Cattle are stranded without water or fodder at the Ginigera cattle fair due to lack of traffic

ಗಿಣಿಗೆರೆ ಗ್ರಾಮದಲ್ಲಿ ಪ್ರತಿ ಶುಕ್ರವಾರದಂದು ರೈತರಿಗೆ ಅನುಕೂಲವಾಗಲೆಂದು ಜಾನುವಾರಗಳ ಸಂತೆ ನಡೆಯುತ್ತದೆ. ನೂರಾರು ಕಿಲೋ ಮೀಟರ್ ಗಟ್ಟಲೆ ದೂರದಿಂದ ಪ್ರತಿ ಶುಕ್ರವಾರ ನಡೆದಂತಹ ಜಾನುವಾರು ಸಂತೆಯಲ್ಲಿ ಸಾವಿರಾರು ಧನ, ಹಸು, ಎಮ್ಮೆ ಎತ್ತುಗಳು ಶುಕ್ರವಾರ ಮಾರಾಟವಾಗುತ್ತವೆ.

ಮಾರಾಟವಾದಂತಹ ಜಾನುವಾರುಗಳನ್ನು ಎರಡು ಮೂರು ದಿವಸವಾದರೂ ಎಪಿಎಂಸಿ ಮಾರ್ಕೆಟ್ ನಲ್ಲಿ ಜಾನುವಾರಗಳನ್ನು ಕಟ್ಟಿದೆಲ್ಲಿಯ ಕಟ್ಟಿ ಹಾಕಿ ಆ ಜಾನುವಾರುಗಳಿಗೆ ಯಾವುದೇ ರೀತಿಯಾದಂತಹ ಮೇವು ಹಾಗೂ ನೀರು ಇಲ್ಲದೆ ಒಂದೇ ಕಡೆಯಲ್ಲಿ ಕಟ್ಟೆ ಹಾಕಿರುತ್ತಾರೆ. ದಿನ ನಿತ್ಯ ಮಳೆ ಸುರಿಯುತ್ತಿರುವುದರಿಂದ ಸೊಳ್ಳೆ ಹಾವಳಿಗೆ ಪ್ರಾಣಿಗಳು ಗೋಳಟ ಗ್ರಾಮಸ್ಥರನ್ನು ಆತಂಕಗೊಳಿಸಿದೆ. ಮಳಿ ಚಳಿ ಎನ್ನದೆ ಕಟ್ಟಿದಲ್ಲಿ ಕಟ್ಟಿ ಹಾಕಿರುತ್ತಾರೆ.ಹತ್ತಿರದಲ್ಲಿ ಗಿಣಿಗೇರ ಕೆರೆಯಿದ್ದರೂ ದನಗಳಿಗೆ ಕುಡಿಯಲು ನೀರಿಲ್ಲ ಇಂತ ಪರಿಸ್ಥಿಯಲ್ಲಿ ಜಾನುವಾರು ಸಂತೆಯನ್ನು ನಿರ್ವಹಣೆ ಮಾಡುಲಾಗುತ್ತಿದೆ. ಕನಿಷ್ಠ ಮೂಲಭೂತ ಸೌಕರ್ಯ ಒದಗಿಸದೆ ಜಾನುವಾರು ಸಂತೆಯನ್ನು ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಸಂತೆಯಾಗಿ ಮರುದಿನವೇ ಅಲ್ಲಿರುವ ಜಾನುವಾರುಗಳಿಗೆ ಮೇವು, ಕುಡಿಯು ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಜಾನುವಾರುಗಳ ಬಹಳ ದಿನ ಒಂದೇ ಸ್ಥಳದಲ್ಲಿ ಕಟ್ಟೀಹಾಕದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗಿಣಿಗೇರಿ ನಾಗರಿಕ ಹೋರಾಟ ಸಮಿತಿ ಅಗ್ರಹಿಸುತ್ತದೆ.
ಮಂಗಳೇಶ ರಾಥೋಡ್, ಸುರೇಶ್ ಕಲಾಲ್, ಶರಣು ಗಡ್ಡಿ ಗಿಣಿಗೇರಿ ನಾಗರಿಕ ಹೋರಾಟ ಸಮಿತಿಯ ಮುಖಂಡರು