Feedback
Check-up camps that provide support to the poor: Dr. Doddaya Aravatagimath.

ಕನಕಗಿರಿ:ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿ ಬಿಪಿ, ಸಕ್ಕರೆ ಕಾಯಿಲೆ, ಹೃದ್ರೋಗ, ಕಿಡ್ನಿಯಂತಹ ಕಾಯಿಲೆಗಳು ಮನುಷ್ಯನ ದೇಹಕ್ಕೆ ಅಂಟಿಕೊಂಡ ಸರ್ವ ಸಾಮಾನ್ಯ ಕಾಯಿಲೆಗಳಾಗಿದ್ದು. ಇಂತಹ ಕಾಯಿಲೆಗಳು ಶ್ರೀಮಂತ ಕಾಯಿಲೆಗಳಾಗಿದ್ದು, ಬಡ ಜನರು ಆರ್ಥಿಕವಾಗಿ ಭರಿಸಲು ಸಾಧ್ಯವಾಗುವುದಿಲ್ಲ.ಹಾಗಾಗಿ ಇಲ್ಲಿನ ಯುವಕರ ಬಳಗ ಗಣೇಶ್ ಚತುರ್ಥಿ ಅಂಗವಾಗಿ ಸಮಾಜಮುಖಿ ಕಾರ್ಯವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದುದಾಗಿದೆ ಎಂದು ಹಿರಿಯ ವೈದ್ಯ ಡಾ.ದೊಡ್ಡಯ್ಯ ಅರವಟಗಿಮಠ ತಿಳಿಸಿದರು.
ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಇಲ್ಲಿನ ರಾಜಬೀದಿಯಲ್ಲಿ ಗಣೇಶ್ ಚತುರ್ಥಿ ನಿಮಿತ್ತವಾಗಿ ಎಂ.ಜಿ ರೋಡ್ ಸಾಮ್ರಾಟ್ ಯುವಕರ ಬಳಗ, ಕೆ.ಎಸ್. ಆಸ್ಪತ್ರೆ ಕೊಪ್ಪಳ ಹಾಗೂ ಎಂ. ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಕನಕಗಿರಿ,ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹೃದಯ ಸಂಬಂಧಿತ ಖಾಯಿಲೆಯ ಉಚಿತ ಆರೋಗ್ಯ ಶಿಬಿರ ಹಾಗೂ ಕಣ್ಣಿನ ದೃಷ್ಟಿ ಕೇಂದ್ರ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೇ ನೀಡಿ ಸೋಮವಾರ ಮಾತನಾಡಿದರು.
ಮನುಷ್ಯನ ದೇಹಕ್ಕೆ ಕಾಯಿಲೆಗಳು ಸೇರಿದಾಗ ಕೆಲವು ಹಣವುಳ್ಳವರು ಕಾಯಿಲೆಗಳಿಗೆ ಹಣ ವ್ಯಯಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆದರೆ ಇಂತಹ ಉಚಿತ ತಪಾಸಣಾ ಶಿಬಿರಗಳು ನಿಮ್ಮ ಮನೆ ಬಾಗಿಲಿಗೆ ಬಂದಿದ್ದು ಸದುಪಯೋಗ ಪಡೆದುಕೊಂಡು ಆರೋಗ್ಯವನ್ನು ಸರಿಪಡಿಸಿಕೊಳ್ಳಬೇಕು.ಇತ್ತೀಚಿನ ದಿನಗಳಲ್ಲಿ ಇಂತಹ ತಪಾಸಣಾ ಶಿಬಿರಗಳು ಬಡವರಿಗೆ ಆಸರೆಯಾಗುತ್ತಿವೆ. ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕೊಪ್ಪಳ ಕೆಎಸ್ ಆಸ್ಪತ್ರೆ ಸಾಮಾನ್ಯ ರೋಗ ತಜ್ಞಾ ಮಣಿಕಂಠ, ಎಲುಬು ಮತ್ತು ಕೀಲು ತಜ್ಞಾ ಜೈ ಹರಿ, ಸಿಬ್ಬಂದಿಗಳಾದ ವಿಜಯಕುಮಾರ ಭೂಷ್ನರಮಠ, ವೀಣಾ, ಸ್ವಾತಿ, ರಂಜಿತಾ, ರೋಷನ್ ಬೇಗಂ, ಸಂಗೀತಾ, ಎಂ.ಎಂ ಜೋಷಿ ದೃಷ್ಟಿ ಕೇಂದ್ರದ ಸಿಬ್ಬಂದಿಗಳಾದ ವಿಜಯಕುಮಾರ.ಡಿ, ಕಾವೇರಿ ಪೂಜಾರ, ಲೀಲಾವತಿ , ಹುಲಿಗೇಮ್ಮ, ವಂಸತಾ, ಪವಿತ್ರ , ಎಂ.ಜಿ ರೋಡ್ ಯುವಕ ಬಳಗದ ಸದಸ್ಯರಾದ ಸಂತೋಷ ಪಲ್ಲವಿ, ಹೊನ್ನೂರ ಹುಸೇನ ಬೇಲ್ದಾರ್, ಆನಂದ, ಖಾಸಿಂ ಬೇಗ್, ಶರತ್ ಬ್ಯಾಳಿ, ರಾಜ, ರವಿ ಮಡಿವಾಳ, ಬಸವರಾಜ ಹಂದ್ರಾಳ, ಶ್ರೀನಿವಾಸ ಪೂಜಾರ ಸೇರಿದಂತೆ ಇತರರು ಇದ್ದರು