Kalyana Karnataka Festival: History and Significance
ಕೊಟ್ಟೂರು ತಾಲೂಕು ಉಜ್ಜನಿ :-ಕಲ್ಯಾಣ ಕರ್ನಾಟಕ ಉತ್ಸವವು ಕರ್ನಾಟಕದ ಈಶಾನ್ಯ ಭಾಗದ (ಹಿಂದಿನ ಹೈದರಾಬಾದ್ ಕರ್ನಾಟಕ) ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥವಾಗಿ ಆಚರಿಸುವ ವಾರ್ಷಿಕ ದಿನಾಚರಣೆಯಾಗಿದೆ.
ಬುಧವಾರದಂದು ಭಾರತದ ಸ್ವಾತಂತ್ರ್ಯದ ನಂತರವೂ ನಿಜಾಮರ ಆಳ್ವಿಕೆಯಿಂದ ಮುಕ್ತರಾಗಲು ನಡೆದ ಹೋರಾಟದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ, ಮತ್ತು ಇಂದು (ಸೆಪ್ಟೆಂಬರ್ 17, 2025) ಇದರ 77ನೇ ವಾರ್ಷಿಕೋತ್ಸವವಾಗಿದೆ. ಸರ್ ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಮ ಪಂಚಾಯತ್ ನಲ್ಲಿ ಕರ್ನಾಟಕ ವಿಮೋಚನಾ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಬಿ ಚೌಡಪ್ಪ ಇವರು ಧ್ವಜಾರೋಹಣವನ್ನು ನೇರವೇರಿಸಿದರು. ಗ್ರಾಮ ಪಂಚಾಯತಿ ಸರ್ವ ಸದಸ್ಯರುಗಳು ಸಿಬ್ಬಂದಿ ವರ್ಗದವರು ಹಾಜರಿದ್ದರು
Kalyanasiri Kannada News Live 24×7 | News Karnataka
