Hirebenakal Nele: A milestone in human evolution: Sunala Nayak, Joint Commissioner of Davangere Commercial Tax Department
ಗಂಗಾವತಿ:, ಸೆಪ್ಟೆಂಬರ್ 11:ದಾವಣಗೆರೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಸುನಲ ನಾಯಕ ಅವರು ನೆಲೆಯನ್ನು ಸೆ. 11ರಂದು ಗುರುವಾರ ಸಂದರ್ಶಿಸಿದರು.
ಈ ಸಂದರ್ಭದಲ್ಲಿ ಅವರು ಮಾತಾನಾತ್ತ, “ಹಿರೇಬೆಣಕಲ್ ನೆಲೆಯ ಮಹತ್ವ ಮನಸೂರಗೋಳ್ಳುವಂಥದ್ದು ಮತ್ತು ಮಾನವನ ವಿಕಸನದ ಮಹತ್ತರ ಘಟ್ಟವನ್ನು ಹೊಂದಿರುವಂಥದ್ದು. ಇಂತಹ ನೆಲೆ ನಮ್ಮ ನಾಡಿನಲ್ಲಿ ಇರುವುದು ಹೆಮ್ಮೆಯಾಗಿದೆ. ಇಂತಹ ನೆಲೆಗಳ ಸುರಕ್ಷತೆ ಮತ್ತು ರಕ್ಷಣೆ ಕೂಡಲೇ ಆಗಬೇಕು. ಗಿಡಮೂಲಿಕೆಗಳು ಮತ್ತು ಗುಡ್ಡಗಳ ರಚನೆ ತುಂಬಾ ಸೊಗಸಾಗಿದೆ. ವರ್ಣ ಚಿತ್ರಗಳ ಹಿಂದಿನ ಮಾನವರ ನಾಗರಿಕತೆ, ಬದುಕಿನ ಕುರುಹುಗಳು ತಿಳಿಯುತ್ತಿರುವುದು ನಿಜಕ್ಕೂ ಶಿಲಾಯುಗದವರು ಶ್ರಮಕ್ಕೆ ತಲೆಬಾಗಲೇಬೇಕು,” ಶಿಲಾಯುಗದ ಮಾನವರು ಕಟ್ಟಿದ ಶಿಲಾ ಸಮಾಧಿಗಳನ್ನು ನೋಡಿದರೆ ತಮ್ಮ ಬದುಕನ್ನೇ ಇವುಗಳ ರಚನೆಗೆ ಮುಡುಪಾಗಿಟ್ಟರುವದು ಇವರ ಸಾಧನೆಯಾಗಿದೆ ಎಂದು ಪ್ರಶಂಶಿಸಿದರು

ಈ ತಂಡಕ್ಕೆ ಮಾರ್ಗದರ್ಶನ ನೀಡಿದ, ಹಿರೇಬೆಣಕಲ್ ನೆಲೆಯ ಬಗ್ಗೆ ಸದಾ ಕಾಳಜಿ ವಹಿಸುತ್ತಿರುವ ಗಂಗಾವತಿ ಮಂಜುನಾಥ ಗುಡ್ಲಾನೂರ ನೆಲೆಯ ಬಗ್ಗೆ ವಿವರಿಸುತ್ತಾ. “ಹಿರೇಬೆಣಕಲ್ ನೆಲೆ ನಾಗರಿಕ ಮಾನವನ ಬದುಕಿನಲ್ಲಿ ತುಂಬಾ ಮಹತ್ವದ್ದಾಗಿದೆ ಇಲ್ಲಿನ ಗುಹಾ ಚಿತ್ರಗಳಲ್ಲಿ ಕಂಡುಬರುವ ಚಿತ್ರಗಳನ್ನು ಅವಲೋಕಿಸಿದಾಗ, ಈ ಮಾನವರು ಕಬ್ಬಿಣವನ್ನು ಶೋಧನೆ ಮಾಡುತ್ತಾರೆ. ಒಂದು ಕಿಲೋಗ್ರಾಂ ಅದಿರಿನಲ್ಲಿ ೩೫೦ ಗ್ರಾಂ ನಷ್ಟು ಕಬ್ಬಿಣವನ್ನು ತೆಗೆಯುವ ಪರಿಣಿತಿಯನ್ನು ಹೊಂದಿದ್ದರು.” ಕಬ್ಬಿಣದ ಪರಿಕರಗಳನ್ನು ಮಾಡುವ ಮೂಲಕ ಹೆಚ್ಚು ಹೆಚ್ಚು ಕಾಡುಗಳನ್ನು ಸ್ವಚ್ಛಗೊಳಿಸಿ, ತಮಗೆ ಬೇಕಾದ ಆಹಾರ ಬೆಳೆ ಗೆಡ್ಡೆ ಗೆಣಸು ಗಳನ್ನು ಒಂದೆಡೆ ನೆಲೆನಿಂತು ಬೆಳೆಯಲು ತೊಡಗಿದರು. ಇದು ಕೃಷಿ ಬದುಕಿಗೆ ನಾಂದಿ ಹಾಡಿತು. ಗುಹಾ ಚಿತ್ರಗಳಲ್ಲಿ ಎತ್ತು-ಆಕಳು ಕಂಡುಬರುವುದು ಕೃಷಿಯಲ್ಲಿ ದನಗಳ ಮತ್ತು ಎತ್ತುಗಳ ಬಳಕೆಯನ್ನು ತೋರಿಸುತ್ತದೆ.
ಇಲ್ಲಿನ ಸಮಾಧಿಗಳನ್ನ ಕಟ್ಟುವುದರಿಂದ ಸತ್ತ ಅವರ ಪೂರ್ವಜರು ಮತ್ತೆ ಹುಟ್ಟುತ್ತಾರೆ ಎನ್ನುವ ಪರಿಕಲ್ಪನೆಯನ್ನು ಈ ಶಿಲಾಯುಗದ ಮಾನವರು ನಂಬಿದ್ದರು. ಸಮಾಧಿಗಳ ಪರಿಕಲ್ಪನೆಯನ್ನು ಕೊಟ್ಟವರು ಈ ಶಿಲಾಯುಗದ ಮಾನವರೇ ಎಂದರು
ಈ ವೇಳೆ ಜಂಟಿ ಆಯುಕ್ತೆ ಸುನಲ್ ನಾಯಕ್ ರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಹೊಸಪೇಟೆಯ ಸಹಾಯಕ ಆಯುಕ್ತರು ಗರ್ಜಿಲಿಂಗಪ್ಪ, ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು ಅನಂತ್ ಕುಲಕರ್ಣಿ, ಮತ್ತು ವಾಣಿಜ್ಯ ತೆರಿಗೆಗಳ ಪರಿವೀಕ್ಷಕರು ಮೊಹಮದ್ ಪಾಷಾ ಉಪಸ್ಥಿತಿದ್ದರು.
Kalyanasiri Kannada News Live 24×7 | News Karnataka
