Breaking News

ಹಿರಿಯ ನಾಗರಿಕರ ಕಾಯ್ದೆಯಡಿ 10,000 ರೂ ಮಿತಿ ಪರಿಷ್ಕರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಶಿಫಾರಸು

High Court recommends Centre to revise Rs 10,000 limit under Senior Citizens Act

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


kannadaprabha 2025 06 25 bf2hrexi 750x450393650 367246 karnataka high court

ಬೆಂಗಳೂರು: ದೇಶಾದ್ಯಂತ ವೃದ್ಧರಿಗೆ ಪ್ರಯೋಜನಕಾರಿಯಾದ ಕ್ರಮದಲ್ಲಿ, ಜೀವನ ವೆಚ್ಚದಲ್ಲಿನ ಹೆಚ್ಚಳವನ್ನು ಪರಿಗಣಿಸಿ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರ ಸೆಕ್ಷನ್ 9 ಅನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರಕ್ಕೆ ಶಿಫಾರಸು ಮಾಡಿದೆ.

“ಇಷ್ಟು ಕಡಿಮೆ ನಿರ್ವಹಣೆಯು ಕಾಯ್ದೆಯ ಉದ್ದೇಶಗಳನ್ನು ಈಡೇರಿಸಬಹುದೇ? ಸೆಕ್ಷನ್ 9 ರ ಮಿತಿಯೊಳಗೆ ನಾಗರಿಕನು ಘನತೆ, ಜೀವನಾಧಾರ ಮತ್ತು ವೈದ್ಯಕೀಯ ಸಹಾಯವನ್ನು ಪಡೆಯಬಹುದೇ? ಈ ಬಗ್ಗೆ ಚಿಂತನೆಯ ಅಗತ್ಯವಿದೆ. ಇಲ್ಲದಿದ್ದರೆ ಆ ಹಿರಿಯ ನಾಗರಿಕರ ಅಸ್ತಿತ್ವವನ್ನು ‘ಕೇವಲ ಪ್ರಾಣಿಗಳ’ ಮಟ್ಟಕ್ಕೆ ಇಳಿಸುತ್ತದೆ ಎಂದು ಹೈಕೋರ್ಟ್ ಕಿಡಿ ಕಾರಿದೆ.

ಈ ನ್ಯಾಯಾಲಯವು ಶಾಸನ ಮಾಡಲು ಸಾಧ್ಯವಿಲ್ಲ; ಇದು ಸೆಕ್ಷನ್ 9 ಅನ್ನು ಪುನಃ ಬರೆಯಲು ಸಾಧ್ಯವಿಲ್ಲ. ಆದರೆ 2007 ರಲ್ಲಿ ಅರ್ಥಪೂರ್ಣವಾಗಿದ್ದ ಈ ನಿಬಂಧನೆಯು ಈಗ 2025 ರಲ್ಲಿ ಅದನ್ನು ಅಣಕಿಸುವಂತಿದೆ ಎಂದ ಹೈಕೋರ್ಟ್, ಕೇಂದ್ರ ಸರ್ಕಾರ ಸಂವೇದನಾಶೀಲಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ” ಎಂದು ಹೇಳಿದೆ.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *