Breaking News

ಪ್ರತಿಷ್ಠಿತ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಮಹ್ಮದ್ ಆಸೀಫ್ ಆಯ್ಕೆ

Mohammad Asif selected for the prestigious Mathrubhumi State Award

ಜಾಹೀರಾತು
02 koppal news.photo

ಕೊಪ್ಪಳ: ಕರ್ನಾಟಕ ಕಂಡ ಅದ್ಭುತ ಮತ್ತು ರಾಷ್ಟçಮಟ್ಟದ ಖ್ಯಾತಿ ಗಳಿಸಿರುವ ಬೆಂಗಳೂರಿನ ಲಗ್ಗೆರೆಯ ಮಾತೃಭೂಮಿ ಯುವಕರ ಸಂಘ ತನ್ನ ಬೆಳ್ಳಿ ಮಹೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ರಾಷ್ಟçಮಟ್ಡದ ಕಾರ್ಯಕ್ರಮದಲ್ಲಿ ಗಂಗಾವತಿಯ ಯುವ ನಾಯಕ, ಕಾಂಗ್ರೆಸ್ ಪಕ್ಷದ ರಾಜ್ಯ ಯುವ ಕಾರ್ಯದರ್ಶಿ ಮಹಮ್ಮದ್ ಆಸೀಫ್ ಹುಸೇನ್ ಅವರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿಯನ್ನು ಸಮಾಜ ಸೇವಾ ಕ್ಷೇತ್ರದ ವಿಭಾಗದಿಂದ ಆಯ್ಕೆ ಮಾಡಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಎಸ್ ಬಾಲಾಜಿ ತಿಳಿಸಿದ್ದಾರೆ.
ಮಾತೃಭೂಮಿ ಯುವಕ ಸಂಘವು ಸುಮಾರು ೩೦ ವರ್ಷಗಳಿಂದ ಸಾಂಸ್ಕöÈತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರ ಬೆಳ್ಳಿ ಹಬ್ಬದ ಅಂಗವಾಗಿ ವಿಶೇಷ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಘವು ೨೦೦೭-೦೮ ರಲ್ಲಿ ಭಾರತ ಸರ್ಕಾರದ ಅತ್ಯುತ್ತಮ ಸಾಂಘಿಕ ಪ್ರಶಸ್ತಿಯನ್ನು, ಕರ್ನಾಟಕ ಸರ್ಕಾರದ ರಾಜ್ಯ ಯುವ ಸಾಂಘಿಕ ಪ್ರಶಸ್ತಿಯನ್ನು ಪಡೆದಿದ್ದು, ಈ ಸಂಘದ ವತಿಯಿಂದ ೩೦ ವರ್ಷಗಳ ಕಾಲ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ, ಈ ಸಾಲಿನಲ್ಲಿ ಬೆಳ್ಳಿ ಹಬ್ಬವಾದ್ದರಿಂದ ೩೦ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮೂವತ್ತರ ಸಂಭ್ರಮವನ್ನು ೨೦ ಸಾಧಕರನ್ನು ೦೨ ಸಾಂಘಿಕ ಪ್ರಶಸ್ತಿ ಸೇರಿ ಒಟ್ಟು ೩೦ ಸಾಧಕರಿಗೆ ಮಾತೃಭೂಮಿ ಪ್ರಶಸ್ತಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಹರ್ಷ ಅಂತರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ೧೩.೦೯.೨೦೨೫, ಶನಿವಾರ ಬೆಳಗ್ಗೆ ೧೦ ಗಂಟೆಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಸಮಾಜದಲ್ಲಿ ಬಡವರ ಪರ, ಯುವಜನರ ಪರ ಹಾಗೂ ಶೋಷಿಥ ಪರವಾಗಿ ಮಾಡಿದ ಅಮೂಲ್ಯ ಸೇವೆಯನ್ನು ಗುರುತಿಸಿ ಮಾತೃಭೂಮಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಅನೇಕ ಗಣ್ಯರ, ಸ್ವಾಮೀಜಿಯವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

About Mallikarjun

Check Also

1001883611

ಗಿಣಿಗೇರಾ ಜಾನುವಾರು ಸಂತೆಯಲ್ಲಿ ವ್ಯಾಪಾವಿಲ್ಲದೆ ದನಕರುಗಳಿಗೆ ನೀರು ಮೇವಿಲ್ಲದೆ ಪರದಾಟ

Cattle are stranded without water or fodder at the Ginigera cattle fair due to lack …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.