Breaking News

ಕೃಷಿಯಲ್ಲಿ ಹಲವಾರು ತಾಂತ್ರಿಕತೆಗಳು ಬರುತ್ತಿರುವುದರಿಂದ ಅವುಗಳ ಜ್ಞಾನ ಅವಶ್ಯಕ- ಕುಲಪತಿ ಡಾ.ಪಿ.ಎಲ್ ಪಾಟೀ

Knowledge of various technologies is essential as they are coming up in agriculture – Vice Chancellor Dr. P.L. Pati

ಜಾಹೀರಾತು
img 8550


ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): ಕೃಷಿ ಪರಿಕರ ಮಾರಾಟಗಳಲ್ಲಿ ದಿನನಿತ್ಯ ಹಲವಾರು ತಾಂತ್ರಿಕತೆಗಳು ಬರುತ್ತಿರುವುದರಿಂದ ಅವುಗಳನ್ನು ಹೇಗೆ ಬಳಸಬೇಕು ಎಂಬ ಜ್ಞಾನವನ್ನು ತಿಳಿದುಕೊಂಡು ಅದನ್ನ ರೈತರಿಗೆ ತಲುಪಿಸಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
 ಅವರು ಶುಕ್ರವಾರ ಕೊಪ್ಪಳ ಜಿಲ್ಲಾ ಪಂಚಾಯತ ಜೆ. ಎಚ್. ಪಟೇಲ್ ಸಭಾಂಗಣದಲ್ಲಿ ಮ್ಯಾನೇಜ ಹೈದರಾಬಾದ. ಸಮೇತಿ (ಉತ್ತರ). ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರ. ಕೃಷಿ ಇಲಾಖೆ ಕೊಪ್ಪಳ. ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸನ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.

img 8546


 ಕೃಷಿ ಪರಿಕರಗಳ ಮಾರಾಟಗಾರರು ತಮಗೆ ನೀಡುವ 48 ವಾರಗಳ ತರಬೇತಿಯಲ್ಲಿ ಎಲ್ಲರೂ ಶಿಸ್ತು. ಸಂಯಮ ಜೊತೆಗೆ ಉತ್ಸಾಹದಿಂದ ಕಲಿಯಬೇಕು. ಇಂದು ವೈಜ್ಞಾನಿಕ ಕೃಷಿಯ ಕಾಲ ಆಗಿರುವುದರಿಂದ ಕೃಷಿ ಪರಿಕರಗಳ ಬಗ್ಗೆ ಮಾರಾಟ ಮಾಡಿದರೆ ಸಾಲದು ಅವುಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕಿದೆ. ಎಲ್ಲಾ ಪ್ರದೇಶದಲ್ಲಿ ಹವಾಮಾನ ಒಂದೇ ತರಹ ಇರುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಜೀವಿಗಳ ಬಗ್ಗೆ ಜ್ಞಾನ ಹೊಂದಿರುವುದು ಬಹಳ ಮುಖ್ಯ ಹಾಗಾಗಿ ನಿಮ್ಮ ಮಕ್ಕಳಿಗೆ ಜೀವ ವಿಜ್ಞಾನದ ಬಗ್ಗೆ ತಿಳುವಳಿಕೆ ನೀಡಿ ಎಂದರು.
 ಕೃಷಿಯನ್ನು ವೈಜಾನಿಕವಾಗಿ ಮಾಡಿದಾಗ ಮಾತ್ರ ಉದ್ದಿಮೆಯನ್ನಾಗಿ ಮಾಡಬಹುದು. ಸೋಲಾರ ಅಳವಡಿಸಿಕೊಳ್ಳಲು ರೈತರಿಗೆ ತಿಳಿಸಬೇಕು. ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು. ಕನಿಷ್ಠ 2 ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆಯನ್ನು ರೈತರು ಮಾಡಿಸಬೇಕು. ಹತ್ತಿ. ತೊಗರಿ. ಸೂರ್ಯಕಾಂತಿ ಕಟಗಿಗಳನ್ನು ಸುಡದೆ ಅವುಗಳನ್ನು ಕೊಳೆಸಿ ಗೊಬ್ಬರ ಮಾಡವುದರ ಜೊತೆಗೆ ಸಮಗ್ರ ಕೃಷಿಗೆ ರೈತರು ಒತ್ತು ನೀಡಬೇಕೆಂದು ಹೇಳಿದರು.

img 8553


 ಕೊಪ್ಪಳ ಜಿಲ್ಲೆಯಲ್ಲಿ ಹಲವಾರು ಪ್ರಗತಿಪರ ರೈತರಿದ್ದು ಇಲ್ಲಿ ಹಲವಾರು ರೀತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ನಿಸರ್ಗದ ಸಂಪನ್ಮೂಲಗಳಾದ ಮಣ್ಣು ಮತ್ತು ನೀರಿನ ರಕ್ಷಣೆ ಮಾಡಬೇಕು. 48 ದಿನಗಳ ಕಡಿಮೆ ಅವಧಿಯ ತರಬೇತಿಯಲ್ಲಿ ಕೃಷಿ. ತೋಟಗಾರಿಕೆ. ಹೈನುಗಾರಿಕೆ ಬಗ್ಗೆ ಹೆಚ್ಚಿನ ಜ್ಞಾನ ನೀಡುತ್ತಿರುವುದರಿಂದ ಎಲ್ಲದರ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕೆಂದರು.
 ಸಮೇತಿ -ಉತ್ತರ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪ್ರಾಧ್ಯಾಪಕರು ಹಾಗೂ ರಾಜ್ಯ ನೋಡಲ್ ಅಧಿಕಾರಿಗಳಾದ ಡಾ. ಎಸ್. ಎನ್. ಜಾಧವ್ ಮಾತನಾಡಿ 48 ವಾರಗಳ ತರಬೇತಿಯಲ್ಲಿ 8 ನೇ ವಾರ 15 ನೇ ವಾರ ಹೀಗೆ ಮೂರು ಪರೀಕ್ಷೆಗಳನ್ನು ನಡೆಸಿ 48 ವಾರಗಳ ನಂತರ ಅಂತಿಮ ಪರೀಕ್ಷೆ ನಡೆಸಲಾಗುತ್ತದೆ. ತರಬೇತಿ ಅವಧಿಯಲ್ಲಿ ಚೆನ್ನಾಗಿ ಕಲಿಯಬೇಕು ಕಲಿಕೆ ಎಂಬುದು ನಿರಂತರ. ತರಬೇತಿ ಮುಗಿಸಿದವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಅವುಗಳಿಂದ ತಾವು ಕೃಷಿ ಪರಿಕರ ಅಂಗಡಿಗಳನ್ನು ತೆರೆಯಬಹುದು. ಇದರಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಪರಿಕರಗಳ ಅಂಗಡಿಗಳು ಹೆಚ್ಚಾದಂತೆ ರೈತರಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
 ಇದೇ ಸಂದರ್ಭದಲ್ಲಿ ಸೆಪ್ಟೆಂಬರ್ 13 ರಿಂದ 16 ರವರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕೃಷಿ ಮೇಳ-2025 ರ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
 ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೆಶಕರಾದ ಡಾ. ಎಮ್. ವಿ. ಮಂಜುನಾಥ. ಕೊಪ್ಪಳ ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ರುದ್ರೇಶಪ್ಪ ಟಿ.ಎಸ್. ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಉಪಾಧ್ಯಕ್ಷರಾದ ವೀರಣ್ಣ ಕಮತರ ಸೇರಿದಂತೆ ಇತರೆ ಕೃಷಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಡಿಪ್ಲೊಮಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.