Appeal to MLAs to provide a venue for our association to hold press conferences
ಕಲ್ಯಾಣ ಸಿರಿ ಸುದ್ದಿ



ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘಕ್ಕೆ ಕೂಡಲೇ ಪತ್ರಿಕಾ ಭವನದ ವ್ಯವಸ್ಥೆ ಕಲ್ಪಿಸಿಕೊಡಬೇ ಕೆಂದು ಒತ್ತಾಯಿಸಿ ಶಾಸಕ ಗಾಲಿ ಜನಾರ್ದನರೆಡ್ಡಿ ಯವರಿಗೆ ಮನವಿ ಸಲ್ಲಿಸಲಾಯಿತು.
ಸಂಘವು ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ರಚನೆಯಾಗಿ ಉದ್ಘಾಟನೆ ಗೊಂಡು, ಈ ಸಂಘದ ಅಂಗಸಂಸ್ಥೆಗಳಾಗಿ ಹಲವು ಜಿಲ್ಲಾ ಸಮಿತಿಗಳು ಹಾಗೂ ತಾಲ್ಲೂಕು ಸಮಿತಿಗಳು ಈಗಾಗಲೇ ರಚನೆ ಯಾಗಿವೆ. ಅದರಂತೆ ನಮ್ಮ ಗಂಗಾವತಿ ತಾಲ್ಲೂಕು ಸಮಿತಿಯ ಕೂಡ ಸಕ್ರಿಯಗೊಂಡಿದ್ದು ಮತ್ತು ನಮ್ಮ ಸಂಘದಿಂದ ಪತ್ರಿಕಾಗೋಷ್ಠಿಗಳನ್ನು ನಡೆಸಲು ಸೂಕ್ತ ಸ್ಥಳಾವಕಾಶದ ಅಗತ್ಯವಿದೆ. ಕೂಡಲೇ ನಮ್ಮ ಸಂಘಕ್ಕೆ ಪತ್ರಿಕಾ ಭವನದ ವ್ಯವಸ್ಥೆ ಕಲ್ಪಿಸಿಕೊಡಬೇ ಕೆಂದು ಶಾಸಕ ಗಾಲಿ ಜನಾರ್ದನರೆಡ್ಡಿ ಯವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಶಾಸಕರು ನಿಮಗೆ ಬೇಗನೇ ಪತ್ರಿಕಾ ಭವನದ ವ್ಯವಸ್ಥೆ ಮಾಡಿಕೊಡುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಕೋಟೆ, ಸಂಘದ ತಾಲೂಕ ಅಧ್ಯಕ್ಷ ಸಿ.ಡಿ ರಾಮಕೃಷ್ಣ, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ಆರ್ ಚನ್ನಬಸವ ಮಾನ್ವಿ, ಸದಸ್ಯರಾದ ಮಂಜುನಾಥ ವಣಗೇರಿ ಸೇರಿದಂತೆ ನಮ್ಮ ಸಂಘಕ್ಕೆ ಬೆಂಬಲ ನೀಡಿದ ಸುರೇಶ ಹಾಗೂ ಇತರ ಸದಸ್ಯರಿದ್ದರು.