Municipal Commissioner’s notice to the public to leave




ಗಂಗಾವತಿ.:ನಗರದ ಸಮಸ್ಥ ಸಾರ್ವಜನಿಕರ ಆರೋಗ್ಯದ ‘ಹಿತದೃಷ್ಟಿಯಿಂದ ಕರ್ನಾಟಕ ನಗರ ನೀರು ಸರಬಾರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಗರದ ೦೧ ರಿಂದ ೩೫ ರವರಗಿನ ವಾರ್ಡಗಳಲ್ಲಿ ನಿರ್ಮಿಸಿರುವ ಒಳಚರಂಡಿ ವ್ಯವಸ್ಥೆಯ ಸಂಪರ್ಕ ಉಪಯೋಗವನ್ನು ಪಡೆದುಕೊಳ್ಳಬೇಕು. ಪ್ರತಿಯೊಂದು ಮನೆಯ ಶೌಚಾಲಯದ ತ್ಯಾಜ್ಯ, ಸ್ನಾನದ, ಅಡುಗಡೆ ಮನೆಯ ನೀರನ್ನು ತಮ್ಮ ಮನೆಯಿಂದ ನೇರವಾಗಿ ಒಳಚರಂಡಿಗೆ ಬಿಡುವ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ ಸಾರ್ವಜನಿರಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಅವರು ಮಾಧ್ಯಮಗಳ ಮೂಲಕ ನಗರದ ನಾಗರೀಕರಿಗೆ ಮನವಿ ಮಾಡಿದ್ದಾರೆ. ಜನರು ಬಯಲು ಪ್ರದೇಶದಲ್ಲಿ ಶೌಚವನ್ನು ಮಾಡುವುದರಿಂದ ಸ್ನಾನದ ಹಾಗೂ ಮನೆಯ ಬಳಕೆ ನೀರನ್ನು ರಸ್ತೆಗಳಲ್ಲಿ ಹಾಗೂ ತೆರೆದ ಚರಂಡಿಗಳಲ್ಲಿ ಬಿಡುವುದರಿಂದ ಸೊಳ್ಳೆಗಳು ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಇತ್ಯಾದಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಸುತ್ತೋಲೆಗಳ ಪ್ರಕಾರ ಮನುಷ್ಯರ ಮೂಲಕ ಶೌಚಾಲಯದ ತ್ಯಾಜ್ಯವನ್ನು ಸ್ವಚ್ಛಗೊಳಿಸವುದು ಅಪರಾಧವಾಗಿರುತ್ತದೆ. ಆದುದರಿಂದ ಜನರು ಸೆಪ್ಟಿಕ್ ಟ್ಯಾಂಕ್/ಇAಗು ಗುಂಡಿ ಇತ್ಯಾದಿಗಳನ್ನು ಬಳಸದೆ. ನಗರದಲ್ಲಿನ ಒಳಚರಂಡಿ ವ್ಯವಸ್ಥೆಯ ಉಪಯೋಗ ಮಾಡಿಕೊಳ್ಳತಕ್ಕದ್ದು. ಜನರು ತಮ್ಮ ಮನೆಯ ಶೌಚಾಲಯಗಳ ಮೂಲಕ ಸಾರ್ವಜನಿಕ ಒಳಚರಂಡಿಯಲ್ಲಿ ಸಿಗರೇಟ್, ಡಯಪರ್, ಔಷದಿ ಕಾಗದ/ಪ್ಲಾಸ್ಟಿಕ್ ತಟ್ಟೆ ಲೋಟಿ ಬಟ್ಟಲು, ಚಮಚ, ಆಟಿಕೆಗಳನ್ನು ಮನೆ ಕಸ, ನ್ಯಾಪಕಿನ್ ಇತ್ಯಾದಿ ನೀರಲ್ಲಿ ಕರಗದ ವಸ್ತುಗಳನ್ನು ಹರಿದು ಬಿಡಬಾರದು. ಈ ವಸ್ತುಗಳು ಒಳಚರಂಡಿ ಕೊಳವೆ ಮಾರ್ಗವನ್ನು ಬ್ಲಾಕ್ ಮಾಡಿ ಚೇಂಬರ್‌ನಲ್ಲಿ ಮಲೀನ ನೀರು ತುಂಬಿ ರಸ್ತೆಯ ಮೇಲೆ ಹರಿದು ಆನಾರೋಗ್ಯಕರ ವಾತಾವರಣ ಉಂಟಾಗಲು ಕಾರಣವಾಗುತ್ತದೆ. ತಮ್ಮ ಮನೆಯ ಶೌಚಾಲಯ, ಸ್ನಾನ ಗೃಹ ಹಾಗೂ ಆಡುಗೆ ಮನೆಯ ನೀರನ್ನು ನಗರದ ಒಳಚರಂಡಿ ವ್ಯವಸ್ಥೆಗೆ ಬಿಡಬೇಕು, ಇದಕ್ಕಾಗಿ ಅಡಿಗೆಮನೆ, ಶೌಚಾಲಯ ಹಾಗು ಸ್ನಾನ ಗೃಹಗಳಿಗೆ ಜಾಲರಿ ಆಳವಡಿಸಿ ಜಂಕ್ಷನ್ ಚೇಂಬರ್ ನಿರ್ಮಿಸಿ, ಕಾಮನ್ ಚೇಂಬರ್ ಮೂಲಕ ಒಳಚರಂಡಿ ವ್ಯವಸ್ಥೆಗೆ ಜೋಡಿಸಬೇಕು. ಕರ್ನಾಟಕ ಜಲ ಮಂಡಳಿ ಇಲಾಖೆಯ ತಾಂತ್ರಿಕದAತೆ ಚೇಂಬರ್ ಮೂಲಕ ಒಳಚರಂಡಿ ಸಂಪರ್ಕ ಮಾಡಿಕೊಳ್ಳತಕ್ಕದ್ದು.
ಮತ್ತು ಎಲ್ಲಾ ವಿಧದ ಗೃಹ/ವಾಣಿಜ್ಯ ಉದ್ದೇಶ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕವನ್ನು ನಗರಸಭೆಯಲ್ಲಿ ನೊಂದಯಿತ ಗುತ್ತಿಗೆದಾರರಿಂದ/ಪ್ಲAಬಿAಗ್ ಕೆಲಸಗಾರರಿಂದ ಒಳಚರಂಡಿ ಜೋಡಣೆ ಪಡೆಯುವ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಹಾಗೂ ನಗರಸಭೆ ಸಂಪರ್ಕ ಜೋಡಣೆಗೆ ನಿಗದಿತ ಶುಲ್ಕ ಪಾವತಿಸಿ ಪರವಾನಿಗೆಯನ್ನು ಪಡೆಯತಕ್ಕದ್ದು. ಒಳಚರಂಡಿ ಗೃಹ ಸಂಪರ್ಕವನ್ನು ತಕ್ಷಣದಿಂದ ಪಡೆಯಲು ಈ ಮೂಲಕ ತಿಳಿಯಪಡಿಸಿದೆ. ತಮ್ಮ ಮನೆಯ ಒಳಚರಂಡಿ ಸಂಪರ್ಕ ಕಲ್ಪಿಸಿರುವ ಗುತ್ತಿಗೆದಾರರು/ಪ್ಲಂಬಿAಗ್‌ದಾರರು ನಿರ್ವಹಿಸುವ ಕೆಲಸಕ್ಕೆ ಸೂಕ್ತ ರಶೀದಿಯನ್ನು ೦೧ ತಿಂಗಳೊಳಗಾಗಿ ಪಡೆಯತಕ್ಕದ್ದು.
ಈಗಾಗಲೇ ನಗರಸಭೆಯಿಂದ ಒಳಚರಂಡಿ ಜೋಡಣೆ ಸಂಪರ್ಕಕ್ಕೆ ಪರವಾನಿಗೆ ಪಡೆಯದೆ ಆಕ್ರಮವಾಗಿ ತಮ್ಮ ಗೃಹ/ವಾಣಿಜ್ಯ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸಿಕೊಂಡಿದ್ದಲ್ಲಿ ತಕ್ಷಣವೇ ಈ ಪ್ರಕಟಣೆಗೊಂಡ ೩೦ ದಿನಗಳ ಒಳಗಾಗಿ ಸಕ್ರಮಗೊಳಿಸಿಕೊಳ್ಳತಕ್ಕದು. ಇಲ್ಲದಿದ್ದಲ್ಲಿ ಪರೀವಿಕ್ಷಣೆಯ ಸಂದರ್ಭದಲ್ಲಿ ಆಕ್ರಮವೆಂದು ತಿಳದು ಬಂದಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ ರನ್ವಯ ನಿಯಾಮಾನುಸಾರ ದಂಡ ವಿಧಿಸಲಾಗುವುದು. ಇದಕ್ಕೆ ಆಸ್ಪದ ಕೊಡದೆ ಒಳಚರಂಡಿ ಜೋಡಣೆ ಸಂಪರ್ಕವನ್ನು ತಕ್ಷಣ