Breaking News

12 ನೇ ಶತಮಾನದಲ್ಲಿ ನಿತ್ಯ ಸತ್ಯ ಕಾಯಕ ಮಾಡುತಿದ್ದ ಶರಣ ಹೂಗಾರ ಮಾದಯ್ಯ

Sharan flower merchant Madaiah, who was always working for truth in the 12th century

ಯಲಬುರ್ಗಾ ತಾಲೂಕಿನ ಶರಣಗ್ರಾಮ ಗುಳೆ ಗ್ರಾಮದ ವಿಶ್ವ ಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವ ದಳ ಮತ್ತು ಯುವ ಘಟಕ ಹಾಗು ಅಕ್ಕನಾಗಲಾಂಬಿಕೆ ಮಹಿಳಾ ಗಣದ ವತಿಯಿಂದ 115ನೇ ಮಾಸಿಕ ಹುಣ್ಣಿಮೆಯ ಬಸವಾನುಭವ ಕಾರ್ಯಕ್ರಮ ಹಾಗು *ಕಾಯಕ ಯೋಗಿ ಶರಣ ” ಹೂಗಾರ ಮಾದಯ್ಯ ಶರಣರ ಜಯಂತಿ”* ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಬಸವರಾಜ ಹೂಗಾರ, ಇಂದಿನ ದಿನಮಾನದಲ್ಲಿ ಯುವ ಪೀಳಿಗೆಗಳು ಸರಿಯಾದ ರೀತಿಯ ಸಂಸ್ಕೃತಿ ಸಂಸ್ಕಾರ ಇಲ್ಲದೆ ಹಲವಾರು ದುಶ್ಚಟಗಳಿಗೆ ಗುರಿಯಾಗಿ, ಸುಂದರವಾದ ಬದುಕನ್ನ ಕಟ್ಟಿಕೊಳ್ಳದೆ, ಅಲೆದಾಡುವ ಪರಸ್ಥಿತಿಗೆ ಬಂದು ನಿಂತಿದೆ. ನಮ್ಮ ಜೀವನದ ಬವಣೆಯಿಂದ ದೂರಾಗಬೇಕಾದರೆ, ಶರಣರ ಸಂದರ ದಾರ್ಶನಿಕರ ತತ್ವಾದರ್ಶಗಳೆ, ಬವಣೆಗಳಿಗೆ ಔಷದಿ.
ಈ ಔಷದಿ ದೊರೆಯಬೇಕಾದರೆ ಶರಣರ ಸಂಘದ ಒಡನಾಟದಿಂದ ಮಾತ್ರ ಸಾದ್ಯ. ಅದಕ್ಕಾಗಿ ಗುರು ಬಸವಣ್ಣನವರು ” ಸಾರಸಜ್ಜನರ ಸಂಘ ಲೇಸು ಕಂಡಯ್ಯ, ದೂರ ದುರ್ಜನರ ಸಂಗ ಭಂಗವಯ್ಯ ” ಎಂದು ಹೇಳಿದ್ದಾರೆ. ದುರ್ಜನರ ಸಂಘದಿಂದೊಂಡಗೂಡದೆ, ಸಜ್ಜನರ ಸಂಘದೊಂದಿಗೆ ಬದುಕಬೇಕು. ಅದೇರೀತಿಯಾಗಿ, 12ನೇ ಶತಮಾನದಲ್ಲಿ ಒಂದು ಲಕ್ಷದ ತೊಂಭತ್ತಾರು ಜನ ಜಂಗಮರು ಮತ್ತು 770 ಅಮರ ಗಣಂಗಳಲ್ಲೊಬ್ಬರಾದ ಶಿವ ಶರಣ ಹೂಗಾರ ಮಾದಯ್ಯನವರು, ಕಲ್ಯಾಣ ರಾಜ್ಯದ ಶರಣ ಸಂಕುಲಗಳಲ್ಲಿ ದಂಪತಿಗಳು ಸಮೇತ ದಿನ ನಿತ್ಯ ಬಸವಾದಿ ಶರಣರ ಇಷ್ಟಲಿಂಗ ಪೂಜೆಗೆ ಪತ್ರೆ ಪುಸ್ಪ ಕೊಡುವ ಕಾಯಕದಲ್ಲಿ
ತೊಡಗಿಕೊಂಡು, ಗುರು ಬಸವಣ್ಣನವರು ಕೊಟ್ಟಂತ ಕಾಯಕದ ಪರಿಕಲ್ಪನೆಯಂತೆ, ಕಲ್ಯಾಣ ಪಟ್ಟಣದಲ್ಲಿ ಇರುವ ಎಲ್ಲಾ ಶರಣರಿಗೆ ಮುಂಜಾವದಲ್ಲೆದ್ದು, ಶರಣರ ಇಷ್ಟಲಿಂಗ ಪೂಜೆಗೆ ಹೂ ಪತ್ರೆ ಗಳನ್ನು ಕೊಡುತ್ತಾ, ಧಾರ್ಮಿಕ ಪೂಜೆ ಮತ್ತು ಮದುವೆ ಸಮಾರಂಭದಲ್ಲಿ ಬಾಸಿಂಗ ಹಂಚುವುದರ ಜೊತೆಗೆ ತಾನು ಕೂಡ ಅಂಗದ ಮೇಲೆ ಇಷ್ಟಲಿಂಗ ಧರಿಸಿ, ಲಿಂಗಾಂಗ ಸಾಮರಸದಿಂದ ಶರಣರಾದರು. ಹೂ ಪತ್ರೆ ಮಾಲೆಗಳನ್ನ ಕೊಡುವ ಕಾಯಕವನ್ನೇ ಜೀವನದ ಬದುಕಿನ ಕಸುಬನ್ನಾಗಿ ಮಾಡಿಕೊಂಡು, ಕಲ್ಯಾಣ ಪಟ್ಟಣದಲ್ಲಿ ಬಿಜ್ಜಳನ ಅರಸೊತ್ತಿಗೆಯ ಭೂಮಿಯಾದ, ತ್ರಿಪೂರಾಂತ ಕೆರೆಯ ದಂಡೆಯ ಮೇಲೆ ಹೂ ಪತ್ರೆಯ ಕೈ ತೋಟ ಮಾಡಿಕೊಂಡು, ನಿಷ್ಕಲ್ಮಶವಾಗಿ ನಿಷ್ಠೆಯ ಕಾಯಕವ ಮಾಡುತ್ತ, ಅನುಭವ ಮಂಟಪದಲ್ಲಿ ವಚನ ರಚಿಸುವ ಕಾರ್ಯದಲ್ಲಿ ತೊಡಗಿಕೊಳ್ಳುತಿದ್ದರು. ಹೂಗಾರ ಮಾದಯ್ಯನ ಜೀವನ ಕುರಿತಾಗಿ ” ಭೈರವೇಶ್ವರ ಕಥಾಮಣಿಸೂತ್ರ” ದಲ್ಲಿ ಹರಿಹರನ ರಗಳೆಗಳಲ್ಲಿ ಮತ್ತು ಡಾ।। ಬಿ.ಎಸ್ ಗದ್ದಿಗೀಮಠ ಅವರು ಪ್ರಕಟಿಸಿದ ‘ ಕನ್ನಡ ಜಾನಪದ ಗೀತೆಗಳು’ ಎಂಬ ಗ್ರಂಥದಲ್ಲಿ ಸುಮಾರು ಎಪ್ಪತ್ತಕ್ಕೂ ಹೆಚ್ಚು ತ್ರಿಪದಿಗಳಲ್ಲಿ ಕಂಡುಬರುತ್ತಿವೆ. ಕಲ್ಯಾಣದ ಕಾಯಕ ಜೀವಿ ರೈತಾಪಿ ಶಿವಶರಣರಿಗೆ ಮುದ್ದು ಮಾದಯ್ಯನಾಗಿ, ಯಾವ ಶರಣರಿಂದಲು ಏನನ್ನು ಬಯಸದೆ, ನಿತ್ಯ ಮತ್ತು ಸತ್ಯ ಕಾಯಕವ ಮೆಚ್ಚಿ ಗುರು ಬಸವಣ್ಣನವರು, ಬಿಜ್ಜಳನ ಭಂಡಾರದಲ್ಲಿ ಪ್ರತಿ ಮಾಸಕ್ಕೊಮ್ಮೆ 25 ಆಣೆಯಂತೆ ಆತನ ಜೀವನದ ನಿರ್ವಹಣೆಗಾಗಿ ಗೌರವ ಧನ ಕೊಡುತಿದ್ದ ಎಂಬುದು ಹರಿಹರನ ರಗಳೆಯಲ್ಲಿ ತಿಳಿದು ಬಂದಿದೆ. 12 ನೇ ಶತಮಾನದಿಂದ ಇಂದಿನವರೆಗು, ಗ್ರಾಮ ಗ್ರಾಮಗಳಲ್ಲಿ, ಜಾತಿ ಭೇದ, ವರ್ಗಭೇದ, ವರ್ಣಭೇದ ಮರೆತು, ಎಲ್ಲಾ ಸಮುದಾಯಗಳಿಗೆ, ಹೂ, ಪತ್ರೆ, ಮದುವೆಗೆ ಬೇಕಾದ ಬಾಸಿಂಗ, ಕೊಡುವ ಪರಂಪರೆ ಸಾಗಿಬಂದಿದೆ. ಇದುವೆ 12 ನೇ ಶತಮಾನದ ಶಿವ ಶರಣ ಮಾದಯ್ಯನವರು ಪರಂಪರೆ ಎಂದು ತಿಳಿಸಿದರು. ನಂತರ ಮಾತನಾಡಿದ ಬಸಣ್ಣ ಹೊಸಳ್ಳಿ ಇವರು ಮಾತನಾಡಿ, ಕಾಯಕವ ಕಲಿಸೋಕೆ ನಾಯಕನು ಬಸವಣ್ಣ ಎಂಬ ಜಾನಪದ ಕವಿತೆಗಳಂತೆ, 12 ನೇ ಶತಮಾನದಲ್ಲಿ ಗುರು ಬಸವಣ್ಣನವರು ಎಲ್ಲಾ ಶರಣ ಸಂಕುಲಗಳಿಗೆ, ಒಂದೊಂದು ಕಾಯಕದ ಗುರುತನ್ನು ಕೊಟ್ಟು, ಕಾಯಕದಲ್ಲೇ ಕೈಲಾಸ ಕಾಣುವ ಶಕ್ತಿ ಇದೆ ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿದುಕೊಳ್ಳಬಹುದು. ಗುರು ಬಸವಣ್ಣನವರ ನುಡಿಗಡಣವನ್ನ, ಶರಣದಂತಿಗಳಾದ ಶಿವ ಶರಣೆ ಮಹಾದೇವಿ ಮಾದಯ್ಯ ದಂಪತಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕಲ್ಯಾಣದಲ್ಲೇ ಹುಟ್ಟಿ, ಸತ್ಯ ಶುದ್ಧ ಕಾಯಕ ಮಾಡುತ್ತಾ ಬಾಳಿ ಬದುಕಿದ್ದಾರೆ. ಇಂತಹ ಮಹಾತ್ಮರ ಚಿಂತನೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಶರಣ ದೇವಪ್ಪ ಕೋಳೂರು ಇವರು ವಹಿಕೊಂಡು ಮಾತನಾಡಿರು. ಕಾರ್ಯಕ್ರಮದಲ್ಲಿ ರೇವಣಪ್ಪ ಪಕೀರಪ್ಪ ಮಂತ್ರಿ ಲಿಂಗನಗೌಡ ದಳಪತಿ, ಗಿರಿಮಲ್ಲಪ್ಪ ಪರಂಗಿ, ಪಂಪಾಪತಿ ಹೊಸಳ್ಳಿ, ಜಗದೀಶ್ ಮೇಟಿ, ದೇವೇಂದ್ರಪ್ಪ ಆವಾರಿ, ಬಸವಣ್ಣ ಹೊಸಳ್ಳಿ, ಯಮನೂರಪ್ಪ ಕೋಳೂರು ನಿಜಲಿಂಗಪ್ಪ, ಮಲ್ಲಿಕಾರ್ಜುನ ಮಂತ್ರಿ, ನಿಂಗಪ್ಪ, ಚನ್ನಬಸವಣ್ಣ ಮಂತ್ರಿ, ಹನಮೇಶ್ ಹೊಸಳ್ಳಿ, ಹಾಗು ಅಕ್ಕ ನಾಗಲಾಂಬಿಕೆ ಬಳಗದ ಶರಣೆ ನಾಗಮ್ಮ ಜಾಲಿಹಾಳ, ಬಸಮ್ಮ ಹೂಗಾರ, ಶಂಕ್ರಮ್ಮ ಹೊಸಳ್ಳಿ, ಸಾವಿತ್ರಮ್ಮ ಆವಾರಿ, ನಿಂಗಮ್ಮ ಕೋಳೂರು, ವಿಶಾಲಾಕ್ಷಮ್ಮ ಗುರುಲಿಂಗಮ್ಮ ಸೇರಿದಂತೆ ಎಲ್ಲಾ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
✍️ *ಬಸವರಾಜ ಎಸ್ ಹೂಗರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ .*

ಜಾಹೀರಾತು

About Mallikarjun

Check Also

screenshot 2025 09 07 17 16 32 99 6012fa4d4ddec268fc5c7112cbb265e7.jpg

ಶಿಕ್ಷಣ ಕ್ಷೇತ್ರದಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. : ಸಂಸದ ರಾಜಶೇಖರ ಹಿಟ್ನಾಳ್

The contribution of monks in the field of education is immense: MP Rajashekar Hitnal ಗಂಗಾವತಿ: …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.