Breaking News

ಕೊಪ್ಪಳದಲ್ಲಿ  ದಿ,8 ಜರುಗುವ ಬಸವ ಸಂಸ್ಕ್ರತಿ ಅಭಿಯಾನದ ಆಮಂತ್ರಣ ಸಭೆ.

Invitation meeting for Basava Culture Campaign to be held in Koppal on the 8th.

20250901 203302 Collage433804940921787681 1024x1024

ಗಂಗಾವತಿ: ಇಂದು ನಗರದ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಲ್ಲಿ ದಿ,8/9/2025 ರಂದು ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಬಸವ ಸಂಸ್ಕ್ರತಿಯ ಅಭಿಯಾನಕ್ಕೆ ಗಂಗಾವತಿ ಸರ್ವ ಸಮಾಜದವರಿಗೆ ಆಮಂತ್ರಣ ನೀಡುವುದಕ್ಕಾಗಿ ಸಭೆಯನ್ನು ಕರೆಯಲಾಗಿತ್ತು .

ಜಾಹೀರಾತು

ಸಭೆಯ ಅಧ್ಯಕ್ಷತೆಯನ್ನು ಲಿಂಗಾಯತ ಸಮಾಜದ ಮುಖಂಡರಾದ ಹೊಸಳ್ಳಿ ಶಂಕ್ರಗೌಡರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳದ ಬಸವರಾಜಪ್ಪ ಬೊಳ್ಳೊಳ್ಳಿ ಮತ್ತು ಬಸವರಾಜಪ್ಪ ಇಂಜಿನೀಯರ್ ಅವರು ವಹಿಸಿಕೊಂಡಿದ್ದರು . ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಬಸವರಾಜಪ್ಪನವರು ಶರಣ ವಿಚಾರಗಳನ್ನು ವಿಸ್ತ್ರೃತವಾಗಿ ಜನರಿಗೆ ತಿಳಿಸಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಬಸವರಾಜಪ್ಪ ಬೊಳ್ಳೊಳ್ಳಿಯವರು ಮತನಾಡುತ್ತಾ ಬಸವ ಸಂಸ್ಕ್ರತಿ ಅಭಿಯಾನದ ರೂಪರೇಷುಗಳ ಬಗ್ಗೆ ತಿಳಿಸಿದರು.

20250901 203212 Collage3795251297448202202 1024x1024

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೊಸಳ್ಳಿ ಶಂಕ್ರಗೌಡರು ಆ ಕಾರ್ಯಕ್ರಮಕ್ಕೆ ಗಂಗಾವತಿ ತಾಲೂಕಿನ ಎಲ್ಲಾ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕತೆಯನ್ನು ಮಾತಾಡಿದ ಡಾ.ರಾಜಶೇಖರ ನಾರನಾಳ ಅವರು ಸಂಸ್ಕ್ರತಿ ಅಂದರೆ ಒಂದು ಸಮುದಾಯ ನಿರ್ದಿಷ್ಟವಾಗಿ ಆಚರಿಸಬೇಕಾದಂತ ಆಚಾರ ಮತ್ತು ವಿಚಾರಗಳಿಗೆ ಸಂಸ್ಕ್ರತಿ ಎನ್ನುವರು . ಬಸವ ಸಂಸ್ಕ್ರತಿಯಂದರೆ ಅದು ವಿಶ್ವ ಪ್ರಜ್ಞೆಯ ಸಂಸ್ಕ್ರತಿ , ಇವನಾರವ ಇವನಾರವ ಎಂದೆನಿಸದೆ ಇವ ನಮ್ಮವ ಇವ ನಮ್ಮವ ಎನ್ನುವ ವಿಶ್ವಮಾನವ ಸಂಸ್ಕೃತಿ . ಇಂತಹ ವಿಶ್ವ ಮಾನವ ಪ್ರಜ್ಞೆಯ ತತ್ವ ಸಿದ್ದಾಂತಗಳನ್ನು ಇಂದು ಮನೆ ಮನೆಗೆ , ಮನ ಮನಕ್ಕೆ ಮುಟ್ಟಿಸುವ ಸದುದ್ದೇಶದಿಂದ ನಡೆಯುವ ಕಾರ್ಯಕ್ರಮವೆ ಬಸವ ಸಂಸ್ಕ್ರತಿಯ ಅಭಿಯಾನ. ಈ ಕಾರ್ಯಕ್ರಮದ ಮೂಲ ಆಸೆಯವೆ ವಿಶ್ವ ಮಾನವ ಪ್ರಜ್ಞೆ ಹಾಗಾಗಿ ಈ ಕಾರ್ಯಕ್ರಮದಲ್ಲಿ ಬಸವಣ್ಣನನ್ನು ಅಪ್ಪಿ ಒಪ್ಪಿಕೊಳ್ಳುವ ಮನಸ್ಸುಗಳೆಲ್ಲಾ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಹೇಳಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಕೆ . ಪಂಪಣ್ಣ ಮಾಡಿದರು. ಸ್ವಾಗತವನ್ನು ಬಸವಕೇಂದ್ರ ಅಧ್ಯಕ್ಷರಾದ ಕೆ . ಬಸವರಾಜ ನೆರವೇರಿಸಿದರು . ಕಾರ್ಯಕ್ರಮದ ಶರಣು ಸಮರ್ಪಣೆಯನ್ನು ಬಸವ ದಳದ ಅಧ್ಯಕ್ಷರಾದ ದಿಲೀಪ್ ಅವರು ನಡೆಸಿಕೊಟ್ಟರು. ಶರಣ ಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಶ್ರೀಶೈಲ ಪಟ್ಟಣಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಹೊಸಕೇರಾ, ತಿಪ್ಪಣ್ಣ ಗುಗ್ರಿ, ಶರಬಣ್ಣ ಮಾಸ್ಟರ್ ಶರಣಪ್ಪ ಹೀರೆಜಂತಕಲ್ , ಬಸವಾನೀಲಾಂಬಿಕ ಸಂಸ್ಥೆಯ ರೇಣುಕಮ್ಮಾ ಮತ್ತು ಇನ್ನಿತರ ಬಸವಪರ ಸಂಘಟನೆಗಳು ಮತ್ತು ಗಂಗಾವತಿಯ ಎಲ್ಲಾ ಬಸವಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದರು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.