
Today is a karaoke program of movie songs on the occasion of Dr. Vishnuvardhan Jayanti.


ಗಂಗಾವತಿ: ಕರ್ನಾಟಕ ರತ್ನ ಅಭಿಯನ ಭಾರ್ಗವ ಡಾ.ವಿಷ್ಣುವರ್ಧನ್ ಅವರ ೭೫ ನೇ ಜಯಂತಿ ನಿಮಿತ್ತ ನಗರದಲ್ಲಿ ಗಂಗಾವತಿ ಗೆಳೆಯರ ಬಳಗ ಹಾಗೂ ವಿಎಸ್‌ಎಸ್ ವಿಷ್ಣು ದಾದಾ ಅಭಿಮಾನಿಗಳ ಸಂಘ ವತಿಯಿಂದ ಇಂದು ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ನಗರದ ಶಿವೆ ಟಾಕೀಸ್ ಹತ್ತಿರ ಇರುವ ಡಾ.ವಿಷ್ಣುವರ್ಧನ್ ಸರ್ಕಲ್ ಬಳಿ ಬೆಳ್ಳಿಗ್ಗೆ ೧೦.೩೦ಕ್ಕೆ ಡಾ.ವಿಷ್ಣುವರ್ಧನ್ ಸರ್ಕಲ್ ನಾಮಫಲಕಕ್ಕೆ ಪೂಜೆ, ರಕ್ತದಾನ ಶಿಬಿರ ಮತ್ತು ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ ೫.೩೦ಕ್ಕೆ ನಗರದ ಕೋಟ್ ಎದುರಿಗೆ ಇರುವ ಶ್ರೀ ಕೊಟ್ಟೂರು ಬಸವೇಶ್ವರ ವೇದಿಕೆಯಲ್ಲಿ ಕರ್ನಾಕಟ ರತ್ನ ಪ್ರಶಸ್ತಿ ನೀಡಿದ ರಾಜ್ಯ ಸರಕಾರಕ್ಕೆ ಅಭಿನಂದನಾ ಪೂರ್ವಕವಾಗಿ ಡಾ.ವಿಷ್ಣುವರ್ಧನ್ ಅಭಿನಯದ ಹಾಡುಗಳ ಕರೋಕೆ ಕಾರ್ಯಕ್ರಮ ಜರುಗಲಿದೆ. ಇದೇ ವೇದಿಕೆಯಲ್ಲಿ ರಾಷ್ಟçಪತಿ ಪ್ರಶಸ್ತಿ ಪುರಸ್ಕೃತ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಚಲನಚಿತ್ರಗಳ ಮೂಲಕ ಗಂಗಾವತಿಯ ಕೀರ್ತಿ ಬೆಳಗಿಸುತ್ತಿರುವ ವಿಷ್ಣುಜೋಶಿ ಆದಾಪೂರ ಸೇರಿ ಹಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸರ್ವರೂ ಆಗಮಿಸುವಂತೆ ಗಂಗಾವತಿ ಗೆಳೆಯರ ಬಳಗದ ಪದಾಧಿಕಾರಿಗಳಾದ ಜಿ.ಅಶೋಕಗೌಡ, ಪರಶುರಾಮ ಇಟಗಿ, ರಾಜೇಂದ್ರ ನಾಯಕ, ನೀಲಕಂಠಪ್ಪ ಹಾಗೂ ಕುಮಾರಪ್ಪ




