Teachers should help children build a life through rationality: Paranna
ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಯಿಂದ ಶಿಕ್ಷಕರ ದಿನಾಚರಣೆ
ಗಂಗಾವತಿ: ಮನುಷ್ಯನ ಜೀವನದಲ್ಲಿ ಶಿಕ್ಷಣ ಮಹತ್ವದ ಘಟ್ಟವಾದ ಅಂಶವಾಗಿದೆ. ಶಿಕ್ಷಕರು ಮಕ್ಕಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣ ಬೋಧಿಸಿ ಅವರ ಜೀವನ ರೂಪಿಸುವಂತೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಅವರು ನಗರದ ಗುರುಭವನದಲ್ಲಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸಮಿತಿ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಸರ್ಕಾರದ ಶಾಲೆಗೆ ಬಡವರು,ನಿರ್ಗತಿಕರ ಮತ್ತು ಗ್ರಾಮೀಣ,ಸ್ಲಂ ಪ್ರದೇಶದ ಮಕ್ಕಳು ಹೆಚ್ಚಾಗಿ ಆಗಮಿಸುವುದರಿಂದ ಸರ್ಕಾರಿ ಶಾಲೆಯಲ್ಲಿರುವ ಪ್ರತಿಭಾನ್ವಿತ ಶಿಕ್ಷಕರು ಮಕ್ಕಳ ಬದುಕನ್ನು ರೂಪಿಸಬೇಕು.ಪ್ರಸ್ತುತ ಶಿಕ್ಷಣ ಆಧುನಿಕತೆಯ ಪರಿಣಾಮ ವಿಶ್ವವನ್ನು ಅತ್ಯಂತ ಚಿಕ್ಕದಾಗಿಸಿದ್ದು ನಮ್ಮ ಮಕ್ಕಳ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ತಯಾರಿಸಬೇಕು. ಗಂಗಾವತಿಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದ ವರೆಗೆ ಶಾಲಾ ಕಾಲೇಜಿಗಳಿದ್ದು ಪ್ರತಿಯೊಬ್ಬರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.ಶಿಕ್ಷಕರಿಂದಾಗಿ ಸರ್ವರೂ ಬದುಕು ರೂಪಿಸುತ್ತಾರೆಂದರು
ಡಿಡಿಪಿಐ ಬಿ.ಸೋಮಶೇಖರ್ ಗೌಡ,ಬಿಇಓ ನಟೇಶ,ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಿರಿಯ ಪತ್ರಕರ್ತ ಕೆ.ನಿಂಗಜ್ಜ, ಮಾತನಾಡಿ. ಬಾಲಕ ಪಾಲಕ ಹಾಗೂ ಶಿಕ್ಷಕರ ಸಂಬಂಧ ಉತ್ತಮವಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ತಿಳಿಸಿದರು
ನ್ಯಾಯವಾದಿ ನಾಗರಾಜ ಗುತ್ತೆದಾರ.,ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ,ತಾಲೂಕು ಅಧ್ಯಕ್ಷ ಜಡಿಯಪ್ಪ,ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎಚ್.ದೇವೆಂದ್ರ,ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಆನೆಗೊಂದಿ ಸೇರಿ ಅನೇಕರಿದ್ದರು. 20 ಪ್ರಾಥಮಿಕ, ಪ್ರೌಢ ಶಾಲೆಯ ಅತ್ಯುತ್ತಮ ಶಿಕ್ಷಕ,ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.