Breaking News

ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ- ಡಾ. ಸುರೇಶ ಬಿ. ಇಟ್ನಾಳ

Conduct survey work in the district neatly – Dr. Suresh B. Itnal

ಜಾಹೀರಾತು
img 8639

ಕೊಪ್ಪಳ ಸೆಪ್ಟೆಂಬರ್ 03 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥತಿಗತಿಗಳ ಬಗ್ಗೆ ಕೈಗೊಳ್ಳಲಿರುವ ಈ ಸಮೀಕ್ಷಾ ಕಾರ್ಯವನ್ನು ಕೊಪ್ಪಳ ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕೈಗೊಳ್ಳಲಿರುವ ಸಮೀಕ್ಷಾ ಕಾರ್ಯದ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಈ ಸಮೀಕ್ಷೆ ಕಾರ್ಯವು ಕೊಪ್ಪಳ ‌ಜಿಲ್ಲೆಯಲ್ಲಿ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿದ್ದು, ಯಾವುದೇ ಸಮಸ್ಯೆಗಳಾಗದಂತೆ ನಡೆಸಬೇಕು. ಜಿಲ್ಲೆಯ ಆಯಾ ತಾಲ್ಲೂಕಿನ ತಹಶಿಲ್ದಾರರು ಸಮೀಕ್ಷೆ ‌ಕಾರ್ಯಕ್ಕೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರನ್ನು ಸರಿಯಾಗಿ ನೇಮಿಸಿದ್ದಾರೆ ಅಥವಾ ಇಲ್ಲ ಎಂಬುದನ್ನು ಪರಿಶೀಲನೆ ಮಾಡಬೇಕು. ಶಿಕ್ಷಕರು ವರ್ಗಾವಣೆ ಯಾದವರು. ಡೆಪಟೇಷನ್ ಮೇಲೆ ಬೇರೆ ಕಡೆ ಹೋದವರು ಇರುತ್ತಾರೆ ಹಾಗಾಗಿ ಈ ಎಲ್ಲವುಗಳನ್ನು ಗಮನಿಸಿ ಗಣತಿದಾರರ ಸಮೀಕ್ಷಾ‌ ಪಟ್ಟಿ ತೈಯಾರಿಸಬೇಕೆಂದರು.

ಆರೋಗ್ಯ ‌ಸಮಸ್ಯೆ ಇರುವವರು, ಚಿಕ್ಕ ಮಕ್ಕಳು ಇರುವ ಮಹಿಳಾ ಶಿಕ್ಷಕರು ಮತ್ತು ವಿಶೇಷ ಚೇತನ ಶಿಕ್ಷಕರಿಗೆ ಈ ಕಾರ್ಯಕ್ಕೆ ನಿಯೋಜನೆ‌ ಮಾಡಬೇಡಿ. ಸಮೀಕ್ಷಾ ಕಾರ್ಯಕ್ಕೆ‌‌ ಪ್ರತಿ 150 ಮನೆಗಳಿಗೆ ಒಬ್ಬ ಗಣತೀದಾರರನ್ನು ಹಾಗೂ‌ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಿ ಗಣತಿ ಕಾರ್ಯಕ್ಕೆ ಯಾವುದೇ ಸಮಸ್ಯೆಗಳಾಗದಂತೆ ಅಗತ್ಯ ಸಿದ್ಧತೆಗಳನ್ನು ‌ಮಾಡಿಕೊಳ್ಳಬೇಕು. ಪ್ರತಿಯೊಂದಕ್ಕೆ ತಮಗೆ ಹೇಳುವಂತಾಗಬಾರದು ತಾವೆಲ್ಲರೂ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಬೇಕೆಂದು ಹೇಳಿದರು.

ಕೊಪ್ಪಳ ‌ಜಿಲ್ಲೆಯಲ್ಲಿ 3,55,361 ಕುಟುಂಬಗಳನ್ನು ಅಂದಾಜಿಸಲಾಗಿದ್ದು 150 ಕುಟುಂಬಕ್ಕೆ ‌ಒಬ್ಬ ಗಣತಿದಾರರಂತೆ ಒಟ್ಟು 2370 ಗಣತಿದಾರರು ಬೇಕಾಗುತ್ತಾರೆ. 20 ಗಣತಿದಾರರಿಗೆ ಒಬ್ಬ ‌ಮೇಲ್ವಿಚಾರಕರಂತೆ ಅಂದಾಜು ‌130 ಜನ ಮೇಲ್ವಿಚಾರಕರು ಮತ್ತು 50 ಮಾಸ್ಟರ್ ಟ್ರೈನರಗಳನ್ನು ನೇಮಿಸಬೇಕು. ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಬೇಕು. ಆಯಾ ಗ್ರಾಮ ಪಂಚಾಯತಿ ‌ಮತ್ತು ನಗರ ವ್ಯಾಪ್ತಿಯ ಪ್ರದೇಶದಲ್ಲಿ ಅವಶ್ಯವಿರುವಷ್ಟು ಶಿಕ್ಷಕರು ಲಭ್ಯವಾಗದಿದ್ದಲ್ಲಿ ಇತರೆ ವಿವಿಧ ಇಲಾಖೆಯ ಪ್ರಥಮ ದರ್ಜೆ ಸಹಾಯಕರು ಹಾಗೂ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸಿ. ಈ ಸಮೀಕ್ಷೆ ‌ಕಾರ್ಯಕ್ಕೆ ಮಾಸ್ಟರ್ ಟ್ರೈನರಗಳ ಅವಶ್ಯಕತೆ ಇದ್ದು ಈಗಾಗಲೇ ಈ ಕಾರ್ಯದಲ್ಲಿ ಕೆಲಸ ಮಾಡಿದವರನ್ನು ನೇಮಿಸಿ ಎಂದು ಹೇಳಿದರು.

ಈ ಸಭೆಯಲ್ಲಿ ಅಪರ‌ ಜಿಲ್ಲಾಧಿಕಾರಿ ‌ಸಿದ್ರಾಮೇಶ್ವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೆಶಕರಾದ  ಮಂಜುನಾಥ ಗುಂಡೂರ, ಜಿಲ್ಲಾ ‌ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ ಹೊಸಮನಿ, ಜಿಲ್ಲಾ ‌ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ್ ಮಾನೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಜಗದೀಶ್, ಜಿಲ್ಲಾ ‌ಅಲ್ಪ ಸಂಖ್ಯಾತರ ಕಲ್ಯಾಣ ಅಧಿಕಾರಿ ಅಜ್ಮಿರ್ ಅಲಿ ಹಾಗೂ  ‌ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶಿಲ್ದಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

About Mallikarjun

Check Also

0326bec8 a121 4d15 ac53 495e909794b3

ಡೆಂಗ್ಯೂ ಜ್ವರದ ಬಗ್ಗೆ ಆತಂಕ ಬೇಡ ಮುಂಜಾಗ್ರತೆ ಇರಲಿ

Don’t worry about dengue fever, be careful (ವಿಶೇಷ ಲೇಖನ) ಮನುಷ್ಯನ ಆರೋಗ್ಯವು ಸಂಪೂರ್ಣವಾಗಿ ದೈಹಿಕ, ಮಾನಸಿಕ ಮತ್ತು ಸಾಮಾಜಿಕ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.