Breaking News

ಅಲೆಮಾರಿ ಸಮುದಾಯಕ್ಕೆ ಶೇ. ೧% ರಷ್ಟು ಮೀಸಲಾತಿಗೆ ಒತ್ತಾಯ: ಭಾರಧ್ವಾಜ್

Demand for 1% reservation for nomadic community: Bharadwaj

ಜಾಹೀರಾತು
screenshot 2025 08 25 20 22 02 13 e307a3f9df9f380ebaf106e1dc980bb6.jpg

ಗಂಗಾವತಿ: ಸದಾಶಿವ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ, ಆದರೆ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ನಿರ್ದಿಷ್ಟ ಮೀಸಲಾತಿ ನೀಡದಿರುವುದು ಭಾರೀ ಅನ್ಯಾಯವಾಗಿದೆ. ಸರ್ಕಾರ ಅಲೆಮಾರಿ ಸಮುದಾಯಗಳಿಗೆ ಶೇ ೧ ರಷ್ಟು ಮೀಸಲಾತಿ ನೀಡಬೇಕೆಂದು ಕ್ರಾಂತಿಚಕ್ರ ಬಳಗದ ರಾಜ್ಯಾದ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು “ಅಲೆಮಾರಿ ಸಮುದಾಯಗಳು ನಾಡಿಗೆ ಶತಮಾನಗಳಿಂದ ಕಲೆ, ಸಂಸ್ಕೃತಿ, ಪುರಾಣಗಳ ಐತಿಹ್ಯವನ್ನು ಸಾರಿದರೂ, ಅವರ ಬದುಕು ಮಾತ್ರ ಬತ್ತಿ ಹೋಗಿದೆ. ಸರ್ಕಾರ ತಕ್ಷಣವೇ ತಿದ್ದುಪಡಿ ಮಾಡಿ ಆ ಸಮುದಾಯಕ್ಕೆ ಶೇ. ೧ ರಷ್ಟು ಮೀಸಲಾತಿ ಘೋಷಿಸಬೇಕು. ಈ ನಾಡಿಗೆ ಮತ್ತು ದೇಶಕ್ಕೆ ಅಲೆಮಾರಿ ಸಮುದಾಯಗಳು ನೀಡಿದ ಕೊಡುಗೆ ಅನನ್ಯ, ಅದನ್ನ ಯಾರು ಅಲ್ಲಗಳಿಯುವಂತಿಲ್ಲ. ನಾಡಿಗಾಗಿ ಮತ್ತು ದೇಶ ಸುಸಂಸ್ಕೃತವಾಗಿರಲು ಅಲೆಮಾರಿ ಸಮುದಾಯಗಳು ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಂಡಿವೆ. ಸರ್ಕಾರಗಳು ಆ ಸಮುದಾಯಗಳು ನಾಡಿಗೆ ನೀಡಿದ ಸೇವೆಯನ್ನು, ಅವರ ತ್ಯಾಗವನ್ನು ಗೌರವಿಸಲಿ. ಮೂಲ ದ್ರಾವಿಡರಾದ ಈ ಸಮುದಾಯದ ಬೆಂಬಲಕ್ಕೆ ದ್ರಾವಿಡರೆಲ್ಲರೂ ಬೆಂಬಲ ನೀಡಬೇಕು. ಸರ್ಕಾರ ಆ ಸಮುದಾಯಕ್ಕೆ ಶೇ ೧ ರಷ್ಟು ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕೆಂದು ಕ್ರಾಂತಿಚಕ್ರ ಬಳಗ ಒತ್ತಾಯಿಸಿದೆ ಎಂದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.