MP Rajasekhar Hitnal driving the new police vehicle

ಕೊಪ್ಪಳ ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ): ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರ ಅನುದಾನದಲ್ಲಿ ಪೊಲೀಸ್ ಇಲಾಖೆಗೆ ನೀಡಿದ ವಾಹನಕ್ಕೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಆವರಣದಲ್ಲಿ ಸೋಮವಾರ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಅವರು ನೂತನ ಪೊಲೀಸ್ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಬಸ್‌ಗೆ ಚಾಲನೆ ನೀಡಿದ ಬಳಿಕ ಸಂಸದರು ಸ್ವತಃ ತಾವೇ ಬಸ್ ಚಲಾಯಿಸಿ, ಬಸ್ಸಿನ ಸೌಕರ್ಯದ ಕುರಿತು ಪರಿಸೀಲನೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರು ಮಾತನಾಡಿ, ಬಸಾಪೂರ ಗ್ರಾಮದ ಹತ್ತಿರವಿರುವ ಹೊಸ ಜಿಲ್ಲಾ ಪೊಲೀಸ್ ಕ್ವಾಟ್ರಸ್‌ದಿಂದ ಪೊಲೀಸ್ ನೌಕರರ ಮಕ್ಕಳು ಶಾಲೆಗಾಗಿ ಕೊಪ್ಪಳಕ್ಕೆ ಬರಬೇಕಿದ್ದು, ಅಲ್ಲಿ ವಾಹನದ ಸೌಲಭ್ಯದ ಕೊರತೆ ಇರುವ ಕಾರಣ ನಮ್ಮ ನೌಕರರು ಈ ಕ್ವಾಟ್ರಸ್‌ನಲ್ಲಿ ವಾಸಿಸಲು ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಂಸದರಿಗೆ ಪೊಲೀಸರು ಮನವಿ ಸಲ್ಲಿಸಿದ್ದು, ಸಂಸದರು ತಮ್ಮ ಎಂಪಿ ನಿಧಿಯಿಂದ 24 ಲಕ್ಷ ವೆಚ್ಚದಲ್ಲಿ ಸಿಸಿ ಕ್ಯಾಮರ, ಮೈಕ್ ಸಿಸ್ಟಮ್ ಒಳಗೊಂಡಂತೆ ಇತರೆ ಮೂಲ ಸೌಕರ್ಯಗಳ ಜೊತೆಗೆ ಪೊಲೀಸ್ ಇಲಾಖೆಗೆ ಒಂದು ಬಸ್ ಒದಗಿಸಿರುತ್ತಾರೆ. ಇದರಿಂದ ಪೊಲೀಸ್ ನೌಕರರ ಮಕ್ಕಳ ಶಿಕ್ಷಣಕ್ಕೆ ತುಂಬಾ ಅನುಕೂಲವಾಗಲಿದ್ದು, ಸಂಸದರಿಗೆ ಪೊಲೀಸ್ ಇಲಾಖೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ ಸೇರಿದಂತೆ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಂಬಂಧಿಗಳು ಉಪಸ್ಥಿತರಿದ್ದರು.