ಅಸಿಸ್ಟೆಂಟ್ ಗವರ್ನರ್‌ರಾಜೇಶ್ ಕೋರಿ ಶೆಟ್ಟರ್ ಮಾತನಾಡಿ, ಹಣ ಎಷ್ಟೇ ಇರಲಿ ಸೇವಾ ಗುಣ ಇರಬೇಕು, ಹಣ ಉಳ್ಳವರಿಗೆ ಸಹಾಯ ಮಾಡುವ ಮನಸ್ಥಿತಿ ಇರುತ್ತದೆ ಆದರೆ ಸದ್ವಿನಿಯೋಗದ ಹಾದಿ ಗೊತ್ತಿರುವುದಿಲ್ಲ ಅಂಥ ಕಾರ್ಯ ಮಹಿಳೆಯರು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಗಂಗಾವತಿ ರೋಟರಿ ಕ್ಲಬ್ ರೈಸ್ ಬೌಲ್ ಅಧ್ಯಕ್ಷರಾಗಿರುವ ಗೀತಾ ಚೌದರಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಸದಸ್ಯರುಗಳಾದ ದ್ರಾಕ್ಷಾಯಿಣಿ ಸೋಫಿಯಾ ರಾಣಿ ಲಕ್ಷಿ÷್ಮ ಮಾಲಿಪಾಟೀಲ್ ಬಸಮ್ಮ ಹಣವಾಳ ಹಾಗೂ ಶಶಿಕಲಾ ಮರಕುಂಬಿ ಅವರುಗಳು ರೋಟರಿ ಜಿಲ್ಲಾ ಗವರ್ನರ್ ಎಂ ಕೆ ರವೀಂದ್ರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು ಇದೆ ವೇಳೆ ರೋಟರಿ ಕ್ಲಬ್ ರೈಸ್ ಬೌಲ್ ಗೆ ನೂತನ ಸದಸ್ಯರುಗಳಾಗಿ ಆಯ್ಕೆಯಾಗಿರುವ ಅನ್ನಪೂರ್ಣ ಸಿಂಗ್ ಶಾಹಿನಾ ಕೌಸರ್ ಲಲಿತಾ ನಾಗರಾಜ್ ಹಾಗೂ ಭುವನೇಶ್ವರಿ ಅವರುಗಳನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷರಾಗಿರುವ ಟಿ ಆಂಜನೇಯ ಹಾಗೂ ಹೊಸಪೇಟೆಯ ರೋಟರಿ ಕ್ಲಬ್ ನ ಹಿರಿಯ ರಾಗಿರುವ ಈಶ್ವರಪ್ಪ ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು