Distribution of almond milk on the occasion of Eid Milad.
ಕನಕಗಿರಿ:ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಬಾಂಧವರಿಂದ ಹಮ್ಮಿಕೊಳ್ಳಲಾಗಿದ್ದ ಈದ್ ಮಿಲಾದ್ ಹಬ್ಬದ ಕಾರ್ಯಕ್ರಮದಲ್ಲಿ ಅರಳಹಳ್ಳಿ ಶ್ರೀ ಗವಿಸಿದಯ್ಯ ಮಹಾಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕನಕಗಿರಿ ಪಟ್ಟಣದ ವಿವಿಧ ಪಕ್ಷದ ಹಿರಿಯ ನಾಯಕರು, ಯುವ ಮುಖಂಡರು, ಪಟ್ಟಣ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಭಾಗಿಯಾಗಿ ಶುಭ ಕೋರಿದರು.
ಕನಕಗಿರಿ ಪಟ್ಟಣದ ರಾಜಬೀದಿಯ ಮೂಲಕ ಮೆರವಣಿಗೆಯು ತೆರಳುವ ಮಾರ್ಗದಲ್ಲಿ ಬರುವ ಶ್ರೀ ವಿಘ್ನೇಶ್ವರರ ಮೂರ್ತಿಗೆ ಪುಷ್ಪ ನಮನಗಳನ್ನು ಸಲ್ಲಿಸಿ ಮುಸ್ಲಿಂ ಸಮಾಜದ ಬಾಂದವರು ಭಾವೈಕ್ಯತೆ ಮೆರೆದರು.
ನಂತರ ಪಟ್ಟಣದ 2 ಮತ್ತು 9ನೇ ವಾರ್ಡಿನ ಯುವಕರು ಸೇರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಊರಿನ ಎಲ್ಲಾ ಜನರಿಗೂ ತಂಪು ಪಾನೀಯ ಹಾಗೂ ಬಾದಾಮಿ ಹಾಲು ವಿತರಿಸಿದರು.
ಸದರಿ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರ ಸ್ವಾಮಿ, ಪಟ್ಟಣ ಪಂಚಾಯತ ಅಧ್ಯಕ್ಷೆ ಹುಸೇನ್ ಬೀ ಚಳಮರದ್, ಉಪಾಧ್ಯಕ್ಷ ಕಂಠಿರಂಗ ನಾಯಕ್, ಸದಸ್ಯರಾದ ಅನಿಲ್ ಕುಮಾರ್ ಬಿಜ್ಜಳ, ರಾಜಸಾಬ್ ನಂದಾಪುರ್, ರಾಕೇಶ್, ಹನುಮಂತ ಬಸರಿಗಿಡ, ಪಿ ಐ ಎಂ ಡಿಫೈಜುಲ್, ಮುಸ್ಲಿಂ ಸಮಾಜದ ಹಿರಿಯರು ಹಾಗೂ ಊರಿನ ಮುಖಂಡರು ಇತರರು ಉಪಸ್ಥಿತರಿದ್ದರು.