Gangavathi: DySP Patil awarded Rashtrapati's Distinguished Service Medal

ಗಂಗಾವತಿ: ಕಳೆದ ಎರಡು ವರ್ಷಗಳಿಂದ ಅತಿ ಸೂಕ್ಷ್ಮ ಪ್ರದೇಶ ಗಂಗಾವತಿ ಸೇರಿದಂತೆ ತಮ್ಮ ವಲಯವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ದಕ್ಷ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಆರ್. ಪಾಟೀಲ್ ಇವರಿಗೆ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಇವರು ಬೆಂಗಳೂರಿನ ರಾಜಭವನದಲ್ಲಿ ರಾಷ್ಟçಪತಿಗಳ ವಿಶಿಷ್ಟ ಸೇವಾ ಪದಕ ನೀಡಿ ಗೌರಿಸಿದ್ದಾರೆ. ಮುಖ್ಯ ಮಂತ್ರಿ
ಸಿದ್ದರಾಮಯ್ಯ, ಗೃಹ ಸಚಿವರಾದ ಜಿ.ಪರಮೇಶ್ವರ್ ಹಾಗು ಪೊಲೀಸ್ ಮಹಾ ನಿರ್ದೇಶಕ ಎಂ.ಎ ಸಲೀಮ್ ಇತರರ ಸಮ್ಮುಖದಲ್ಲಿ ಪದಕ ಪ್ರದಾನ ಮಾಡಲಾಗಿದೆ.
ಎಲ್ಲ ಧರ್ಮಿಯರೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ಪಿಯವರು, ಬಡವ ಬಲ್ಲಿದ ಎನ್ನದೆ ಎಲ್ಲರ ದೂರುಗಳಿಗೆ ಸ್ಪಂದಿಸುತ್ತಾ ಠಾಣೆಗೆ ಬಂದವರಿಗೆ ನ್ಯಾಯ ಒದಗಿಸುವ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಡಿವೈಎಸ್ಪಿಯವರ ಈ ಸಾಧನೆಗೆ ಪೊಲೀಸ್ ಸಿಬ್ಬಂದಿ, ಜನಪ್ರತಿನಿಧಿಗಳು, ಮುಖಂಡರು, ನಾಗರೀಕರು ಹರ್ಷ ವ್ಯಕ್ತಪಡಿದ್ದಾರೆ.