Sanjeevini pledges drug-free Karnataka to school children
ಗಂಗಾವತಿ:ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಇಲಾಖೆ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ಕರ್ನಾಟಕ ಜಿಲ್ಲಾ ಪಂಚಾಯತ್ ಕೊಪ್ಪಳ ತಾಲೂಕು ಪಂಚಾಯತ್ ಗಂಗಾವತಿ ಶ್ರೀ ವಿರುಪಾಕ್ಷೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಆನೆಗುಂದಿ ಇವರುಗಳ ಸಹಯೋಗದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವನದುರ್ಗ ಗ್ರಾಮದಲ್ಲಿ ಶಾಲಾ ಮಕ್ಕಳಿಗೆ ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಮತಿ ಹುಲಿಗೇಮ್ಮ , ಎಸ್ ಟಿ ಎಮ್ ಸಿ ಉಪಾಧ್ಯಕ್ಷರಾದ ಮೆಹಬೂಬ್, ಸದಸ್ಯರಾದ ನೂರುಹುದ್ದಿನ್, ಮಂಜುನಾಥ, ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಕೆ.ವಿ.ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಶೇಖರ್, ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ, ಶಾಲೆಯ ಸಹ ಶಿಕ್ಷಕರು, ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕವತಿಯಿಂದ ಪಂಚಾಯತ್ ರಾಜ್ ಸಮುದಾಯ ಆಧಾರಿತ ಸಂಸ್ಥೆಯ ತಾಲೂಕು ಸಂಪನ್ಮೂಲ ವ್ಯಕ್ತಗಳಾದ ಕೀರ್ತಿ, ಕೃಷಿ ತಾಲೂಕು ವ್ಯವಸ್ಥಾಪಕರಾದ ಮುದ್ದಾಣೇಶ, ಸಹಾಸ್ ಸಂಸ್ಥೆಯ ಪ್ರತಿನಿಧಿಗಳು, ಒಕ್ಕೂಟದ ಎಲ್ ಸಿ ಆರ್ ಪಿ, ಪಶು ಸಖಿಯರು ಉಪಸ್ಥಿತರಿದ್ದರು.