ಗಂಗಾವತಿ.ಸೆ..06: ತಾಲ್ಲೂಕಿನ, ವೆಂಕಟಗಿರಿ ಹೋಬಳಿಯ ವಿಠಾಲಪುರ ಗ್ರಾಮದ ಶ್ರೀದೇವಿ ಗಂಡ ದಿ.ಶ್ಯಾಮಸುಂದರ್, ಸಾ: ಗಂಗಾವತಿ ಹಾಗೂ ಇವರ ಕುಟುಂಬದವರು ಜಮೀನು ಸರ್ವೆ ನಂ.29/2/4 ವಿ:01-27ಗುಂಟೆಯಲ್ಲಿ ಫಲವತ್ತಾದ ಸಮತಟ್ಟವಾದ ಭೂಮಿಯ ಪಕ್ಕದಲ್ಲಿ ಕಾಯ್ದಿಟ್ಟ ಅರಣ್ಯ ಹಾಗೂ ಸರಕಾರಿ ಒತ್ತುವರಿ ಮಾಡಿ ಅಕ್ರಮ ಮರಂ ಗಣಿಗಾರಿಕೆ ಮಾಡುತ್ತಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ತೆಗೆದುಕೊಂಡು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಕಾರ್ಯದರ್ಶಿ ಶಂಕರ್ ಸಿದ್ದಾಪುರ ವಕೀಲರು ಒತ್ತಾಯಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಶನಿವಾರದಂದು ದೂರು ಸಲ್ಲಿಸಿದ್ದಾರೆ.
ಒತ್ತುವರಿ ಭೂಮಿ ವ್ಯಾಪ್ತಿಯಲ್ಲಿ ವನ್ಯಜೀವಿಗಳು ವಾಸಿಸುತ್ತಿದ್ದು ಅವುಗಳ ಜೀವಕ್ಕೆ ಅಪಾಯ ಉಂಟಾಗುವ ಸಂಭವಿದೆ. ವೆಂಕಟಗಿರಿ ಹೋಬಳಿಯ ವಿಠಾಲಪುರ ಗ್ರಾಮದ ಶ್ರೀದೇವಿ ಗಂಡ ದಿ.ಶ್ಯಾಮಸುಂದರ್, ಸಾ: ಗಂಗಾವತಿ ಹಾಗೂ ಇವರ ಕುಟುಂಬದವರು ಜಮೀನು ಸರ್ವೆ ನಂ.29/2/4 ವಿ:01-27ಗುಂಟೆಯಲ್ಲಿ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕೃಷಿ ಇಲಾಖೆ (ರೈತ ಸಂಪರ್ಕ ಕೇಂದ್ರ ವೆಂಕಟಗಿರಿ ಹಾಗೂ ಕಂದಾಯ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕೆಲವು ಅಕ್ರಮ ದಂಧೆಕೊರರು ಅನುಮತಿ ಪಡೆದಿದ್ದಾರೆ. ಇದನ್ನು ತಡೆಹಿಡಿದು ವ್ಯನ್ಯಜೀವಿಗಳು ಮತ್ತು ಪರಿಸರದ ಸಂಪತ್ತನ್ನು ಕಾಪಾಡುವುದರ ಜೊತೆಗೆ ಫಲವತ್ತಾದ ಸಮತಟ್ಟವಾದ ಭೂಮಿಯಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ಮಾಡುವುದನ್ನು ತಡೆಹಿಡಿಯಬೇಕು. ಕೆಲವು ದಲ್ಲಾಳಿಗಳು ಮೂಲಕ ಜಮೀನು ಮಾಲೀಕರಿಗೆ ಹಣದ ಆಮಿಷ ತೋರಿಸಿ ಫಲವತ್ತತೆ ಮತ್ತು ಸಮತಟ್ಟತೆ ಜಮೀನನ್ನು ಹಾಳು ಮಾಡಲು ಹೊರಟಿದ್ದಾರೆ. ಸರ್ಕಾರದ ನಿಯಮಾವಳಿಗಳು ಪ್ರಕಾರ ಗಣಿ ಮತ್ತು ಬಂಡೆಗಳು ಹೊಂದಿರುವ ಜಮೀನುಗಳನ್ನು ಕೃಷಿ ಜಮೀನನ್ನಾಗಿ ಸಮತಟ್ಟು ಮಾಡಲು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳ ಪ್ರಕಾರ 1994 ತಿದ್ದುಪಡಿ ನಿಯಾಮವಾಳಿ 2023ರ ನಿಯಮ 3ಎ(ಎ)(4) ಅನ್ವಯ ಅಧಿನಿಯಮವು ತಿಳಿಸುತ್ತದೆ.
ಆದರೆ ಯಾವುದೇ ಖಾಸಗಿ ಜಮೀನಾಗಲಿ ಅಥವಾ ಸರ್ಕಾರಿ ಕೃಷಿ ಜಮೀನಾಗಲಿ ಸಂಬಂಧಪಟ್ಟಂತಹ ಇಲಾಖೆಯವರು ಪರವಾನಿಗೆ ನೀಡುವ ಸಂದರ್ಭದಲ್ಲಿ ಮರಂ ಮತ್ತು ಮಣ್ಣು ಸಾಗಾಣಿಕೆ ಸಣ್ಣ ಪ್ರಮಾಣದ ಕಲ್ಲು ಬಂಡೆಗಳನ್ನು ತೆಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಂದಾಯ ಇಲಾಖೆ ಕೃಷಿ ಇಲಾಖೆ ಪರವಾನಿಗೆ ನೀಡಲು ಅವಕಾಶವಿದೆ. ಆದರೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ, ಸರ್ಕಾರದ ಆದೇಶಗಳನ್ನು ಲೆಕ್ಕಿಸದೇ ಕೆಲವು ಅಕ್ರಮ ದಂಧೆಕೋರರು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಅನುಮತಿ ಪಡೆದಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಾನಿಕ ಸ್ಥಳ ಪರಿಶೀಲನೆ ಮಾಡಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಬೇಕು. ಕೂಡಲೇ ಅವರುಗೆ ನೀಡಿದ ಪರವಾಗಿ ರದ್ದು ಪಡಿಸಬೇಕು.
ಒಂದು ವೇಳೆ ತಾವುಗಳು ಸ್ಥಳ ಪರಿಶೀಲನೆ ಮಾಡದೆ ನಿರ್ಲಕ್ಷ ಮಾಡಿದರೆ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕೃಷಿ ಇಲಾಖೆ (ರೈತ ಸಂಪರ್ಕ ಕೇಂದ್ರ ವೆಂಕಟಗಿರಿ) ಕಂದಾಯ ಇಲಾಖೆಯ ಮುಂದೆ ಧರಣಿ ಸತ್ಯಾಗ್ರಹ ಮೂಲಕ ನಮ್ಮ ಸಂಘಟನೆಯಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶಂಕರ್ ಸಿದ್ದಾಪುರ ಎಚ್ಚರಿಸಿದ್ದಾರೆ.