Breaking News

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

Missing person: Request for assistance in finding him/her
Screenshot 2025 09 06 18 45 47 86 E307a3f9df9f380ebaf106e1dc980bb69049505004045186873

ಜಾಹೀರಾತು

ಕೊಪ್ಪಳ ಸೆಪ್ಟೆಂಬರ್ 06, (ಕರ್ನಾಟಕ ವಾರ್ತೆ): ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಕಲ್ಲಪ್ಪ ದೇವಪ್ಪ ಉಪ್ಪಾರ ಎಂಬ 35 ವರ್ಷದ ವ್ಯಕ್ತಿಯು ಮಾರ್ಚ್ 12 ರಂದು ಸಂಜೆ 6 ಗಂಟೆಯ ಸುಮಾರಿಗೆ ಉಡುಪಿಗೆ ಕೂಲಿ ಕೆಲಸಕ್ಕಾಗಿ ತೆರಳಿದ ನಂತರ ವಾಪಸ್ ಮನೆಗೆ ಬಾರದೇ ಕಾಣೆಯಾಗಿದ್ದು, ಮೊಬೈಲ್ ಸಂಖ್ಯೆಯು ಸ್ವಿಚ್ಛ್ ಆಫ್ ಎಂದು ಬರುತ್ತಿದೆ. ಈ ಬಗ್ಗೆ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 126/2025 ಕಲಂ: ಮನುಷ್ಯ ಕಾಣೆ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ:
ವ್ಯಕ್ತಿಯು 5.5 ಅಡಿ ಎತ್ತರವಿದ್ದು, ಸದೃಢ ಮೈಕಟ್ಟು, ಸಾದಗೆಂಪು ಮೈಬಣ್ಣ ಹಾಗೂ ದುಂಡು ಮುಖ ಹೊಂದಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದಾಗ ನೀಲಿ ಬಣ್ಣದ ಅಂಗಿ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು.
ಮೇಲ್ಕಂಡ ಚಹರೆಯ ವ್ಯಕ್ತಿಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ದೊರೆತಲ್ಲಿ ಯಲಬುರ್ಗಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803749 ಮತ್ತು 08534-220133 ಅಥವಾ ಕೊಪ್ಪಳ ಕಂಟ್ರೋಲ್ ರೂಮ್ ನಂ.08539-220222 ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಯಲಬುರ್ಗಾ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ. ಕಾಣೆಯಾದ ವ್ಯಕ್ತಿಯ ಕುರಿತು ಮಾಹಿತಿ ನೀಡಿದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಯಲಬುರ್ಗಾ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.

About Mallikarjun

Check Also

screenshot 2025 10 25 19 16 03 64 6012fa4d4ddec268fc5c7112cbb265e7.jpg

ಕಿತ್ತೂರು ಚೆನ್ನಮ್ಮನ ಹಾಗೂ ಬೆಳವಡಿ ಮಲ್ಲಮ್ಮ ಆದರ್ಶ ಬೆಳೆಸಿಕೊಳ್ಳಿ : ಶಂಕರ ಬಿದಿರಿ

Cultivate the ideals of Kittur Chennamma and Belavadi Mallamma: Shankara Bidiri ಬೆಂಗಳೂರು,ಅ.೨೫; ಬೆಳವಡಿ ಮಲ್ಲಮ್ಮ ಹಾಗೂ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.