Anjanadri development should not be limited to mere statements - Paranna Munavalli


ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀ ಹನುಮಂತ ದೇವರು ಜನಿಸಿದ ತಾಣ, ಐತಿಹಾಸಿಕ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ಸ್ವತಃ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಆಸಕ್ತಿವಹಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಸ್ವಾಗತಾರ್ಹ.
ಆದರೆ ಮಾನ್ಯ ಮುಖ್ಯಮಂತ್ರಿಯವರ ಸಲಹೆ-ಸೂಚನೆಗಳು ಕೇವಲ ಸಭೆಗೆ ಮಾತ್ರ ಸೀಮಿತವಾಗಬಾರದು, ಅವುಗಳು ಕಾರ್ಯಗತವಾಗಿ ಅಂಜನಾದ್ರಿ ಅಭಿವೃದ್ಧಿಗೆ ಪೂರಕವಾಗಿ ಅನುಷ್ಟಾನಕ್ಕೆ ಬರಬೇಕೆಂದು ನಾನು ಸರ್ಕಾರಕ್ಕೆ ಒತ್ತಾಹಿಸುತ್ತೇನೆ.
ಈ ಹಿಂದೆ ನಾನು ಬಿಜೆಪಿ ಸರ್ಕಾರದ ಶಾಸಕ ಇದ್ದ ಅವಧಿಯಲ್ಲಿ ಆಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿಯವರು 120 ಕೋಟಿ ರೂ.ಗಳ ಅನುದಾನ ಒದಗಿಸಿ ಅದರಲ್ಲಿ 20 ಕೋಟಿ ರೂ.ಗಳ ಕೆಲಸ ಆಗಿದ್ದು ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬದ್ದು ಕೇವಲ ಬಜೆಟ್‌ಗೆ ಮಾತ್ರ ಸಿಮಿತವಾದ 100 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಬಿಟ್ಟರೆ ನಯಾಪೈಸ ಕೆಲಸ ಆಗಿಲ್ಲ.
ಅಂಜನಾದ್ರಿ ಐತಿಹಾಸಿಕ ಪ್ರಸಿದ್ದಿ ಪಡೆದ ಕ್ಷೇತ್ರವಾಗಿರುದರಿಂದ ದಿನಾಲು ಸಾವಿರಾರು ಭಕ್ತರು ರಾಜ್ಯ ಹೊರರಾಜ್ಯದಿಂದ ಬರುತ್ತಾರೆ. ಬಂದಂತಹ ಭಕ್ತರಿಗೆ ಮೂಲಭೂತ ಸೌಕಾರ್ಯ ಒದಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು, ಈಗ ಬಿಡುಗಡೆಯಾಗಿರುವ ಅನುದಾನದಲ್ಲಿಯೆ ರೈತರನ್ನು ಮನಪರಿವರ್ತಿಸಿ ಅವರ ಜಮೀನಿಗೆ ಸೂಕ್ತ ಪರಿಹಾರವನ್ನು ನೀಡಿ ಕೂಡಲೇ ಅಂಜನಾದ್ರಿಯ ಸಮಗ್ರ ಅಭಿವ್ರದ್ಧಿಗೆ ಮಾನ್ಯ ಮುಖ್ಯಮಂತ್ರಿಗಳು ಬದ್ಧತೆ ತೋರಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಪೂರ್ವಕವಾಗಿ ಒತ್ತಾಯಿಸುತ್ತೇನೆ.
شتم
(