Breaking News

ಮಹಿಳೆ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Woman missing: Request for assistance in finding her

ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): ಗದಗ ಜಿಲ್ಲೆಯ ಕದಡಿ ಗ್ರಾಮದ ರಜಿಯಾಬಿ ಗಂಡ ಸೂಲೀಮಾನ ಎಂಬ 21 ವರ್ಷದ ಮಹಿಳೆಯು ಜುಲೈ 30 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿರುವ ತನ್ನ ತಂದೆಯ ಮನೆಯಿಂದ ಗಂಡನ ಊರಾದ ಕದಡಿ ಗ್ರಾಮಕ್ಕೆ ಹೋಗುವುದಾಗಿ ಹೇಳಿ ಹೋದವರು ಎಲ್ಲಿಗೂ ಹೋಗದೆ ನಾಪತ್ತೆಯಾಗಿರುತ್ತಾರೆ.

ಜಾಹೀರಾತು

ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 134/2025 ಕಲಂ: ಮಹಿಳೆ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ:
ಮಹಿಳೆಯು 4.6 ಅಡಿ ಎತ್ತರವಿದ್ದು, ಸದೃಢ ಮೈಕಟ್ಟು, ಸಾದಗೆಂಪು ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ಹಳದಿ ಬಣ್ಣದ ಸೀರೆ ಹಾಗೂ ಬಿಳಿ ಬಣ್ಣದ ಜಂಪರ್ ಧರಿಸಿದ್ದರು.
ಮೇಲ್ಕಂಡ ಚಹರೆಯ ಮಹಿಳೆಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803749 ಮತ್ತು 08534-220133 ಅಥವಾ ಕೊಪ್ಪಳ ಕಂಟ್ರೋಲ್ ರೂಮ್ ನಂ.08539-220222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಯಲಬುರ್ಗಾ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ. ಕಾಣೆಯಾದ ಮಹಿಳೆಯ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಯಲಬುರ್ಗಾ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

About Mallikarjun

Check Also

ಕೃಷಿ ಪಂಡಿತ ಪ್ರಶಸ್ತಿಗೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Application deadline extended for Krishi Pandita Award ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): 2025-26 ನೇ ಸಾಲಿನಲ್ಲಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.