The menace of middlemen has increased in the town panchayat: Hanuman Basarigid
ಕನಕಗಿರಿ ಪಟ್ಟಣ ಪಂಚಾಯತ ಸದಸ್ಯರಿಗೆ ದೌರ್ಜನ್ಯ ಎಸಗುತ್ತಿರುವ ಪಟ್ಟಣ ಪಂಚಾಯತಿ ಉಪಾಧ್ಯಕ್ಷರು ಹಾಗೂ ನಮೂನೆ 3 ನೀಡಲು ಲಂಚ ಪಡೆಯುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಬೇಕದಲ್ಲದೇ, ಮಧ್ಯವರ್ತಿಗಳ ಹಾವಳಿ ತಡೆಯುವ ಕುರಿತು 17ನೇ ವಾರ್ಡಿನ ಪಟ್ಟಣ ಪಂಚಾಯಿತಿಯ ಸದಸ್ಯ ಹನುಮಂತಪ್ಪ ತಂದೆ ಶಾಮಣ್ಣ ಬಸರಿ ಗಿಡ ಬೇಸರ ವ್ಯಕ್ತಪಡಿಸಿ ಈ ಮೂ

ಲಕ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಕೊಪ್ಪಳ ಇವರಿಗೆ ದೂರು ಸಲ್ಲಿಸುವುದೇನೆಂದರೆ,
ನಮೂನೆ 3 ಪಡೆಯುವ ನಿಮಿತ್ತ ಸಾರ್ವಜನಿಕರು ಪಟ್ಟಣ ಪಂಚಾಯತಗೆ ಬಂದರೆ ಅಧಿಕಾರಿ ಹಾಗೂ ಸಿಬ್ಬಂದಿ ವಿನಾ ಕಾರಣ ಅಲೆದಾಡಿಸುವುದಲ್ಲದೇ, ಲಂಚಕ್ಕೆ ಬೇಡಿಕೆಯಿಡುತ್ತಾರೆ. ಲಂಚ ಕೊಟ್ಟವರ ಹಾಗೂ ಪ್ರಭಾವಿಗಳಿಗೆ ಮಾತ್ರ ಫಾರಂ 3 ನೀಡುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಅಮಾಯಕರು ಕಚೇರಿಗೆ ಬಂದರೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದು ಪಟ್ಟಣ ಪಂಚಾಯಿತಿಯ ಸದಸ್ಯರಾದ ಹನುಮಂತ ಬಸರಿ ಗಿಡ ತಿಳಿಸಿದರು. ಇನ್ನು ಪಟ್ಟಣ ಪಂಚಾಯತಿಯ ಉಪಾಧ್ಯಕ್ಷರಾಗಿರುವ ಕಂಠಿರಂಗಪ್ಪ ನಾಯಕ ಇವರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸದರಿಯವರು ಆಯ್ಕೆಯಾಗಿರುವ 5ನೇ ವಾರ್ಡಿನಲ್ಲಿ ಯಾರಾದರೂ ಸಾರ್ವಜನಿಕರು ನಮೂನೆಗೆ ಅರ್ಜಿ ಹಾಕಿದರೆ, ತಮ್ಮ ಅನುಮತಿಯಿಲ್ಲದೇ, ಯಾವುದೇ ನಮೂನೆ 3 ನೀಡುವುದಾಗಲೀ, ಆಸ್ತಿ ವರ್ಗಾವಣೆ ಮಾಡುವುದಾಗಲೀ ಮಾಡುವಂತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಪಂಚಾಯತಿಯ ಇತರೇ ಸದಸ್ಯರು 5ನೇ ವಾರ್ಡಿನ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಮುಂದಾದರೆ ಆ ಸದಸ್ಯರಿಗೆ ನನ್ನ ವಾರ್ಡಿನಲ್ಲಿ ನನ್ನ ಅನುಮತಿಯಿಲ್ಲದೇ ನೀವು ಹೇಗೆ? ಸಾರ್ವಜನಿಕರ ಕೆಲಸ ಮಾಡಿಕೊಡುತ್ತೀರಿ ಎಂದು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದು, ಕಾರಣ, ಲಂಚಕ್ಕೆ ಬೇಡಿಕೆಯಿಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ಸರ್ವಾಧಿಕಾರ ಧೋರಣೆ ತೋರುತ್ತಿರುವ ಪಟ್ಟಣ ಪಂಚಾಯತಿ ಉಪಾಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ವಹಿಸಬೇಕು. ಅಲ್ಲದೇ, ಫಾರಂ 3ಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ತಡೆಯಬೇಕು. ಈ ಬಗ್ಗೆ ಕ್ರಮ ವಹಿಸಿ ಸಾರ್ವಜನಿಕರಿಗೆ ಹಾಗೂ ಇತರೇ ಪಟ್ಟಣ ಪಂಚಾಯತಿ ಸದಸ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಕೊಪ್ಪಳ ಇವರಿಗೆ 17ನೇ ವಾರ್ಡಿನ ಪಟ್ಟಣ ಪಂಚಾಯಿತಿ ಸದಸ್ಯರಾದ ಹನುಮಂತ ಬಸರಿ ಗಿಡ ದೂರು ನೀಡಿ ಮನವಿ ಮಾಡಿಕೊಂಡರು .
Kalyanasiri Kannada News Live 24×7 | News Karnataka
