Mr. Dr. Balagangadharnath Mahaswamiji Rashtriya Seva Ratna Awardee

ಬೆಂಗಳೂರು: ನಯನ ಸಭಾಂಗಣದಲ್ಲಿಂದು ವಿವಿಧ ಕ್ಷೇತ್ರಲ್ಲಿ ತಮ್ಮದೇ ಆದ ಅಮೂಲ್ಯ ಸಾಧನೆ ಮಾಡಿದ 80 ಗಣ್ಯರಿಗೆ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ರಾಷ್ಟ್ರೀಯ ಸೇವ ರತ್ನ ಪ್ರಶಸ್ತಿಯನ್ನು ನಿವೃತ್ತ ನ್ಯಾಯಮೂರ್ತಿ ಡಾ. ಸಂತೋಷ್ ಹೆಗಡೆ ಪ್ರಧಾನ ಮಾಡಿದರು.
ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆ ಮತ್ತು ಚೆನ್ನಮ್ಮ ಮಂಚೇಗೌಡ ಜನ ಸೇವಾ ಸಂಸ್ಥೆ ಎರಡು ಸಂಸ್ಥೆಗಳ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಗಣೇಶ್ ಗೌಡ್ರು ಅವರ ನೇತೃತ್ವದಲ್ಲಿ ನಡೆದ ಸಮಾರಂಭಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಂಸೆ ಪತ್ರ ನೀಡಿ ಗೌರವಿಸಲಾಯಿತು. ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಸೀರೆ ವಿತರಣೆ ಮಾಡಲಾಯಿತು.
ಸುವರ್ಣ ಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ 300 ಕ್ಕೂ ಹೆಚ್ಚು ರಾಜ್ಯ ಮಟ್ಟದ ಪದಾಧಿಕಾರಿಗಳಿಗೆ ಆದೇಶ ಪತ್ರ ಹಾಗೂ ಐಡಿ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು.
ಈ ಸಮಾರಂಭದ ಅಥಿತಿಗಳಾಗಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್, ಅಪಾರ ನಿಬಂಧಕರು ಸಹಕಾರ ಸಂಘ ಲಕ್ಷ್ಮೀ ಪತಿ, ಮಾಜಿ ಶಾಸಕ ನೆ.ಲ ನರೇಂದ್ರಬಾಬು, ಸಮಾಜ ಸೇವಕರು ಚಿಕ್ಕಬಳ್ಳಿ ಕೃಷ್ಣ, ರಾಜ್ಯ ಕಾರ್ಯಾಧ್ಯಕ್ಷರು ಮಕ್ಷುದ್ ಪೊಲೀಸ್ ಅಧಿಕಾರಿ ಮೆಹಬೂಬ್ ಪಾಷ, ಇಎಸ್ಐ ಆಸ್ವತ್ರೆಯ ಚರ್ಮರೋಗ ತಜ್ಞರಾದ ಡಾ. ಗಿರೀಶ್. ಡಾ. ಸತೀಶ್, ಖ್ಯಾತ ಗಾಯಕರಾದ ಶಶಿಧರ್ ಕೋಟೆ. ಡಾ. ಮಲಕ್ಕಪ್ಪ, ಎಸ್.ಪಿ ಆಚಾರ್ಯ, ಅಶೋಕ್ ಕಾಳೆ, ಮಾಯಣ್ಣ ಮತ್ತಿತ್ತರ ಗಣ್ಯರು ಭಾಗವಹಿಸಿದ್ದರು.