Breaking News

ಆಭರಣ ಅಂಗಡಿಯಲ್ಲಿ ಪಿಸ್ತೂಲ್ ತೋರಿಸಿ ಬಂಗಾರದ ಆಭರಣಗಳನ್ನು ದೋಚಲು ಯತ್ನಿಸಿದ  2 ಜನ‌ ಆರೋಪಿಗಳ ಬಂಧನ

2 accused arrested for trying to rob gold ornaments at gunpoint in jewellery shop
Screenshot 2025 09 05 08 04 20 08 6012fa4d4ddec268fc5c7112cbb265e71772496959542286155 1024x658

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಅಥಣಿ ಪಟ್ಟಣದ ಆಭರಣದ ಅಂಗಡಿಯೊಂದರಲ್ಲಿ ಪಿಸ್ತೂಲ್ ತೋರಿಸಿ ಬಂಗಾರದ ಆಭರಣಗಳನ್ನು ದೋಚಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಜನ‌ ಆರೋಪಿತರನ್ನು ಬಂಧಿಸಿದ್ದು, ಅವರಿಂದ ಕೃತ್ಯಕ್ಕೆ ಬಳಸಿದ 2 ಪಿಸ್ತೂಲಗಳು,‌ 7 ಜೀವಂತ ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಥಣಿ ಪೊಲೀಸರಿಂದ ಅಂತರ್ ರಾಜ್ಯ ಸುಲಿಗೆಕೋರರ ಬಂಧನ.

ಜಾಹೀರಾತು
Screenshot 2025 09 05 08 04 28 69 6012fa4d4ddec268fc5c7112cbb265e72180371012859768668 1024x652

ಅಥಣಿ ಪಟ್ಟಣದಲ್ಲಿ ದಿನಾಂಕ: 26-08-2025 ರಂದು ಮಧ್ಯಾಹ್ನ 2-30 ರ ಸುಮಾರಿಗೆ ತ್ರಿಮೂರ್ತಿ ಜ್ಯೂವಲರ್ಸನಲ್ಲಿ ಇಬ್ಬರು ಅಂಗಡಿಯ ಮಾಲೀಕನಿಗೆ ಪಿಸ್ತೂಲ ತೋರಿಸಿ ಬಂಗಾರವನ್ನು ದೋಚಲು ಪ್ರಯತ್ನಿಸಿದ್ದು ಈ ಬಗ್ಗೆ ಅಥಣಿ ಪೋಲಿಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಆರೋಪಿತರ ಬಗ್ಗೆ ಸಿಸಿಟಿವಿ ಹೊರತು ಪಡೆಸಿ ಯಾವುದೇ ಕನಿಷ್ಠ ಸುಳಿವು ಇರದಿದ್ದರೂ ಸಹ ಘಟನೆ ನಡೆದ ಸಮಯದಿಂದ ಇಲ್ಲಿಯವರೆಗೆ ವಿವಿಧ ಆಯಾಮಗಳಿಂದ ಪರಿಶೀಲಿಸಿ ಸತತ ಪ್ರಯತ್ನದಿಂದ ಈ ದಿನ ಇದರಲ್ಲಿಯ 1) ವಿಜಯ @ ಬಬಲು ಸಂಜಯ ಜಾವೀರ 2) ಯಶವಂತ @ ಓಂಕಾರ ಗೋಪಿನಾಥ ಗುರವ ಇಬ್ಬರು ಆರೋಪಿತರನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ 2 ಪಿಸ್ತೂಲ, 7 ಜೀವಂತ ಗುಂಡುಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಹೀಂದ್ರಾ ಎಕ್ಸ.ಯು.ವಿ-500 ಕಾರ್, ಮತ್ತು ಒಂದು ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದು ಇರುತ್ತದೆ.

ಡಾ|| ಭೀಮಾಶಂಕರ ಎಸ್. ಗುಳೇದ, ಐಪಿಎಸ್, ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಹಾಗೂ ಶ್ರೀ ರಾಮಗೊಂಡ ಬಿ. ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ, ಶ್ರೀ ಪ್ರಶಾಂತ ಮುನ್ನೋಳಿ, ಡಿಎಸ್‌ಪಿ ಅಥಣಿ ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಸಂತೋಷ ಡಿ. ಹಳ್ಳೂರ ಸಿಪಿಐ ಅಥಣಿ ವೃತ್ತ ರವರ ನೇತೃತ್ವದಲ್ಲಿ ಶ್ರೀ ಜಿ ಎಸ್. ಉಪ್ಪಾರ ಪಿಎಸ್‌ಐ(ಕಾ&ಸು) ಅಥಣಿ, ಮಲ್ಲಿಕಾರ್ಜುನ ತಳವಾರ ಪಿಎಸ್‌ಐ (ಅವಿ) ಅಥಣಿ ಠಾಣೆ, ಕುಮಾರ ಹಾಡಕರ ಪಿಎಸ್‌ಐ (ಅವಿ) ಐಗಳಿ, ಇವರ ಮುಂದಾಳತ್ವದಲ್ಲಿ ಅಪರಾಧ ತನಿಖಾ ತಂಡವನ್ನು ರಚಿಸಲಾಗಿತ್ತು. ಸದರಿ ತನಿಖಾ ತಂಡದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಜನರಾದ 1) ಪಿ.ಬಿ ನಾಯಿಕ ಸಿಎಚ್‌ಸಿ-1250 2) ಎ ಎ ಈರಕರ,ಸಿಎಚ್‌ಸಿ 1428 3) ಬಿ ಬಿ ಪಾಟೀಲ ಎಚ್ ಸಿ 914 4) ಜೆ 4034 7) 25 , 3093 5) ໖໖ ,4 39736) 42 ಜಿ ಎ ಗುರುಮಠ,ಮಪಿಸಿ 617 8) ಡಿ ಟಿ ಶಾನವಾಡ ಪಿಸಿ 3784 9) ಎಸ್ ಸಿ ಪೂಜಾರಿ ಪಿಸಿ 3123 ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ವಿನೋದ ಟಕ್ಕನ್ನವರ ಇವರು ಇದ್ದರು. ಸದರಿ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಬೆಳಗಾವಿ ರವರು ಶ್ಲಾಘಿಸಿರುತ್ತಾರೆ.

About Mallikarjun

Check Also

screenshot 2025 10 25 17 53 12 59 6012fa4d4ddec268fc5c7112cbb265e7.jpg

ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಶತೋತ್ತರ ದಶಮಾನೋತ್ಸವದ ಪೂರ್ವಭಾವಿ ಸಭೆ

Preparatory meeting for the centenary celebrations of Shivaratri Rajendra Mahaswamy. ವರದಿ: ಬಂಗಾರಪ್ಪ .ಸಿ .ಹನೂರು : …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.