Hudali Puja to build a cattle hospital at a cost of forty-five lakh rupees.

ವರದಿ: ಬಂಗಾರಪ್ಪ .ಸಿ .
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಹಳೆಯೂರು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ 45 ಲಕ್ಷ ರೂ ವೆಚ್ಚದಲ್ಲಿ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಂಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಹನೂರು ತಾಲ್ಲೂಕಿನ
ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿ ಅತಿ ಹೆಚ್ಚಾಗಿ ರೈತರು ಹೈನುಗಾರಿಕೆಯಲ್ಲಿ ಅವಲಂಬಿತವಾಗಿರುವ ಈ ಭಾಗದಲ್ಲಿ ದನ ಕರುಗಳು ಕುರಿ ಮೇಕೆಗಳನ್ನು ಸಾಕುಪ್ರಾಣಿಗಳು ಹೆಚ್ಚಾಗಿ ಸಾಕಣಿಕೆ ಮಾಡುತ್ತಿದ್ದಾರೆ.
ಒಂದೊಂದು
ವಿಭಾಗಕ್ಕೆ ಪ್ರತ್ಯೇಕವಗಾಗಿ ಒಂದು ಪಶು ವೈದ್ಯಕೀಯ ಆಸ್ಪತ್ರೆಯ ಅವಶ್ಯಕತೆ ತುಂಬಾನೆ ಇತ್ತು. ಇದೀಗ ಪಶುವೈದ್ಯಕೀಯ ಕಟ್ಟಡ ನಿರ್ಮಾಣಕ್ಕೆ ಪೂಜೆಯನ್ನು ನೆರವೇರಿಸಲಾಗಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಅಧಿಕಾರಿಗಳಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ,ಸಾಲೂರು ಬೃಹ್ನಮಠದ ಪಟ್ಟದ ಮಠಾಧೀಶರಾದ ಡಾಕ್ಟರ್ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಪಶು ವೈಧ್ಯಾಧಿಕಾರಿ ಸಿದ್ದರಾಜು, ಲೋಕೋಪಯೋಗಿ ಇಲಾಖೆಯ ಎಇಇ ಚಿನ್ನಣ್ಣ, ಸುರೇಂದ್ರ, ಪ್ರಾಧಿಕಾರ ಕಾರ್ಯದರ್ಶಿ ರಘು, ಉಪಕಾರ್ಯದರ್ಶಿ ಚಂದ್ರಶೇಖರ್, ಮುಖಂಡರುಗಳಾದ ನಾಗಪ್ಪ,ಎಸ್ ಆರ್ ಮಹದೇವ್,ಸೇರಿದಂತೆ ಇನ್ನಿತರರು ಹಾಜರಿದ್ದರು.