Fourth Annual Paddy Country Farmers Producers Company Meeting,

ಗಂಗಾವತಿ: ತಾಲೂಕಿನ ಕೋಟಯ್ಯಕ್ಯಾಂಪಿನಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಶ್ರೀ ಎನ್ ಸತ್ಯನಾರಾಯಣ, ಕಾರ್ಯ ನಿರ್ವಾಹಕ ನಿರ್ದೇಶಕರು ಇವರ ಅಧ್ಯಕ್ಷತೆಯಲ್ಲಿ, 2024-25 ನೇ ಸಾಲಿನ ಕಂಪನಿ ವಾರ್ಷಿಕ ಸಭೆಯನ್ನು ಆಯೋಜಿಸಲಾಯಿತು. ದೇಶ, ಸಮಾಜ ಮತ್ತು ಪರಿಸರವನ್ನು ಸುಧಾರಿಸುವ ಅನ್ನದಾತ ಎಂದು ಹೆಮ್ಮೆಯ ರೈತರಿಗೆ ಗೌರವ ನಮನ ಎಂದು ಹೇಳುತ್ತಾ ಸತ್ಯನಾರಾಯಣ ಮಾತನಾಡಿ, ರೈತ ಹಿತವಾಗಿದ್ದರೆ ನಾಡು ಹಿತ ಎಂಬಂತೆ ನಮ್ಮ ಭಾಗದ ರೈತರು ಹೆಚ್ಚು ಭತ್ತ ಬೆಳೆದಿದ್ದು, ಮತ್ತು ಭತ್ತಕ್ಕೆ ಹೆಚ್ಚು ಆಲಂಬಿತರಾಗಿದ್ದಾರೆ, ರೈತರು ಬೆಳೆಯುವ ಭತ್ತಕ್ಕೆ ಬೇಕಾಗುವ ಪ್ರತಿಯೊಂದು, ಕೀಟನಾಶಕ ಔಷಧ, ರಸಗೊಬ್ಬರ, ಪಶು ಆಹಾರ, ಬ್ರೀಡರ್ ಸೀಡ್ ಮಾರಾಟ, ತಾಡಪಾಲು ಗಳು, ಬೇಲರ್ ದಾರ ಇತ್ಯಾದಿ ಗಳನ್ನು ತಯಾರಿಕಾ ದಾರದಿಂದ ನೇರವಾಗಿ ಖರೀದಿಸಿ ರೈತರಿಗೆ ಮಾರಾಟ ಮಾಡಲಾಗುವುದು, ಕಂಪನಿಯ ಆಡಳಿತವನ್ನು ಕಂಪನಿಯ ಕಾಯ್ದೆ ಮತ್ತು ನಿಯಮ ಹಾಗೂ ಉಪ ನಿಯಮಗಳ ಅನ್ವಯ ಮತ್ತು ಕಂಪನಿಯ ಕಾರ್ಯ ನಿರ್ವಹಣೆ ಎಲ್ಲಾ ಹಂತದಲ್ಲಿಯೂ ಪಾರದರ್ಶಿಕವಾಗಿರಲು ಮಂಡಳಿಯ ಕ್ರಮ ಜರುಗಿಸುತ್ತ ಆಡಳಿತ ನಿರ್ವಹಿಸುತ್ತಿದ್ದು ಕಂಪನಿಯ 2024 25ನೇ ಸಾಲಿನ ವರದಿ ಮತ್ತು ಲೆಕ್ಕ ಪತ್ರಗಳನ್ನು ಓದಿ ವಿವರಿಸುತ್ತಾ ಕಂಪನಿಯಲ್ಲಿ 506 ಜನ ರೈತ ಸದಸ್ಯರಿದ್ದು, ಒಂದು ವರ್ಷದಲ್ಲಿ ಕನಿಷ್ಠ 15000/- ಗಳ ವ್ಯವಹಾರವನ್ನು ಮಾಡಬೇಕು ಇದರಲ್ಲಿ ಕಂಪನಿಯೂ ಉತ್ತಮ ರೀತಿಯಲ್ಲಿ ನಡೆಸಬಹುದು ಎಂದರು. ಈ ಸಂದರ್ಭದಲ್ಲಿ ಮಂಡಳಿ ಸದಸ್ಯರಾದ ಎಚ್. ವಿರೂಪಾಕ್ಷಿ ಗೌಡ,
ಕೆ.ನಾಗೇಶ್ವರರಾವ್, ಎನ್. ವೆಂಕಟೇಶ್ವರಾವ್, ಚನ್ನಬಸವ ರಾಜ್, ಸುಧೀರ್ ಕುಮಾರ್, ನರೇಶ್ ಕುಮಾರ್ ,ಹೊಸಕೇರಾ, ನರಸಾಪುರ, ಹನುವಾಳ, ಸಿಂಗನಾಳ, ಅಯೋಧ್ಯ, ಹೊಸಕೆರ ಕ್ಯಾಂಪ್, ಭತ್ತದ ನಾಡು ರೈತ ಉತ್ಪಾದಕರ ಕಂಪನಿಯ ಸರ್ವ ಸದಸ್ಯರು ಭಾಗಿಯಾಗಿದ್ದರು.
Kalyanasiri Kannada News Live 24×7 | News Karnataka
