MLA K Shadakshariya performs a hoe puja for the paving of the Shivara Road from Honnavar Tiptur Road to Gowdanakatte.
ತಿಪಟೂರು. ತಾಲ್ಲೂಕಿನ ತಿಪಟೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೇಂದ್ರ ರಸ್ತೆ (CRIF) ಯೋಜನೆ ಅಡಿ ತುಮಕೂರು ಹೊನ್ನಾವರ ರಸ್ತೆಯಿಂದ ತಿಪಟೂರು ಹಾಸನ ರಸ್ತೆಗೆ ಸಂಪರ್ಕಿಸುವ ಗೌಡನಕಟ್ಟೆ ಶಿವರ ರಸ್ತೆ ಡಾಂಬಲಿಕರಣ ಕಾಮಗಾರಿಗೆ ತಿಪಟೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಷಡಕ್ಷರಿ ಅವರಿಂದ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ. ಆರ್ ಸಿ ಚಂದ್ರಶೇಖರ್. ಕಾಂಗ್ರೆಸ್ ಮುಖಂಡರಾದ ಶಿವರ ನಾಗರಾಜ್. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜ್ ಗೌಡನಕಟ್ಟೆ ನಗರಸಭಾ ಸದಸ್ಯ ಲೋಕನಾಥ್ ಸಿಂಗ್. ಗ್ರಾಮ ಪಂಚಾಯತಿ ಪಿಡಿಒ ಶಂಕರ್ ಬೀಳೂರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಮುಖಂಡರು ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ ಮಂಜು ಗುರುಗದಹಳ್ಳಿ.