
Missing person: Request for assistance in finding him/her


ಕೊಪ್ಪಳ ಸೆಪ್ಟೆಂಬರ್ 12, (ಕರ್ನಾಟಕ ವಾರ್ತೆ): ವೈಯಕ್ತಿಕ ಕೆಲಸದ ಮೇಲೆ ಕೊಪ್ಪಳಕ್ಕೆ ಹೋಗಿ ಬರುವುದಾಗಿ ತೆರಳಿದ ಕಿನ್ನಾಳ ಗ್ರಾಮದ ರಾಜಭಕ್ಷಿ ಬುಡ್ನೆಸಾಬ ಹಿರೇಮನಿ ಎಂಬ 31 ವರ್ಷದ ವ್ಯಕ್ತಿಯು ಜೂನ್ 06 ರಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 157/2025 ಕಲಂ, ಮನುಷ್ಯ ಕಾಣೆ ಅಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ:
ವ್ಯಕ್ತಿಯು ಕೋಲು ಮುಖ, ಉದ್ದವಾದ ಮೂಗು ಹೊಂದಿದ್ದು, ಕಾಣೆಯಾದಾಗ ನೀಲಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಮೇಲ್ಕಂಡ ಚಹರೆಯ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ: 08539-221333, 9480803746, ಸಿಪಿಐ ಕೊಪ್ಪಳ ಗ್ರಾಮೀಣ :9480803731, ಡಿವೈಎಸ್ಪಿ, ಕೊಪ್ಪಳ: 08539-230342, 9480803720, ಎಸ್.ಪಿ ಕೊಪ್ಪಳ: 08539-230111, ಜಿಲ್ಲಾ ಕಂಟ್ರೋಲ್ ರೂಂ: 08539-230222-100 ಸಂಪರ್ಕಿಸಿ ಮಾಹಿತಿ ನೀಡುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.




