Announcement of new office bearers of Ganga Matastha Taluk and discussion on caste census.. Hanumesh Batari
ಗಂಗಾವತಿ:ತಾಲೂಕು ಗಂಗಾಮತ ಸಮಾಜದ ನೂತನ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮ ತಾಲೂಕು ಗಂಗಾಮತ ಸಮಾಜ ಅಧ್ಯಕ್ಷರಾದ ಹನುಮೇಶ ಬಟಾರಿ.. ಅಧ್ಯಕ್ಷತೆಯಲ್ಲಿ ನಡೆಯಿತು ಅದರ ಜೊತೆಗೆ ಜಾತಿ ಜನಗಣತಿಯ ಬಗ್ಗೆ ಚರ್ಚೆಯು ನಡೆಯಿತು
ಜಾತಿಗಣತಿ ಸಮೀಕ್ಷೆಯು ಆರಂಭವಾಗುತ್ತಿದ್ದು, ಗಂಗಾಮತ ಸಮಾಜದವರು ಜಾತಿ ಕಲಂನಲ್ಲಿ ಬೆಸ್ತರ ಎಂದು ನಮೂದಿಸಬೇಕು ಎಂದು ಗಂಗಾಮತ ಸಮಾಜದ ಜಿಲ್ಲಾ ಗೌರವಾಧ್ಯಕ್ಷರಾದ ರಾಜಶೇಖರಪ್ಪ ಮುಸ್ಟೂರ ಹೇಳಿದರು.
ನಗರದ ಸುಣಗಾರ ಓಣಿಯಲ್ಲಿನ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಗಂಗಾಮತ ಸಮಾಜದ ವತಿಯಿಂದ ಜಾತಿಗಣತಿಯ ಕುರಿತು ಬುಧವಾರ ಹಮ್ಮಿಕೊಂಡ ಪೂವ೯ಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗಾಮತ ಸಮಾಜದವರು ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿ ಇದ್ದದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಜಾತಿಸಮೀಕ್ಷೆಯಲ್ಲಿ ನೊಂದಾಣಿಯನ್ನು ಮಾಡಬೇಕಾಗಿದೆ. ಹಾಗಾಗಿ ಗಂಗಾಮತ ಸಮಾಜದವರು ಮೂಲತ ಬೆಸ್ತರಾಗಿದ್ದು, ಅದನ್ನು ನಮೂದಿಸಬೇಕಾಗಿದೆ. ಪ್ರತಿ ಮನೆ ಮನೆಗೆ ಬರುವ ಸಮೀಕ್ಷೆದಾರರಿಗೆ ನಾವುಗಳು ಸೂಕ್ತ ದಾಖಲೆಗಳನ್ನು ನೀಡುವ ಮೂಲಕ ಕಲಂ ನಂಬರ 9 ರಲ್ಲಿ ಬೆಸ್ತರ್ ಎಂದು ನಮೂದಿಸಬೇಕು. ಕಲಂ ನಂಬರ 10 ರಲ್ಲಿ ಶಾಲಾ ದಾಖಲಾತಿಯಲ್ಲಿ ಇರುವ ಉಪಜಾತಿ ಹೆಸರು ನಮೂದಿಸಬೇಕು. ಇನ್ನೂ ಕಲಂ ನಂಬರ 11 ರಲ್ಲಿ ಬೆಸ್ತರ ಜಾತಿಗೆ ಕರೆಯಲ್ಪಡುವ ಪಯಾ೯ರ ಹೆಸರಗಳಾದ ಕಬ್ಬೇರ, ಅಂಬಿಗ, ಗಂಗಾಮತಸ್ಥರು, ಬಾರಕೇರ, ಮಡ್ಡೇರ ರೀತಿಯಾಗಿ ಕರೆಯಲು ಪಡುವ ಉಪ ಜಾತಿಗಳನ್ನು ನಮೂದಿಸಬೇಕು ಎಂದು ಹೇಳಿದರು.
ಗಂಗಾಮತ ಸಮಾಜದ ತಾಲೂಕು ಅಧ್ಯಕ್ಷ ಹನುಮೇಶ ಬಟಾರಿ ಮಾತನಾಡಿ, ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ನಮ್ಮ ಸಮಾಜದ ಭವಿಷ್ಯ ಕೂಡ ಇದೆ. ನಾವುಗಳು ಎಲ್ಲರೂ ಒಗ್ಗಟ್ಟಿನಿಂದ ಬೆಸ್ತರ ಎಂದು ನಮೂದಿಸಿದರೆ. ರಾಜ್ಯದಲ್ಲಿ ನಮ್ಮ ಸಂಖ್ಯೆ ಎಷ್ಟೇದೆ ಎನ್ನುವುದು ಬಹಿರಂಗವಾಗುತ್ತದೆ. ಆಗ ನಮ್ಮ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಸೇರಿದಂತೆ ರಾಜಕೀಯದಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳಬಹುದು. ನಾವುಗಳು ಒಗ್ಗಟ್ಟಿನಿಂದ ಇದ್ದರೆ ಮಾತ್ರ ಏನಾದರೂ ಪಡೆದುಕೊಳ್ಳು ಸಾಧ್ಯವಾಗುತ್ತದೆ. ಹಾಗಾಗಿ ಜಾತಿಗಣತಿ ಸಮೀಕ್ಷೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ಬೆಸ್ತರ ಎಂದು ನಮೂದಿಸಲು ಮುಂದಾಗಬೇಕು ಎಂದು ಹೇಳಿದರು.
ನಂತರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ
ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಪರಶುರಾಮ ಮಡ್ಡೇರ, ಜಿಲ್ಲಾ ಸಂಘಟನಾ ಕಾಯ೯ದಶಿ೯ ಬಿ.ನಾಗರಾಜ, ಜಿಲ್ಲಾ ಸಂಘಟನೆಯ ಪದಾಧಿಕಾರಿ ಶಿವು ಅರಿಕೇರಿ, ಗಂಗಾಮತ ಸಮಾಜದ ಗೌರವಾಧ್ಯಕ್ಷ ಕಾಪು ಹುಲಗಪ್ಪ, ನಿಜ ಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಬೈರೇಶ್, ತಾಲೂಕು ಮಾಧ್ಯಮ ಸಲಹೆಗಾರ ಚಂದ್ರಶೇಖರ ಮುಕ್ಕುಂದಿ, ವಕೀಲರಾದ ವಿರುಪಾಕ್ಷಪ್ಪ ಪ್ರಮುಖರಾದ ರಾಘವೇಂದ್ರ, ಗೀರೀಶ್, ಆನಂದ, ದೇವರಾಜ, ಗೋಪಿನಾಥ, ಹನುಮೇಶ ಪೂಜಾರಿ, ಮಂಜುನಾಥ, ಶ್ರೀಕಾಂತ ಹಾಗೂ ತಾಲೂಕು ಗ್ರಾಮಗಳಾದ. ಬಸಾಪಟ್ಟಣ ಮರಳಿ ಹೊಸಳ್ಳಿ ಚಿಕ್ಕ ಜಂತಕಲ್ ಹೆಬ್ಬಾಳ ಹೇರೂರು.ವಡ್ಡರಟ್ಟಿ ಅಯೋಧ್ಯ.ಆನೆಗುಂದಿ ಮಲ್ಲಾಪುರ ನಾಗನಹಳ್ಳಿ ಶ್ರೀ ಕೃಷ್ಣದೇವರಾಯ ನಗರ ಹೊಸಕೆರ ಡಗ್ಗಿ ಕ್ಯಾಂಪ್ ಗ್ರಾಮದ ಸಮಾಜದ ಹಿರಿಯರು ಯುವಕರು ಉಪಸ್ಥಿತರಿದ್ದರು
Kalyanasiri Kannada News Live 24×7 | News Karnataka
