Shankar Siddapur demands separate 1% reservation for nomadic communities

ಗಂಗಾವತಿ : ಸದಾಶಿವ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ, ಆದರೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ನಿರ್ದಿಷ್ಟ ಮೀಸಲಾತಿ ನೀಡದಿರುವುದು ಭಾರೀ ಅನ್ಯಾಯವಾಗಿದೆ, ಮತ್ತು ಈ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ 49 ಉಪಜಾತಿಗಳ ಪರಿಶಿಷ್ಟ ಜಾತಿಯಲ್ಲಿ ಇದು ಕೂಡ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದೆ ಹಾಗಾಗಿ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಲ್ಲಿ ಒತ್ತಾಯಿಸುವುದೇನೆಂದರೆ ಈ ಅಲೆಮಾರಿ ಸಮುದಾಯಗಳಿಗೆ ಕನಿಷ್ಠ 1% ಮೀಸಲಾತಿ ನೀಡದಿದ್ದರೆ ಸರ್ಕಾರದ ಮುಂದಿನ ದಿನಮಾನಗಳಲ್ಲಿ ಸರ್ಕಾರಕ್ಕೆ ದೊಡ್ಡ ನಷ್ಟ ಉಂಟಾಗುವ ಎರಡು ಮಾತೇ ಇಲ್ಲ. ಮತ್ತು ಅಲೆಮಾರಿ ಸಮುದಾಯವು ನಾಡಿಗೆ ಶತಮಾನಗಳಿಂದ ಕಲೆ, ಸಂಸ್ಕೃತಿ, ಪುರಾಣಗಳ ಐತಿಹ್ಯವನ್ನು ಸಾರಿದರು, ಇವರ ಬದುಕು ಮಾತ್ರ ಬತ್ತಿ ಹೋಗಿದೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು 5% ಒಳ ಮೀಸಲಾತಿಯನ್ನು ತಿದ್ದುಪಡಿ ಮಾಡಿ ಕನಿಷ್ಠ ಈ ಸಮುದಾಯಕ್ಕೆ 1% ಮೀಸಲಾತಿ ನೀಡಬೇಕೆಂದು ಸರ್ಕಾರಕ್ಕೆ ಈ ಪತ್ರಿಕ ಪ್ರಕಟಣೆ ಮೂಲಕ ಒತ್ತಾಯಿಸುತ್ತೇನೆ ಎಂದರು ಅವರು ಗಂಗಾವತಿಯ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಘಟನೆ ಕಾರ್ಯದರ್ಶಿ ಶಂಕರ್ ಸಿದ್ದಾಪುರ ವಕೀಲರು ಪತ್ರಿಕೆ ಹೇಳಿಕೆ ನೀಡಿ ಮಾತನಾಡಿ
ನಮ್ಮ ದೇಶಕ್ಕೆ ಅಲೆಮಾರಿ ಸಮುದಾಯಗಳು ನೀಡಿದ ಕೊಡುಗೆ ಅನನ್ಯ ಅದನ್ನು ಯಾರು ಕೂಡ ಅಲ್ಲಗಳಿಯುವಂತಿಲ್ಲ ಈ ನಾಡಿಗೆ ದೇಶಕ್ಕೆ ಸಂಸ್ಕೃತಿಯನ್ನು ವರ್ಗಾವಣೆ ಮಾಡುವಲ್ಲಿ ಈ ಸಮುದಾಯಗಳು ಅಲೆಮಾರಿಗಳಾಗಿ ಮಾರ್ಪಟ್ಟಿವೆ. ಇದನ್ನ ಯಾವ ಸಮುದಾಯ ಮತ್ತು ಸರ್ಕಾರಗಳು ಮರೆಯುವಂತಿಲ್ಲ. ನಾಡಿಗಾಗಿ ಮತ್ತು ದೇಶ ಸಂಸ್ಕೃತಿ ರಾಗವು ಅಲೆಮಾರಿ ಸಮುದಾಯಗಳು ತಮ್ಮ ಬದುಕಿನ ನೆಲೆಯನ್ನು ಕಳೆದುಕೊಂಡಿವೆ. ದಯವಿಟ್ಟು ಸರ್ಕಾರಗಳು ಈ ಸಮುದಾಯಗಳು ನಾಡಿಗೆ ನೀಡಿದ ಸೇವೆಯನ್ನು, ತ್ಯಾಗವನ್ನು ಗೌರವಿಸಲಿ
ಸರ್ಕಾರವು ಹಲವು ವರ್ಗಗಳಿಗೆ ಮೀಸಲಾತಿ ನೀಡಿರುವಾಗ ಶತಮಾನಗಳಿಂದ ಹಿಂದುಳಿದಿರುವ ಸಮುದಾಯಕ್ಕೆ ನಿರ್ದಿಷ್ಟ ಮೀಸಲಾತಿ ನೀಡದೇ ಇರುವುದು ಈ ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ. ಆದ್ದರಿಂದ ಸದಾಶಿವ ಆಯೋಗದಲ್ಲಿ ಬಲಗೈ ಮತ್ತು ಎಡಗೈ ತಲ 6% ಆರು ಪರ್ಸೆಂಟ್ ನೀಡಿರುವುದು ಸ್ವಾಗತ ಅದೇ ರೀತಿಯಾಗಿ 5% ನಲ್ಲಿ ಅಲೆಮಾರಿ ಸಮುದಾಯಕ್ಕೆ ಪ್ರತ್ಯೇಕವಾಗಿ ಒಂದು ಪರ್ಸೆಂಟ್ ನೀಡಬೇಕೆಂದು ಸರ್ಕಾರಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ವತಿಯಿಂದ ರಾಜ್ಯ ಕಾರ್ಯದರ್ಶಿ ಅವರು ಸರ್ಕಾರಕ್ಕೆ ಪತ್ರಿಕೆ ಪ್ರಕಟ ಮೂಲಕ ಒತ್ತಾಯಿಸುತ್ತೇನೆ ಮತ್ತು ಅಲೆಮಾರಿಗಳು ಮಾಡುತ್ತಿರುವ ಹೋರಾಟಕ್ಕೆ ನಮ್ಮ ಪಾರ್ಟಿ ವತಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು
