Karate is essential for students, says headmaster Prakash Tagadinamane

ಕೊಪ್ಪಳ: ನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯ ಶಾಲೆಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ಪ್ರಾರಂಭೋತ್ಸವ ಉದ್ದೇಶಿಸಿ ಮಾತನಾಡಿದರು ವಿದ್ಯಾರ್ಥಿನಿಯರು ತಮ್ಮನ್ನು ತಾವು ಬಲಿಷ್ಠಗೊಳಿಸಿ ಗೊಳ್ಳಲು ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸ್ವಯಂ ಪ್ರೇರಿತ ಕರಾಟೆ ಅತ್ಯವಶ್ಯಕ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ಅಡಿಯಲ್ಲಿ ರಾಜ್ಯ ಸರ್ಕಾರವು ಕರಾಟೆ ಆಯೋಜನ ಮಾಡಿರುವುದು ಅತ್ಯಂತ ಸಂತೋಷಕರ ವಿಷಯ ಇದನ್ನು ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಎ ಅಧ್ಯಕ್ಷರಾದ ಈಶಪ್ಪ ಕಾತರಕಿ ಮತ್ತು ಶಿಕ್ಷಣ ಪ್ರೇಮಿಯಾದ ವಿನಾಯಕ್ ಜೋಶಿ ಹಾಗೂ ಕರಾಟೆ ಶಿಕ್ಷಕರಾದ ರಾಘವೇಂದ್ರ ಅರಕೇರಿ ಹಾಗೂ ದೈಹಿಕ ಶಿಕ್ಷಕರು ಇನ್ನಿತರರು ಉಪಸ್ಥಿತರಿದ್ದರು.