Free camp for all-round development of children
ಗಂಗಾವತಿಯ ಶ್ರೀ ಚನ್ನಮ್ಮಲ್ಲಿಕಾರ್ಜುನ ಮಠದ ಟ್ರಸ್ಟ್ ಕಮಿಟಿಯ ವತಿಯಿಂದ ದಸರಾ ರಜೆಯಲ್ಲಿ ಮಕ್ಕಳ ಸರ್ವತೋಮುಖ ವಿಕಾಸಕ್ಕಾಗಿ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ.ದಿನಾಂಕ 22-9-2025 ರಿಂದ 30- 9 -2025 ರವರೆಗೆ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 12:30 ರವರೆಗೆ ಶಿಬಿರ ನಡೆಯಲಿದೆ. ಆರರಿಂದ ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ಮಕ್ಕಳ ಮಾನಸಿಕ, ನೈತಿಕ, ಬೌದ್ಧಿಕ ವಿಕಾಸ, ಮಾನವೀಯ ,ಕೌಟುಂಬಿಕ ಮೌಲ್ಯಗಳ ಅರಿವು, ಸಾಮಾಜಿಕ ಜವಾಬ್ದಾರಿ, ಪರಿಸರ ಪ್ರಜ್ಞೆ, ಶಿಸ್ತಿನ ಜೀವನ ,ಸ್ವಾವಲಂಬನೆ ವ್ಯಕ್ತಿತ್ವ ವಿಕಸನ ಮುಂತಾದ ಸಂಗತಿಗಳನ್ನು ಯೋಗ ಧ್ಯಾನ ಪ್ರಾರ್ಥನೆ, ಚಿತ್ರಕಲೆ ,ಕಲಾ ಕೌಶಲ್ಯ ಅಭಿನಯ, ಹಾಡು, ಭಜನೆ, ಕಥೆ ಮುಂತಾದ ವಿಧಾನಗಳ ಮೂಲಕ ತರಬೇತಿ ನೀಡಲಾಗುತ್ತದೆ. ಆಸಕ್ತ ಪಾಲಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ದಾಖಲಿಸಲು 19-9- 2025ರ ಒಳಗಾಗಿ ಮಠದ ಪೂಜಾ ಸ್ಟೋರ್ ನಲ್ಲಿ ದೊರೆಯುವ ಅರ್ಜಿ ಫಾರಂ ನ್ನು ಪಡೆದು ಭರ್ತಿ ಮಾಡಿ ಅಲ್ಲಿಯೇ ಸಲ್ಲಿಸಲು ತಿಳಿಸಲಾಗಿದೆ .ಹೆಚ್ಚಿನ ಮಾಹಿತಿಗಾಗಿ ಸಂಚಾಲಕರಾದ ಶಿವಪ್ರಕಾಶ್ ಹಿರೇಮಠ್ (9741640604) ನಾಗನಗೌಡ (9480348094) ಶಿವಾನಂದ ತಿಮ್ಮಾಪುರ (8762601641) ಮತ್ತು ಮೈಲಾರಪ್ಪ ಬೂದಿಹಾಳ (9880942764)ಇವರನ್ನು ಸಂಪರ್ಕಿಸಬಹುದೆಂದು ಮಠದ ಟ್ರಸ್ಟಿಗಳು ಮತ್ತು ಶಿಬಿರದ ಮಾರ್ಗದರ್ಶಿಗಳಾದ ಶ್ರೀ ಕೆ ಚನ್ನಬಸಯ್ಯ ಸ್ವಾಮಿಯವರು ಈ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.